Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ರೋಷನ್ ಬೇಗ್

ಐಎಂಎ ಪ್ರಕರಣ: ಶಿವಾಜಿನಗರ ಶಾಸಕ ರೋಷನ್ ಬೇಗ್ ಎಸ್ಐಟಿ ವಶಕ್ಕೆ

Chandrayaan 2

ಮುಂದಿನ ಚಂದ್ರಯಾನ-2 ಉಡಾವಣಾ ದಿನಾಂಕ ಬುಧವಾರ ಘೋಷಣೆ!

Karnataka crisis: Congress MLA

ಕಾಂಗ್ರೆಸ್ ಶಾಸಕಾಂಗ ಸಭೆ: ಪ್ರತಿಪಕ್ಷದಲ್ಲಿ ಕುಳಿತು ಕೆಲಸ ಮಾಡಲು 'ಕೈ' ಶಾಸಕರ ಒಲವು

NIA Amendment Bill passed in Lok Sabha, Shah says Modi government will never misuse law

ಲೋಕಸಭೆಯಲ್ಲಿ ಎನ್ಐಎ ತಿದ್ದುಪಡಿ ಮಸೂದೆ ಅಂಗೀಕಾರ: ಮೋದಿ ಸರ್ಕಾರ ಕಾನೂನು ದುರುಪಯೋಗ ಮಾಡಲ್ಲ-ಅಮಿತ್ ಶಾ

WATCH | Will return to India in 24 hours, says IMA scam mastermind Mansoor Khan in fresh video

24 ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ ಬರಲು ಸಿದ್ಧ​, ಪೊಲೀಸರು ರಕ್ಷಣೆ ಕೊಡ್ತಾರಾ?: ಮನ್ಸೂರ್​ ಖಾನ್

Jimmy Neesham

ಕ್ರೀಡೆಗಿಂತ ಬೇಕರಿ ಕೆಲಸ ಉತ್ತಮ: ವಿಶ್ವಕಪ್ ಪರಾಜಿತ ನ್ಯೂಜಿಲ್ಯಾಂಡ್ ಕ್ರಿಕೆಟಿಗನ ನೋವಿನ ಮಾತು!

ಸಂಗ್ರಹ ಚಿತ್ರ

ಜೀವದ ಹಂಗು ತೊರೆದು ಭಾರತೀಯ ಯೋಧರು ಹೊಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬಾಲಕಿ ರಕ್ಷಣೆ: ವಿಡಿಯೋ ವೈರಲ್

Kriti Kharbanda

ಗಾಯಗೊಂಡ ಗೂಗ್ಲಿ ಬೆಡಗಿ ಕೃತಿ ಕರಬಂಧ

Judge seeks six months

ಬಾಬರಿ ಮಸೀದಿ ಧ್ವಂಸ ಪ್ರಕರಣ: ವಿಚಾರಣೆ ಮುಕ್ತಾಯಕ್ಕೆ 6 ತಿಂಗಳ ಕಾಲಾವಕಾಶ ಕೊಡಿ-ವಿಶೇಷ ನ್ಯಾಯಾಧೀಶರಿಂದ ಸುಪ್ರೀಂಗೆ ಮೊರೆ

ಕೊಹ್ಲಿ-ರವಿಶಾಸ್ತ್ರಿ

ವಿಶ್ವಕಪ್‌ನಿಂದ ಟೀಂ ಇಂಡಿಯಾ ಔಟ್: ಹೊಸದಾಗಿ ಅರ್ಜಿಗೆ ಆಹ್ವಾನ, ಕೋಚ್ ರವಿಶಾಸ್ತ್ರಿಗೆ ಕೊಕ್ ಕೊಡ್ತಾರಾ?

ಸಂಗ್ರಹ ಚಿತ್ರ

ಅನೈತಿಕ ಸಂಬಂಧ ಶಂಕೆ: ಮಾಡೆಲ್ ಮುಖ ಕಲ್ಲಿನಿಂದ ಜಜ್ಜಿ ಪ್ರಿಯಕರನಿಂದಲೇ ಭೀಕರ ಕೊಲೆ!

International tribunal slaps $5 billion penalty on Pakistan in Reko Diq mining lease case

ಪಾಕ್ ಗೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದಿಂದ 5.976 ಶತಕೋಟಿ ಡಾಲರ್ ದಂಡ

ಸೈಮನ್ ಟಫೆಲ್

ವಿಶ್ವಕಪ್ ಫೈನಲ್: ಅಂಪೈರ್ ಕೆಟ್ಟ ತೀರ್ಪಿಗೆ ಕಿಡಿಕಾರಿದ ಮಾಜಿ ಅಂಪೈರ್ ಸೈಮನ್ ಟಫೆಲ್, ಈ ವಿಡಿಯೋದಲ್ಲಿ ಏನಿದೆ?

ಮುಖಪುಟ >> ಅಂಕಣಗಳು

ಸ್ಥಿರವಾಗಿದ್ದ ಷೇರು ಮಾರುಕಟ್ಟೆ ದಿಢೀರ್ ಕುಸಿತಕ್ಕೆ ಕಾರಣಗಳೇನು?

ಹಣಕ್ಲಾಸು- 93
Hanaclassu: Factors behind the biggest Sensex fall in decade

ಸ್ಥಿರವಾಗಿದ್ದ ಷೇರು ಮಾರುಕಟ್ಟೆ ದಿಡೀರ್ ಕುಸಿತಕ್ಕೆ ಕಾರಣಗಳೇನು?

ಕಳೆದ ಒಂದು ವಾರದಿಂದ ಭಾರತೀಯ ಷೇರು ಮಾರುಕಟ್ಟೆ ಸತತ ಕುಸಿತ ಕಂಡಿದೆ. 9 ನೇ ಜುಲೈ 2016 ನಿಫ್ಟಿಯಲ್ಲಿನ ಕುಸಿತ 2016 ರ ನಂತರ ಒಂದೇ ದಿನದಲ್ಲಿ ಕಂಡ ಮಹಾ ಕುಸಿತ ಎನ್ನುವ ಪಟ್ಟವನ್ನ ಪಡೆದುಕೊಂಡಿತು. ಹಾಗೆ ನೋಡಲು ಹೋದರೆ 2016 ರಿಂದ ಇತ್ತೀಚಿನವರೆಗೆ ಷೇರು ಪೇಟೆ ಇಂತಹ ತಲ್ಲಣ ಕಂಡಿದ್ದೆ ಇಲ್ಲ.

ಕೇಂದ್ರ ಸರಕಾರದಲ್ಲಿ ಸ್ಥಿರ ಸರಕಾರ ಬಂದರೆ ಮುಂದಿನ ಆರು ಅಥವಾ ಎಂಟು ತಿಂಗಳಲ್ಲಿ ಷೇರು ಪೇಟೆಯಲ್ಲಿನ ಹೂಡಿಕೆಯ ಮೇಲೆ ಉತ್ತಮ ಲಾಭ ನಿರೀಕ್ಷಿಸಬಹದು ಎನ್ನುವುದನ್ನ ಹಣಕ್ಲಾಸು ಅಂಕಣದಲ್ಲಿ ಬರೆದಿದ್ದೆ. ಹತ್ತಾರು ವರ್ಷದ ಮಾರುಕಟ್ಟೆ ವರ್ತನೆಯಿಂದ ಅಳೆದು ತೂಗಿ ಈ ರೀತಿ ಬರೆಯಲಾಗಿತ್ತು. ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು ತಿಂಗಳು ಕೂಡ ಕಳೆದಿಲ್ಲ ಆಗಲೇ ಷೇರು ಮಾರುಕಟ್ಟೆ 3 ರ್ಷದಲ್ಲಿ ಕಾಣದ ಕುಸಿತಕ್ಕೆ ಕಾರಣವಾಗಿದೆ. ಬಜೆಟ್ ಘೋಷಣೆಯಾದ ನಂತರ ಹತ್ತಿರಹತ್ತಿರ ಐದು ಲಕ್ಷ ಕೋಟಿ ಹೂಡಿಕೆದಾರರ ಹಣ ಕರಗಿ ಹೋಗಿದೆ. ಹೀಗಾಗಲು ಕಾರಣಗೆಳೇನು ಇರಬಹದು? ಎನ್ನುವುದನ್ನ ಈ ಲೇಖನದಲ್ಲಿ ವಿವರಿಸಲಾಗುವುದು. ಜೊತೆಗೆ ಹಣಕ್ಲಾಸು ಹಳೆಯ ಅಂಕಣದಲ್ಲಿ ಸ್ಥಿರ ಕೇಂದ್ರ ಸರಕಾರ ಬಂದರೆ ಆರೇಳು ತಿಂಗಳಲ್ಲಿ ಉತ್ತಮ ಲಾಭ ನಿರೀಕ್ಷಿಸಬಹದು ಎಂದದ್ದು ಸುಳ್ಳೇನಲ್ಲ ಎನ್ನುವುದನ್ನ ಕೂಡ ಉದಾಹರಣೆಯ ಮೂಲಕ ತಿಳಿಸಲಾಗುವುದು. 

ಕಳೆದ ಮೂರು ವರ್ಷದಿಂದ ಸ್ಥಿರವಾಗಿದ್ದ ಷೇರು ಮಾರುಕಟ್ಟೆ ಏಕಾಏಕಿ ಕುಸಿಯಲು ಕಾರಣವೇನು? 

ಗಮನಿಸಿ ಸ್ಥಿರತೆ ಎನ್ನುವುದು ನೀರಿನ ಮೇಲಿನ ಗುಳ್ಳೆಯಿದ್ದಂತೆ. ಎಲ್ಲೆಲ್ಲಿ ಲಕ್ಷಾಂತರ ಜನರು ಸೇರುತ್ತಾರೆ ಅಲ್ಲಿ ಸ್ಥಿರತೆಯನ್ನ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಹೂಡಿಕೆದಾರನ ಬೇಕು ಬೇಡಗಳು ಭಿನ್ನವಾಗಿರುತ್ತವೆ. ಹೀಗಾಗಿ ಯಾರು ಏಕೆ ಮತ್ತು ಯಾವಾಗ ತಮ್ಮ ಷೇರನ್ನ ಮಾರಲು ತೊಡಗುತ್ತಾರೆ ಹೇಳಲು ಬಾರದು. ಸಾವಿರಾರು ಜನ ಒಂದೇ ತಾಸಿನಲ್ಲಿ ಷೇರು ಮಾರಾಟಕ್ಕೆ ಇಳಿದರೆ ಅದೊಂದು ಸಮೂಹ ಸನ್ನಿಯನ್ನ ಸೃಷ್ಟಿಸುತ್ತದೆ. ಹೂಡಿಕೆದಾರ ಪ್ಯಾನಿಕ್ ಗೆ ಒಳಗಾಗುತ್ತಾನೆ. ಅಲ್ಪಸ್ವಲ್ಪವಾದರೂ ತನ್ನ ಹೂಡಿಕೆಯ ಮೇಲಿನ ನಷ್ಟ ಕಡಿಮೆಯಾಗಲಿ ಎನ್ನುವ ಉದ್ದೇಶದಿಂದ ನಷ್ಟದಲ್ಲಿ ಮಾರಿ ಹೊರಬರುತ್ತಾನೆ. ಮತ್ತೊಮ್ಮೆ ಗಮನಿಸಿ ಇದೊಂದು ಆ ಕ್ಷಣದ ನಿರ್ಧಾರ. ಇವೆಲ್ಲ ತಾತ್ಕಾಲಿಕ. ಮಾರುಕಟ್ಟೆಯಲ್ಲಿ ಕೊನೆಯ ತನಕ ನಿಂತವನು ವಿಜಯದ ನಗೆ ಬಿರುತ್ತಾನೆ ಖಂಡಿತ. ಇರಲಿ. ಮಾರುಕಟ್ಟೆಯಲ್ಲಿ ಇಂತಹ ಪ್ಯಾನಿಕ್ ಉಂಟುಮಾಡಲು ತಾತ್ಕಾಲಿಕ ಕಾರಣಗಳು ಹೀಗಿವೆ. 

  1. ಈ ಬಾರಿಯ ಕೇಂದ್ರ ಸರಕಾರದ ಬಜೆಟ್ ಇದೆ ವರ್ಷ ಫೆಬ್ರವರಿಯಲ್ಲಿ ಮಂಡಿಸಿದ ಇಂಟಿರೀಮ್ ಬಜೆಟ್ ನ ಮುಂದುವರೆದ ಭಾಗ. ಬಜೆಟ್ ನಲ್ಲಿ ಹೊಸತೇನು ಇರಲಿಲ್ಲ. ಫೆಬ್ರವರಿಯಲ್ಲಿ ಮಂಡನೆಯಾದ ಹಲವು ಹತ್ತು ವಿಷಯಗಳನ್ನ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವ ಹೇಳಿಕೆ ಬಿಟ್ಟು. ಮನುಷ್ಯನ ಮೂಲಭೂತ ಸ್ವಭಾವವೇ ಹಾಗೆ ನಿನ್ನೆ ಕೊಟ್ಟ ಯಾವುದೇ ಸೌಲಭ್ಯ ಆತ ಮರೆತು ಬಿಡುತ್ತಾನೆ. ಇಂದೇನು? ಹೊಸತೇನು? ಎನ್ನುವುದು ಆತನ ಸ್ವಭಾವ. ಆ ನಿಟ್ಟಿನಲ್ಲಿ ಬಜೆಟ್ ಷೇರು ಮಾರುಕಟ್ಟೆಯನ್ನ ಉತ್ತೇಜಿಸುವಲ್ಲಿ ವಿಫಲವಾಗಿದೆ. 
  2. ಫಾರಿನ್ ಪೋರ್ಟ್ಫೋಲಿಯೋ ಇನ್ವೆಸ್ಟ್ಮೆಂಟ್ ಮೇಲೆ ಬರುವ ಆದಾಯದ ಮೇಲೆ ಸರ್ಚಾರ್ಜ್ ಹೆಚ್ಚಳ ಮಾಡಿರುವುದು ಈ ವಲಯದಲ್ಲಿ ಹೂಡಿಕೆ ಮಾಡಿದ್ದವರು ಹಣವನ್ನ ವಾಪಸ್ಸು ತೆಗೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ಹೂಡಿಕೆಯ ಮೇಲಿನ ಆದಾಯ 6 ರಿಂದ 7 ಪ್ರತಿಶತ ಇದ್ದರೂ ಅದನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋಲಿಕೆ ಮಾಡಿದಾಗ ಗಳಿಕೆಯ ಸಂಖ್ಯೆ 2 ಅಥವಾ 3 ಪ್ರತಿಶತವಷ್ಟೇ. ಏಕೆಂದರೆ ವಿದೇಶಿ ವಿನಿಮಯದಲ್ಲಿನ ಬದಲಾವಣೆಗಳು ಮತ್ತು ಹಣ ವರ್ಗಾವಣೆಯಲ್ಲಿ ಆಗುವ ಕಡಿತ. ಇಲ್ಲಿನ ತೆರಿಗೆ ಎಲ್ಲವನ್ನೂ ತೆಗೆದ ಮೇಲೆ ಉಳಿಯುವುದು ಬಹಳ ಕಡಿಮೆ. ಹೀಗಾಗಿ 6 /7 ಪ್ರತಿಶತ ಆದಾಯ 2/3 ಪ್ರತಿಶತಕ್ಕೆ ಇಳಿಯುತ್ತದೆ. ಗಾಯದ ಮೇಲೆ ಬರಿಯ ಎಳೆದಂತೆ ಆದಾಯದ ಮೇಲೆ ಹಾಕಿರುವ ಸರ್ಚಾರ್ಜ್ FDI  ಹೂಡಿಕೆದಾರರನ್ನ ತಮ್ಮ ಬಂಡವಾಳ ಅಥವಾ ಹೂಡಿಕೆಯನ್ನ ಹಿಂಪಡೆಯಲು ಪ್ರೇರೇಪಿಸಿದೆ. ಇದರ ಪರಿಣಾಮ ಮಾರುಕಟ್ಟೆ ಇನ್ನಿಲ್ಲದಂತೆ ನೆಲ ಕಚ್ಚಿದೆ. 
  3. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತೊಂದು ಹೊಸ ವಂಚನೆ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಬ್ಯಾಂಕುಗಳ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಕುಸಿತ ಕಂಡಿದೆ. ಜನರಲ್ಲಿ ಬ್ಯಾಂಕ್ ಶೇರ್ ಗಳ ಮೇಲಿದ್ದ ನಂಬಿಕೆ ಬಹಳ ಕಡಿಮೆಯಾಗಿದೆ. ಹೂಡಿಕೆದಾರರ ಮನಸಿನ್ನಲ್ಲಿ ಇನ್ನೆಷ್ಟು ಅನುತ್ಪಾದಕ ಆಸ್ತಿಯಿದೆಯೂ ಯಾರಿಗೆ ಗೊತ್ತು? ಇನ್ನೆಷ್ಟು ವಂಚನೆ ಪ್ರಕಾರಗಳು ಬೆಳಕಿಗೆ ಬರದೆ ತೆರೆಯ ಮರೆಯಲ್ಲಿ ಇದೆಯೋ? ಎನ್ನುವ ಸಂಶಯ ಶುರುವಾಗಿದೆ. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರದ ಷೇರುಗಳ ಬೆಲೆ ನೆಲ ಕಚ್ಚಿದೆ. ಒಟ್ಟು ಮಾರುಕಟ್ಟೆಯ ಮೌಲ್ಯ ಕುಸಿಯುವಲ್ಲಿ ಇವುಗಳು ಕೂಡ ತಮ್ಮದೇ ಆದ ದೇಣಿಗೆ ನೀಡಿವೆ. 
  4. ಫೆಡರಲ್ ಬಡ್ಡಿ ದರ ಅಮೆರಿಕಾ ಬ್ಯಾಂಕಿನ ಆಂತರಿಕ ವ್ಯವಹಾರ ಅನ್ನುವಂತಿಲ್ಲ ಏಕೆಂದರೆ ಅಮೆರಿಕಾ ಫೆಡರಲ್ ಬಡ್ಡಿ ದರವನ್ನ ಏರಿಸಿದರೆ ಎಮರ್ಜಿಂಗ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ವಿದೇಶಿಯರು ತಕ್ಷಣ ಹಣವನ್ನ ಇಲ್ಲಿಂದ ತೆಗೆದು ಅಮೇರಿಕಾ ದಲ್ಲಿ ಮರು ಹೂಡಿಕೆ ಮಾಡುತ್ತಾರೆ. ಕೊನೆಗೂ ಹೂಡಿಕೆದಾರ ನೋಡುವುದು ಸ್ಥಿರತೆ ಮತ್ತು ಹೆಚ್ಚಿನ ಲಾಭಂಶ . ಅದು ತಮ್ಮ ನೆಲದಲ್ಲಿ ಸಿಗುತ್ತದೆ ಎಂದರೆ ಅವರು ಪ್ರಥಮ ಆದ್ಯತೆಯನ್ನ ಅಮೆರಿಕಕ್ಕೆ ನೀಡುತ್ತಾರೆ . ಫೆಡರಲ್ ಬಡ್ಡಿ ದರ ಈ ವರ್ಷ ಇಲ್ಲಿಯವರೆಗೆ ಹೆಚ್ಚೇನು ಆಗಿಲ್ಲ . ಆದರೆ ಹೆಚ್ಚಾಗುತ್ತದೆ ಎನ್ನುವ ಊಹಾಪೋಹ ಮಾರುಕಟ್ಟೆಯನ್ನ ಅತಂತ್ರಗೊಳಿಸಲು ಸಾಕು . ಈಗ ಆಗಿರುವುದು ಕೂಡ ಇದೆ 
  5. ಖಾಸಗಿ ಪಬ್ಲಿಕ್ ಲಿಮಿಟೆಡ್ ಕಂಪೆನಿಗಳಲ್ಲಿ 25 ಪ್ರತಿಶತ ಇದ್ದ ಪಬ್ಲಿಕ್ ಹೋಲ್ಡಿಂಗ್ ಅನ್ನು 35 ಪ್ರತಿಶತಕ್ಕೆ ಏರಿರಿಸುವುದು ಮತ್ತೆ ಷೇರುಗಳ ಮರು ಕೊಳ್ಳುವಿಕೆಯ ಮೇಲೆ 20 ಪ್ರತಿಶತ ತೆರಿಗೆ ವಿಧಿಸಿರುವುದು ಕೂಡ ಕಾರ್ಪೊರೇಟ್ ವಲಯದಲ್ಲಿ ಅಂತಹ ಒಳ್ಳೆಯ ಭಾವವನ್ನ ಹುಟ್ಟಿಹಾಕಿಲ್ಲ. ಇಂದು ಜಾಗತಿಕ ಮಾರುಕಟ್ಟೆ ಇಂದೆಂದಿಗಿಂತಲೂ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಬಂಡವಾಳ ಹೂಡಿ , ತಯಾರಿಕೆ ಮಾಡಿ ಅದನ್ನ ಮಾರಿ ಕೂಡ ಲಾಭದ ಮುಖ ನೋಡುವುದು ದುಸ್ಸರ ಎನ್ನುವ ಸಮಯದಲ್ಲಿ ಇಂತಹ ನಿಬಂಧನೆಗಳು ಸಹಜವಾಗಿ ಬಂಡವಾಳಗಾರರ ಭಾವನೆಗೆ ಘಾಸಿ ಉಂಟುಮಾಡಿದೆ. ಇದರ ಪರಿಣಾಮ ಮಾರುಕಟ್ಟೆಯ ಮೇಲೂ ಆಗಿದೆ. 
  6. ಆಟೋಮೊಬೈಲ್ ಇಂಡಸ್ಟ್ರಿ ಸಂಕ್ರಮಣ ಕಾಲಘಟ್ಟದಲ್ಲಿದೆ. ಮಾರುತಿ ತನ್ನ ಉತ್ಪಾದನೆಯನ್ನ ಕಡಿತಗೊಳಿಸುವುದಾಗಿ ಹೇಳಿದೆ. 2020 ರ ನಂತರ ಡೀಸೆಲ್ ಕಾರುಗಳನ್ನ ಉಪಯೋಗಿಸಬಾರದು ಎನ್ನುವ ಕೂಗು ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಭರಾಟೆ ಇಲ್ಲಿನ ಮಾರುಕಟ್ಟೆಯನ್ನ ತಲ್ಲಣಗೊಳಿಸಿವೆ. ಇದು ಬದಲಾವಣೆಯ ಸಮಯ. ಮುಂದೇನು ಎನ್ನುವುದರ ನಿಖರತೆಯಿಲ್ಲದ ಸಮಯ. ಹೀಗಾಗಿ ಆಟೋಮೊಬೈಲ್ ಕ್ಷೇತ್ರದ ಷೇರುಗಳು ಕೂಡ ಕುಸಿತ ಕಂಡಿವೆ. ಸಹಜವಾಗಿ ಮಾರುಕಟ್ಟೆಯ ಒಟ್ಟು ಮೌಲ್ಯ ಕುಸಿಯಲು ಇವು ಕೂಡ ಜೊತೆಯಾಗಿವೆ. 
  7.  ಸಮಾಜದಲ್ಲಿ ಬಳಕೆಯ ಮೌಲ್ಯ ಕುಸಿದಿದೆ. ಅಂದರೆ ಕನ್ಸಮ್ಷನ್ ಕಡಿಮೆಯಾಗಿದೆ. ಕುಸಿದ ಬೇಡಿಕೆ ಮಟ್ಟವನ್ನ ಏರಿಸಲು ಬಜೆಟ್ ನಲ್ಲಿ ಯಾವುದೇ ವಿಶೇಷ ಸವಲತ್ತು ನೀಡಿಲ್ಲ. ಮೆಟ್ರೋ ಸಿಟಿಗಳಲ್ಲಿ ವಾಸಕ್ಕೆ ಯೋಗ್ಯ ಲಕ್ಷಾಂತರ ಫ್ಲಾಟ್ ಗಳು ರಿಯಾಲಿಟಿ ಕ್ಷೇತ್ರವನ್ನ ಕಂಗಾಲು ಮಾಡಿದೆ. ರಿಯಾಲಿಟಿ ಕ್ಷೇತ್ರ ಹಲವಾರು ವರ್ಷದಿಂದ ಚಿಗುರುವ ಲಕ್ಷಣಗಳು ಕಾಣುತ್ತಿಲ್ಲ. ಈ ಬಾರಿಯ ಬಜೆಟ್ ರಿಯಾಲಿಟಿ ಜೊತೆಗೆ ಇತರ ಕಾರ್ಯ ಕ್ಷೇತ್ರದಲ್ಲಿ ಕೂಡ ಕುಸಿಯ ಬೇಡಿಕೆಯ ಹೆಚ್ಚಿಸುವ ಯಾವ ಕಸರತ್ತು ಮಾಡಿಲ್ಲ. ಇದು ಕೂಡ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. 
ಸ್ಥಿರ ಕೇಂದ್ರ ಸರಕಾರ ಬಂದ ಆರೇಳು ತಿಂಗಳಲ್ಲಿ ಹೆಚ್ಚಿನ ಲಾಭ ಸಿಗಲಿದೆ ಎನ್ನುವ ವಿಶ್ಲೇಷಣೆಯ ಹೊರತಾಗಿ ಮಾರುಕಟ್ಟೆ ಕುಸಿದಿದೆ . ಇನ್ನು ಲಾಭ ಹೇಗೆ ಸಿಗುತ್ತದೆ? 

ಗಮನಿಸಿ ತಿಂಗಳ ಹಿಂದೆ ಹಣಕ್ಲಾಸು ಅಂಕಣದಲ್ಲಿ ಸ್ಥಿರ  ಕೇಂದ್ರ ಸರಕಾರ  ಷೇರು ಮಾರುಕಟ್ಟೆ ಬೆಳೆಯಲು ಸಹಕಾರ ಎನ್ನುವ ಲೇಖನದಲ್ಲಿ ಹೆಚ್ಚಿನ ಲಾಭಾಂಶ ನಿರೀಕ್ಷಿಸಬಹದು ಎಂದು ಬರೆದಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಇಷ್ಟೆಲ್ಲಾ ಕುಸಿತ ಕಂಡಿರುವುದು ಒಂದು ತಿಂಗಳಲ್ಲಿ. ಷೇರು ಮಾರುಕಟ್ಟೆಯಲ್ಲಿ ಕಾಯುವಿಕೆ ಬಹಳ ಮುಖ್ಯ. ವೇಳೆ ಕೂಡ ಬಹಳ ಮುಖ್ಯ. ಕುಸಿತದ ಭಯದಲ್ಲಿ ಮಾರಿಕೊಂಡವರು ನಷ್ಟ ಅನುಭವಿಸಿದ್ದಾರೆ. ತಾಳ್ಮೆಯಿಂದ ಕಾಯ್ದವರು ಮುಂದಿನ ಆರೇಳು ತಿಂಗಳಲ್ಲಿ ಖಂಡಿತ ಉತ್ತಮ ಫಲಿತಾಂಶ ಪಡೆಯುತ್ತಾರೆ. ಉದಾಹರಣೆ ನೋಡಿ ನೀವು ಕೊಂಡ ಶೇರನ್ನ 100 ರುಪಾಯ್ಗೆ ಕೊಂಡಿರಿ ಎಂದುಕೊಳ್ಳಿ ಅದರ ಇಂದಿನ ಮಾರುಕಟ್ಟೆ ಮೌಲ್ಯ 120 ರೂಪಾಯಿ ಎಂದುಕೊಳ್ಳಿ. ಇದನ್ನ ನೀವು ಮಾರದಿದ್ದರೆ 20 ರೂಪಾಯಿ ಲಾಭ ಕೇವಲ ಪುಸ್ತಕದಲ್ಲಿ ಅಥವಾ ಕಂಪ್ಯೂಟರ್ ಪರದೆಯಲ್ಲಿದೆ. ಅದು ನಿಜವಾದ ಲಾಭವಲ್ಲ ಇದನ್ನ ನೋಷನಲ್ ಪ್ರಾಫಿಟ್ ಎನ್ನುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಷೇರಿನ ಬೆಲೆ 80 ರೂಪಾಯಿ ಆಗಿದ್ದರೆ ಆಗ 20 ರೂಪಾಯಿ ನಷ್ಟವನ್ನ ನೋಷನಲ್ ಲಾಸ್ ಎನ್ನುತ್ತಾರೆ. ಎಲ್ಲಿಯವರೆಗೆ ನೀವು ಶೇರನ್ನ ಮಾರುವುದಿಲ್ಲ ಅಲ್ಲಿಯವರೆಗೆ ಅದು ನಿಜವಾದ ನಷ್ಟವಲ್ಲ. 

ಯಾರು ಪ್ಯಾನಿಕ್ ನಲ್ಲಿ ಮಾರಿದ್ದಾರೆ ಅವರಿಗೆ ನಿಜವಾದ ನಷ್ಟ ಉಂಟಾಗಿದೆ. ಯಾರು ಮಾರಿಲ್ಲ ಅವರಿಗೆ ಅದು ನೋಷನಲ್ ಲಾಸ್. ತಿಂಗಳುಗಳು ಕಳೆದಂತೆ ಮಾರುಕಟ್ಟೆ ಸಹಜ ಸ್ಥಿತಿಗೆ ಬರುತ್ತದೆ. ಆಗ ಇಂದಿನ ಲಾಸ್ ಮಾಯವಾಗಿ ಲಾಭವಾಗಿರುತ್ತದೆ. ಕಾಯುವ ತಾಳ್ಮೆ ಹೂಡಿಕೆದಾರನಿಗೆ ಇರಬೇಕು ಅಷ್ಟೇ. 

ಕೊನೆ ಮಾತು: ಬದುಕಿನಲ್ಲಿ ಏರಿಳಿತ ಇದ್ದದ್ದೇ ಹಾಗೆಯೇ ಮಾರುಕಟ್ಟೆಯಲ್ಲಿನ ತಲ್ಲಣಗಳು ಏರಿಳಿತಗಳು ಕೂಡ ಸಾಮಾನ್ಯ. ಎಲ್ಲರೂ ಮಾಡಿದರು ಎಂದು ನಾವು ಅದೇ ದಾರಿಯನ್ನ ತುಳಿದರೆ ನಷ್ಟ ಖಂಡಿತ. ಎಲ್ಲರೂ ಟೊಮೊಟೊ ಹಾಕಿದರೂ ಎಂದು ತಾವು ಹಾಕಿ ಕೈಸುಟ್ಟು ಕೊಂಡ ರೈತರ ಸಂಖ್ಯೆ ಹೆಚ್ಚು ಇಲ್ಲಿಯೂ ಹಾಗೆಯೇ. ಕೃಷಿಯಿರಲಿ, ಷೇರು ಮಾರುಕಟ್ಟೆಯಿರಲಿ ನಮ್ಮತನ ನಮ್ಮೊದ್ದಿಗಿದ್ದರೆ ಜಯ ಸಿಕ್ಕೇ ಸಿಗುತ್ತದೆ. 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಲೇಖಕರ ಕುರಿತು : ಕಳೆದ ಎರಡು ದಶಕದಿಂದ ಆಂತರಿಕ ಲೆಕ್ಕ ಪರಿಶೋಧಕರಾಗಿ ದುಬೈ ಮತ್ತು ಯೂರೋಪಿನ ವಿತ್ತ ಪ್ರಪಂಚದಲ್ಲಿ ಬದುಕು ಕಂಡು ಕೊಂಡಿರುವ ಶ್ರೀ. ರಂಗಸ್ವಾಮಿ ಮೂಕನಹಳ್ಳಿಯವರು ಹವ್ಯಾಸಿ ಬರಹಗಾರರು. ವೃತ್ತಿ ಮತ್ತು ಪ್ರವೃತ್ತಿಯ ಸಲುವಾಗಿ ಐವತ್ತಕ್ಕೂ ಹೆಚ್ಚು ದೇಶಗಳ ಸುತ್ತಿರುವ ಲೇಖಕರು ತಾವು ಕಂಡ ದೇಶಗಳಷ್ಟೇ ಅಲ್ಲದೆ ಜಗತ್ತಿನ ಆರ್ಥಿಕ ಸ್ಥಿತಿಗತಿ ಬಗ್ಗೆ ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿಗೆ ಲೇಖನಗಳ ಬರೆದಿದ್ದಾರೆ. ಇವರು ಕಂಡ ದೇಶಗಳ ಪ್ರವಾಸಿ ಕಥನ ತರಂಗ, ವಿಜಯ ನೆಕ್ಸ್ಟ್ ಮತ್ತು ಡಿಜಿಟಲ್ ಕನ್ನಡದಲ್ಲಿ ಲೇಖನ ಮತ್ತು ಸರಣಿ ರೂಪದಲ್ಲಿ ಪ್ರಕಟವಾಗಿವೆ. ಹಣಕ್ಲಾಸು ಕನ್ನಡಪ್ರಭ.ಕಾಮ್ ನಲ್ಲಿ ಪ್ರತಿ ಗುರುವಾರ ಪ್ರಕಟವಾಗುವ ಅಂಕಣ ಬರಹ.
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Hanaclassu, Sensex fall, ಹಣಕ್ಲಾಸು, ಷೇರು ಮಾರುಕಟ್ಟೆ ಕುಸಿತ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS