Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Shivakumara Swamiji: Last rites to be performed on today, here are the details

ಕ್ರಿಯಾ ಸಮಾಧಿ ಸ್ಥಳ ತಲುಪಿದ ಶ್ರೀಗಳ ಅಂತಿಮಯಾತ್ರೆ, ಸಕಲ ಸರ್ಕಾರಿ ಗೌರವ ಸಲ್ಲಿಕೆ

Hardik Pandya-Virat Kohli

ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಹಾರ್ದಿಕ್ ಅಲಭ್ಯ, ಭಾರೀ ಹಿನ್ನಡೆ: ಕೊಹ್ಲಿ

Truth of Beti Bachao Beti Padhao: 56 Percent funds spent on publicity Says Reports

'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯ ಶೇ.56ರಷ್ಟು ಹಣ ಜಾಹಿರಾತಿಗೇ ಖರ್ಚು!

ಪ್ರತಿಪಕ್ಷಗಳು ಕೋಲ್ಕತಾ ರ್ಯಾಲಿಯಲ್ಲಿ 'ಭಾರತ್ ಮಾತಾ ಕಿ ಜೈ' ಹೇಳಿಲ್ಲ: ಅಮಿತ್ ಶಾ

Yashwant Sinha throws hat for PM

ಬೆಳೆಯುತ್ತಿದೆ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿ, ರೇಸ್ ಗೆ ಯಶ್ವಂತ್ ಸಿನ್ಹಾ ಹೊಸ ಎಂಟ್ರಿ

Family throws infant into lake over suspicion of being possessed by evil spirits in UP

ದುಷ್ಟ ಶಕ್ತಿಗಳು ಆವರಿಸಿವೆ ಎಂದು ಮಗುವನ್ನು ಕೆರೆಗೆ ಹಾಕಿದ ಕುಟುಂಬ!

Modi never sold tea, just a gimmick to gain sympathy, says Praveen Togadia

ಮೋದಿ ಚಹಾ ಮಾರಿಲ್ಲ, ಅದು ಅನುಕಂಪ ಗಿಟ್ಟಿಸಲು ಮಾಡಿದ ಗಿಮಿಕ್: ಪ್ರವೀಣ್ ತೊಗಾಡಿಯಾ

ಸಂಗ್ರಹ ಚಿತ್ರ

ಜಗತ್ತಿನಲ್ಲೇ ಇದು ಅದ್ಭುತ ಕ್ಯಾಚ್ ಪ್ರಯತ್ನ; ಟ್ವೀಟರಿಗರು ಫಿದಾ, ವಿಡಿಯೋ ವೈರಲ್!

Kareena Kapoor Khan

ನಾನು ರಾಜಕೀಯ ಮಾಡಲ್ಲ, ಚಿತ್ರರಂಗವೇ ನನಗೆಲ್ಲಾ: ಕರೀನಾ ಕಪೂರ್ ಖಾನ್ ಸ್ಪಷ್ಟನೆ

Watch: Brendon McCullum

ವಿಡಿಯೋ: ಮೆಕ್ಕಲಂ ಅದ್ಭುತ ಫೀಲ್ಡಿಂಗ್ ಗೆ ಅಂಪೈರ್ ಗಳೇ ದಂಗು..!

Tejas

ತೇಜಸ್ ಗೆ ಮತ್ತಷ್ಟು ಬಲ: ಶತ್ರು ಪಾಳಯವನ್ನು ಟಾರ್ಗೆಟ್ ಮಾಡುವ ಮತ್ತೊಂದು ಅಸ್ತ್ರ ಅಳವಡಿಕೆ!

Virat Kohli

ಕೊಹ್ಲಿ ಹ್ಯಾಟ್ರಿಕ್ ಸಾಧನೆ: ಐಸಿಸಿ ವರ್ಷದ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ಕೊಹ್ಲಿ ನಾಯಕ!

India at 54th position in the list of world’s most innovative countries

ಜಾಗತಿಕ ಆವಿಷ್ಕಾರ ಸೂಚ್ಯಂಕ: 54ನೇ ಸ್ಥಾನಕ್ಕೆ ಜಿಗಿದ ಭಾರತ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಸುದೀಪ್, ಧನುಷ್ ತಮಿಳಿನಲ್ಲಿ ಒಟ್ಟಿಗೆ ನಟನೆ?

Sudeep and Dhanush

ಸುದೀಪ್-ಧನುಷ್

ಕನ್ನಡದ ಅತ್ಯುತ್ತಮ ನಟ ಎಂದು ಕರೆಯಲ್ಪಡುವ ಸುದೀಪ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ಹೆಸರುವಾಸಿ. ತೆಲುಗಿನ ಈಗ ಚಿತ್ರದಿಂದ ಪ್ರೇಕ್ಷಕರ ಮನಗೆದ್ದ ಸುದೀಪ್ ಬೇರೆ ಭಾಷೆಯ ಚಿತ್ರರಂಗದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಕೂಡ ಇಷ್ಟವಾಗಿದ್ದಾರೆ.

ಈ ವರ್ಷ ಹಾಲಿವುಡ್ ಚಿತ್ರ ರೈಸನ್ ನಲ್ಲಿ ಸುದೀಪ್ ನಟಿಸುತ್ತಿದ್ದಾರೆ. ವೈಜ್ಞಾನಿಕ ಕಾಲ್ಪನಿಕ ಚಿತ್ರವಾಗಿರುವ ರೈಸನ್ ನ್ನು ಎಡ್ಡಿ ಆರ್ಯ ನಿರ್ದೇಶಿಸುತ್ತಿದ್ದಾರೆ.  ಈ ಮಧ್ಯೆ ತೆಲುಗಿನಲ್ಲಿ ಅತ್ಯಂತ ಸುದ್ದಿ ಮಾಡಿರುವ ಉಯ್ಯಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇವೆಲ್ಲದರ ನಡುವೆ ತಮಿಳಿನಿಂದ ದೊಡ್ಡ ಪ್ರಾಜೆಕ್ಟ್ ವೊಂದಕ್ಕೆ ಸುದೀಪ್ ಅವರಿಗೆ ಆಫರ್ ಬಂದಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ತಮಿಳಿನ ಖ್ಯಾತ ನಟ ರಜನಿಕಾಂತ್ ಅವರ ಅಳಿಯ ಧನುಷ್ ಅವರ ನಿರ್ದೇಶನದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ಧನುಷ್ ನಟಿಸಿ ನಿರ್ದೇಶಿಸಲಿದ್ದಾರಂತೆ. ತಮಿಳು ನಟ ವಿಜಯ್ ಅವರ ಮರ್ಸೆಲ್ ಚಿತ್ರಕ್ಕೆ ಬಂಡವಾಳ ಹಾಕಿದ್ದ ತೆನಂಡಲ್ ಸ್ಟುಡಿಯೋಸ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆಯಂತೆ. ಈ ವರ್ಷವೇ ಪ್ರಾಜೆಕ್ಟ್ ಆರಂಭವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಧನುಷ್ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದು ಸುದೀಪ್ ಅವರಿಗೆ ಕಥೆ ಹೇಳಿದ್ದಾರಂತೆ. ಸುದೀಪ್ ಅವರು ಚಿತ್ರದ ಕಥೆ ಹಾಗೂ ತಮ್ಮ ಪಾತ್ರವನ್ನು ಒಪ್ಪಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನೂ ಶೀರ್ಷಿಕೆಯಿಡದ ಈ ಚಿತ್ರದ  ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಸ್ವಾತಂತ್ರ್ಯಪೂರ್ವ ಕಾಲದ ಸೆಟನ್ನು ಚಿತ್ರೀಕರಣಕ್ಕೆ ಹಾಕಲಾಗುತ್ತಿದೆಯಂತೆ. ಬೇರೆ ಪ್ರಾಜೆಕ್ಟ್ ಗಳಲ್ಲಿ ಧನುಷ್ ಬ್ಯುಸಿಯಾಗಿದ್ದರೂ ಕೂಡ ಈ ಚಿತ್ರದ ಕೆಲಸ ಆರಂಭಿಸಲಿದ್ದಾರಂತೆ. ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದ್ದು ಅಧಿಕೃತ ಘೋಷಣೆ ಬಾಕಿಯಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ಸುದೀಪ್ ಕನ್ನಡ ಚಿತ್ರಗಳಲ್ಲಿ ಕೂಡ ಬ್ಯುಸಿಯಾಗಿದ್ದಾರೆ. ಪ್ರೇಮ್ ಅವರ ವಿಲನ್ ಸಿನಿಮಾದ ಸಂಭಾಷಣೆ ಭಾಗವನ್ನು ಮುಗಿಸಿದ್ದಾರೆ. ಇನ್ನೆರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಅಂಬರೀಷ್ ನಟನೆಯ ಅಂಬಿ ನಿಂಗೆ ವಯಸ್ಸಾಯ್ತೊ ಸಿನಿಮಾವನ್ನು ಸುದೀಪ್ ತಮ್ಮ ಬ್ಯಾನರ್ ನಡಿ ಜಾಕ್ ಮಂಜು ಅವರ ಜೊತೆ  ನಿರ್ಮಿಸುತ್ತಿದ್ದಾರೆ.

ಪವರ್ ಪಂಡಿ ಚಿತ್ರದಿಂದ ಸ್ಪೂರ್ತಿ ಪಡೆದುಕೊಂಡು ಈ ಸಿನಿಮಾ ಮಾಡುತ್ತಿದ್ದು ಅಂಬರೀಷ್ ಯುವಕನ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ನಂತರ ಎಸ್.ಕೃಷ್ಣಾ ಅವರ ಪೈಲ್ವಾನ ಮತ್ತು ಸೂರಪ್ಪ ಬಾಬು ಅವರ ಕೋಟಿಗೊಬ್ಬ  3 ಸಿನಿಮಾದಲ್ಲಿ ಕೂಡ ಸುದೀಪ್ ನಟಿಸಲಿದ್ದಾರೆ.
Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Sudeep, Dhanush, Tamil, Film, ಸುದೀಪ್, ಧನುಷ್, ತಮಿಳು, ಸಿನಿಮಾ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS