Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Around ten people dead, more than forty hospitalized after eating temple prasad in Chamarajanagar district

ಚಾಮರಾಜನಗರ 'ವಿಷ' ಪ್ರಸಾದ ದುರಂತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ, ಇಬ್ಬರ ಬಂಧನ

Ashok Gehlot is the new Chief Minister of Rajasthan, Sachin Pilot deputy CM

ಅಶೋಕ್ ಗೆಹ್ಲೋಟ್ ರಾಜಸ್ಥಾನ ಸಿಎಂ, ಸಚಿನ್ ಪೈಲಟ್ ಡಿಸಿಎಂ: ಎಐಸಿಸಿ ಅಧಿಕೃತ ಘೋಷಣೆ

Virat Kohli

ಜಿಗಿದು ಒಂದೇ ಕೈಯಲ್ಲಿ ಕೊಹ್ಲಿ ಅದ್ಭುತ ಕ್ಯಾಚ್; ನೆಟಿಗರು ಫಿದಾ, ವಿಡಿಯೋ ವೈರಲ್!

Modi spent about Rs 7200 crore on advertisements, foreign trips

ಮೋದಿ ವಿದೇಶ ಪ್ರವಾಸ, ಜಾಹೀರಾತಿಗಾಗಿ 7200 ಕೋಟಿ ರು. ಖರ್ಚು

Indian badminton players Saina Nehwal, Kashyap tie the knot

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೈನಾ ನೆಹ್ವಾಲ್ - ಪರುಪಳ್ಳಿ ಕಶ್ಯಪ್

Pakistan court tells government to free Indian national within a month

ಒಂದು ತಿಂಗಳಲ್ಲಿ ಭಾರತೀಯ ಪ್ರಜೆಯನ್ನು ಬಿಡುಗಡೆ ಮಾಡಿ: ಸರ್ಕಾರಕ್ಕೆ ಪಾಕ್ ಕೋರ್ಟ್ ಸೂಚನೆ

ಅಮಿತಾವ್ ಘೋಷ್

ಆಂಗ್ಲ ಭಾಷೆ ಕಾದಂಬರಿಕಾರ ಅಮಿತಾವ್ ಘೋಷ್ ಗೆ ಜ್ಞಾನ ಪೀಠ ಪ್ರಶಸ್ತಿ

ಕೇಂದ್ರೀಯ ಬ್ಯಾಂಕ್ ಆಡಳಿತ ಚೌಕಟ್ಟನ್ನು ಮತ್ತೊಮ್ಮೆ ಪರಿಶೀಲಿಸಲು ಆರ್ ಬಿಐ ಮಂಡಳಿ ಒಪ್ಪಿಗೆ!

ಕೇಂದ್ರೀಯ ಬ್ಯಾಂಕ್ ಆಡಳಿತ ಚೌಕಟ್ಟನ್ನು ಮತ್ತೊಮ್ಮೆ ಪರಿಶೀಲಿಸಲು ಆರ್ ಬಿಐ ಮಂಡಳಿ ಒಪ್ಪಿಗೆ!

Representational Image

ಬೆಳಗಾವಿ: ದೇಶದ ಮೊದಲ ಮಾದರಿ ರಸ್ತೆಗೆ ವಿಶ್ವಬ್ಯಾಂಕ್ ಮೆಚ್ಚುಗೆ

Rashmika Mandanna

ಜಲಮಾಲಿನ್ಯದ ಕುರಿತು ಜಾಗೃತಿಗಾಗಿ ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!

Bengaluru Metro purple line to be shut for repairs on December 22 and 23

'ನಮ್ಮ ಮೆಟ್ರೋ' ಪಿಲ್ಲರ್‌ನಲ್ಲಿ ಬಿರುಕು: ದುರಸ್ಥಿಗಾಗಿ ಡಿ.22, ಡಿ.23ರಂದು ಸಂಚಾರ ಸ್ಥಗಿತ

PM Narendra Modi

ಭಾನುವಾರ ಸೋನಿಯಾ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಭೇಟಿ, ಹಂಸಪರ್ ಎಕ್ಸ್ ಪ್ರೆಸ್ ಗೆ ಚಾಲನೆ

Mahinda Rajapakse

ಶ್ರೀಲಂಕಾ ಪ್ರಧಾನಮಂತ್ರಿ ಹುದ್ದೆಗೆ ರಾಜಪಕ್ಸೆ ರಾಜೀನಾಮೆ- ರಾಜಪಕ್ಸೆ ಪುತ್ರ ಹೇಳಿಕೆ

ಮುಖಪುಟ >> ಅಂಕಣಗಳು

ಏನಿದು ಬ್ಯುಸಿನೆಸ್ ವ್ಯಾಲ್ಯುವೇಶನ್? ಫ್ಲಿಪ್ ಕಾರ್ಟ್ ಅಷ್ಟೊಂದು ಬೆಲೆ ಬಾಳುತ್ತದೆಯೇ?

ಹಣಕ್ಲಾಸು-40
Hanaclassu: Know what is Business valuation, how it played important role in Flipkart-Walmart deal

ಏನಿದು ಬ್ಯುಸಿನೆಸ್ ವ್ಯಾಲ್ಯುವೇಶನ್? ಫ್ಲಿಪ್ ಕಾರ್ಟ್ ಅಷ್ಟೊಂದು ಬೆಲೆ ಬಾಳುತ್ತದೆಯೇ?

ಬಿಸಿನೆಸ್ ವ್ಯಾಲ್ಯುವೇಶನ್ ಅಥವಾ ವ್ಯವಹಾರ ಮೌಲ್ಯಮಾಪನ ಎನ್ನುವುದು ಕಾರ್ಪೊರೇಟ್ ಜಗತ್ತಿನಲ್ಲಿ ಅತಿ ಸಾಮಾನ್ಯವಾಗಿ ಕೇಳಿಬರುವ ಪದ. ಕಾರ್ಪೊರೇಟ್ ಸಂಸ್ಥೆಗಳು ವರ್ಷಕ್ಕೆ ಒಮ್ಮೆಯಾದರೂ ತಮ್ಮ ಸಂಸ್ಥೆಯ ಮೌಲ್ಯ ಎಷ್ಟಿರಬಹದು ಎಂದು ತಿಳಿಯಲು ವ್ಯಾಲ್ಯುವೇಶನ್ ಮಾಡಿಸುತ್ತಾರೆ. ಇವತ್ತಿನ ದಿನದಲ್ಲಿ ಈ ಪದವಂತೂ ಜನ ಸಾಮಾನ್ಯನನ್ನು ತಲುಪಿದೆ ಅದಕ್ಕೆ ಕಾರಣ ಅಮೆರಿಕಾದ ಸುಪ್ರಸಿದ್ಧ ವಾಲ್ ಮಾರ್ಟ್ ಸಂಸ್ಥೆ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಸಂಸ್ಥೆಯ 77 ಪ್ರತಿಶತ ಪಾಲುದಾರಿಕೆಯನ್ನ 16 ಬಿಲಿಯನ್ ಅಮೆರಿಕನ್ ಡಾಲರ್ ಕೊಟ್ಟು ಖರೀದಿಸಿದ್ದು, ಫ್ಲಿಪ್ ಕಾರ್ಟ್ ಸಂಸ್ಥೆಯ ಒಟ್ಟು ಮೌಲ್ಯ 20 ಬಿಲಿಯನ್ ಡಾಲರಿಗೂ ಹೆಚ್ಚು ಎನ್ನುವುದಾಗಿದೆ. 

ಈಗ ಸಹಜವಾಗೇ ಇದೇನಿದು ವ್ಯಾಲ್ಯುವೇಶನ್? ಈ ವ್ಯಾಲ್ಯುವೇಶನ್ ಅಂದರೆ ಮೌಲ್ಯವನ್ನ ಇಷ್ಟೇ ಎಂದು ಹೇಗೆ ನಿರ್ಧರಿಸುತ್ತಾರೆ? ಫ್ಲಿಪ್ ಕಾರ್ಟ್ ಸಂಸ್ಥೆ ಸಾವಿರಾರು ಕೋಟಿ ನಷ್ಟದಲ್ಲಿ ಇದ್ದರೂ ಅದರ ಮೌಲ್ಯವನ್ನ ಹೇಗೆ 20 ಬಿಲಿಯನ್ ಗೂ ಹೆಚ್ಚು ಎಂದು ನಿರ್ಧರಿಸಿದರು ಎನ್ನುವ ಕುತೊಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಇಂದಿನ ಹಣಕಾಸು ಅಂಕಣದಲ್ಲಿ ಆರಂಭದಿಂದ ಅಂದರೆ ಮೌಲ್ಯಮಾಪನ ಅಂದರೇನು ಎನ್ನುವುದರಿಂದ ಹಿಡಿದು ಫ್ಲಿಪ್ ಕಾರ್ಟ್ ಮೌಲ್ಯಮಾಪನದವರೆಗಿನ ವಿಷಯಗಳನ್ನ ತಿಳಿದುಕೊಳ್ಳೋಣ. 

ವ್ಯವಹಾರ ಮೌಲ್ಯಮಾಪನ ಅಥವಾ ಬಿಸಿನೆಸ್ ವ್ಯಾಲ್ಯುವೇಶನ್ ಎಂದರೇನು? 

ಒಂದು ಸಂಸ್ಥೆಯ ಒಟ್ಟು ಆರ್ಥಿಕ ಮೌಲ್ಯ ಅಥವಾ ಬೆಲೆ ಎಷ್ಟು ಎಂದು ಅಳೆಯುವ ಪ್ರಕ್ರಿಯೆಗೆ ವ್ಯವಹಾರ ಮೌಲ್ಯಮಾಪನ ಎನ್ನುತ್ತಾರೆ. ಸಾಮನ್ಯವಾಗಿ ಈ ರೀತಿಯ ಮೌಲ್ಯಮಾಪನವನ್ನ ಎಲ್ಲಾ ದೊಡ್ಡ ಸಂಸ್ಥೆಗಳು ವರ್ಷಕೊಮ್ಮೆ ಮಾಡಿಸಿಕೊಳ್ಳುತ್ತವೆ. ಈ ರೀತಿಯ ಮೌಲಿಮಾಪನ ಮಾಡಿಸಿಕೊಳ್ಳಲು ಪ್ರಮುಖ ಕಾರಣಗಳು:

  1.  ನಾಳೆ ಈ ಸಂಸ್ಥೆಯನ್ನ ಮಾರಬೇಕಂದರೆ ಎಷ್ಟಕ್ಕೆ ಮಾರಬಹದು ಅಥವಾ ಕೊಳ್ಳುವರಿಗೆ ಎಷ್ಟು ಬೆಲೆಯನ್ನ ಹೇಳಬೇಕು ಎನ್ನುವ ನಿಖರತೆಗಾಗಿ. 
  2.  ಹೊಸ ಪಾಲುದಾರ ಸಂಸ್ಥೆಗೆ ಬರುವುದಿದ್ದರೆ ಆತನಿಂದ ಎಷ್ಟು ಹಣವನ್ನ ಸಂಸ್ಥೆಗೆ ಪಡೆಯಬೇಕು ಎನ್ನುವುದನ್ನ ತಿಳಿಯಲು. 
  3. ಪಾಲುದಾರನೊಬ್ಬ ಸಂಸ್ಥೆಯಿಂದ ಬೇರ್ಪಡಲು ಬಯಸಿದರೆ ಆತನಿಗೆ ಎಷ್ಟು ಹಣ ನೀಡಿ ಹೊರಗೆ ಕಳಿಸಬೇಕು ಎಂದು ನಿರ್ಧರಿಸಲು. 
  4. ಹಾಗೂ ಸಂಸ್ಥೆಯ ಷೇರುದಾರರಿಗೆ ಸಂಸ್ಥೆಯ ಬೆಲೆ ಇಷ್ಟಿದೆ ಎಂದು ಹೇಳಲು, ಅಂದರೆ ಮೇಲಿನ ಮೂರು ಸನ್ನಿವೇಶವಿರದಿದ್ದರೂ ಸಾಮಾನ್ಯವಾಗಿ ವರ್ಷಕೊಮ್ಮೆ ಮಾಡಿಸಲಾಗುತ್ತದೆ. 

ವ್ಯಾಲ್ಯುವೇಶನ್ ಹೇಗೆ ಮಾಡಲಾಗುತ್ತದೆ? ಇದರಲ್ಲಿ ಎಷ್ಟು ವಿಧಗಳಿವೆ? 

ಮೌಲ್ಯಮಾಪನವನ್ನ ಹಲವು ರೀತಿಯಲ್ಲಿ ಮಾಡಬಹದು, ಇಲ್ಲಿ ಈಗ ಹೇಳಹೊರಟಿರುವ ವಿಧಗಳಷ್ಟೇ ಎಂದು ಹೇಳಲು ಬರುವುದಿಲ್ಲ. ಇವುಗಳು ಪ್ರಮುಖವಾಗಿ ಮತ್ತು ಅತ್ಯಂತ ಸಾಮನ್ಯವಾಗಿ ಮೌಲ್ಯಮಾಪನ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತದೆ ಅಷ್ಟೇ.  

ಮಾರ್ಕೆಟ್ ಕ್ಯಾಪಿಟಲೈಸೇಶನ್ ವಿಧಾನ:  ಒಂದು ಸಂಸ್ಥೆಯ ಎಲ್ಲಾ ಷೇರುದಾರರ ಬಳಿ ಇರುವ ಷೇರಿನ ಸಂಖ್ಯೆಯನ್ನ ಕೂಡಿಸಿ, ಷೇರು ಮಾರುಕಟ್ಟೆಯಲ್ಲಿ ಕೊನೆಯ ದಿನ ಇದ್ದ ಷೇರಿನ ಬೆಲೆಯಿಂದ ಗುಣಿಸಿದಾಗ ಬರುವ ಸಂಖ್ಯೆಯನ್ನ ಆ ಸಂಸ್ಥೆಯ ಮೌಲ್ಯ ಎಂದು ಕರೆಯಲಾಗುತ್ತದೆ. ಇದೊಂದು ಅತ್ಯಂತ ಸರಳ ವಿಧಾನವಾಗಿದೆ. ಉದಾಹರಣೆ ನೋಡಿ.  ರಾಮ ಸಂಸ್ಥೆಯ ಷೇರುದಾರರ ಬಳಿ ಇರುವ ಒಟ್ಟು ಷೇರಿನ ಸಂಖ್ಯೆ  1೦೦೦ ಎಂದುಕೊಳ್ಳಿ. ಷೇರು ಮಾರುಕಟ್ಟೆಯಲ್ಲಿ ರಾಮ ಸಂಸ್ಥೆಯ ಷೇರಿನ ಬೆಲೆ 25 ರೂಪಾಯಿ ಎಂದುಕೊಳ್ಳಿ. 1೦೦೦ವನ್ನ 25 ರಿಂದ ಗುಣಿಸಿದಾಗ ಬರುವುದು 25 ಸಾವಿರ. ಅಂದರೆ ರಾಮ ಸಂಸ್ಥೆಯ ಮೌಲ್ಯ 25 ಸಾವಿರ. 

ಆದಾಯ ಗುಣಿಸುವ ವಿಧಾನ: ಈ ವಿಧಾನದಲ್ಲಿ ಸಂಸ್ಥೆಯ ಆದಾಯವನ್ನ 1 ರಿಂದ 5 ರವರೆಗೆ ಸಂಸ್ಥೆ ಯಾವ ವ್ಯವಹಾರ ನೆಡೆಸುತ್ತಿದೆ ಎನ್ನುವ ಆಧಾರದ ಮೇಲೆ ಗುಣಿಸಲಾಗುತ್ತದೆ. ಹೀಗೆ ಬರುವ ಸಂಖ್ಯೆಯನ್ನ ಆ ಸಂಸ್ಥೆಯ ಮೌಲ್ಯ ಎನ್ನಲಾಗುತ್ತದೆ. ಉದಾಹರಣೆ ನೋಡೋಣ. ಒಂದು ಟೆಕ್ನಾಲಜಿ ಕಂಪನಿಯ ಒಟ್ಟು ಆದಾಯ (ರೆವೆನ್ಯೂ ) ಸಾವಿರ ರೂಪಾಯಿ ಎಂದುಕೊಳ್ಳಿ. ಟೆಕ್ ಕಂಪನಿಗಳ ವಿಶ್ವಾಸಾರ್ಹತೆ ಹೆಚ್ಚಾಗಿದೆ ಹೀಗಾಗಿ ಇದನ್ನ 3/4 ರಿಂದ ಗುಣಿಸಬಹದು. ಅಂದರೆ ಸಂಸ್ಥೆಯ ಮೌಲ್ಯ 3/4 ಸಾವಿರ ಎನ್ನಬಹದು. ಇಷ್ಟೇ ಆದಾಯ ಅಂದರೆ ಸಾವಿರ ರೂಪಾಯಿ ಆದಾಯ ಇರುವ ಸೇವೆ ನೀಡುವ ಸಂಸ್ಥೆಯ ಮೌಲ್ಯವನ್ನ ಗುಣಿಸಲು 0.5 ಅಥವಾ 1 ನ್ನು ಬಳಸಲಾಗುತ್ತದೆ. ಸರ್ವಿಸ್ ಇಂಡಸ್ಟ್ರಿಯಲ್ಲಿರುವ ತಲ್ಲಣಗಳು ಇದಕ್ಕೆ ಕಾರಣ. ಹೀಗಾಗಿ ಇವುಗಳ ಮೌಲ್ಯ ಆದಾಯಕ್ಕಿಂತ ಕಡಿಮೆ ಅಥವಾ ಆದಾಯದಷ್ಟೇ ಇರುತ್ತದೆ. 

ಲಾಭವನ್ನ ಗುಣಿಸುವ ವಿಧಾನ: ಎರಡನೇ ವಿಧಾನದಲ್ಲಿ ಆದಾಯವನ್ನ ಮೂಲವನ್ನಾಗಿ ಇರಿಸಿಕೊಳ್ಳಲಾಗಿತ್ತು. ಆದರೆ ಆದಾಯ ನಿಖರ ಲೆಕ್ಕ ನೀಡುವುದಿಲ್ಲ. ಕೆಲವೊಮ್ಮೆ ಆದಾಯಕ್ಕಿಂತ ಖರ್ಚು ಹೆಚ್ಚಿರುತ್ತದೆ. ಹೀಗಾಗಿ ಲಾಭವನ್ನ ಮೂಲವನ್ನಾಗಿ ಇರಿಸಿಕೊಳ್ಳಲಾಗುತ್ತದೆ. ಅಂದರೆ ಒಂದು ಟೆಕ್ ಸಂಸ್ಥೆಯ ಲಾಭ (ಆದಾಯದಿಂದ ಖರ್ಚನ್ನ ಕಳೆದು ಮಿಕ್ಕದ್ದು) ನೂರು ರೂಪಾಯಿ ಎಂದು ಕೊಂಡರೆ ಅದನ್ನ 3 ರಿಂದ ಗುಣಿಸಿದರೆ ಆ ಸಂಸ್ಥೆಯ ಮೌಲ್ಯ 3೦೦ ರೂಪಾಯಿ. 

ಡಿಸ್ಕೌಂಟೆಡ್ ಕ್ಯಾಶ್ ಫ್ಲೋ ಮೆಥಡ್: ಇದರಲ್ಲಿ ಮೂರನೇ ವಿಧಾನವಾದ ಲಾಭವನ್ನ ಗುಣಿಸುವ ವಿಧಾನವನ್ನ ಬಳಸಲಾಗುತ್ತದೆ, ಆದರೆ ಇಲ್ಲಿ ಮುಂಬರುವ ವರ್ಷಗಳ ಲಾಭವನ್ನ ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮುಂಬರುವ ವರ್ಷಗಳ ಲಾಭವನ್ನ ಲೆಕ್ಕ ಹಾಕುವಾಗ ಹಣದುಬ್ಬರವನ್ನ ಕೂಡ ಗಣನೆಗೆ ತೆಗೆದುಕೊಳ್ಳುವುದರಿಂದ ಸಹಜವಾಗೇ ಈ ವಿಧಾನದಲ್ಲಿ ಸಂಸ್ಥೆಯ ಮೌಲ್ಯ ಹೆಚ್ಚಾಗಿರುತ್ತದೆ. 

ಇವಲ್ಲದೆ, ಬುಕ್ ವ್ಯಾಲ್ಯೂ ವಿಧಾನ, ಲಿಕ್ವಿಡೇಷನ್ ವಿಧಾನ, ಬ್ರೇಕ್ ಅಪ್ ವ್ಯಾಲ್ಯೂ, ಅಸೆಟ್ ವ್ಯಾಲ್ಯುವೇಶನ್ ಹೀಗೆ ಇನ್ನೂ ಹಲವು ವಿಧಾನಗಳಿವೆ. 

ಸರಿ ಮೇಲಿನ ಯಾವುದೇ ವಿಧಾನದಲ್ಲಿ ಮೌಲ್ಯಮಾಪನ ಮಾಡಿದರೂ ಫ್ಲಿಪ್ ಕಾರ್ಟ್ ಗೆ ಅಷ್ಟು ಮೌಲ್ಯ ಸಿಗುವುದಾ? ಇದಕ್ಕೆ ಉತ್ತರ ಇಲ್ಲ. ಹಾಗಾದರೆ ಇಷ್ಟೊಂದು ಮೊತ್ತಕ್ಕೆ ವಾಲ್ ಮಾರ್ಟ್ ಏಕೆ ಖರೀದಿಸಿತು? ಎನ್ನುವುದನ್ನ ವಿವರವಾಗಿ ವಿವರಿಸಲು ಇನ್ನೊಂದು ಪ್ರತ್ಯೇಕ ಲೇಖನ ಬರೆಯಬೇಕಾದೀತು. ಮಾರುಕಟ್ಟೆಯನ್ನ ಆಕ್ರಮಿಸಲು ವಾಲ್ ಮಾರ್ಟ್ ಗೆ ಬೇಕಾಗಿದ್ದ ಲಾಂಚ್ ಪ್ಯಾಡ್ ಫ್ಲಿಪ್ ಕಾರ್ಟ್ ಒದಗಿಸಿಕೊಟ್ಟಿದೆ. ಹೀಗಾಗಿ ವಾಲ್ ಮಾರ್ಟ್ ಫ್ಲಿಪ್ ಕಾರ್ಟ್ ನ ವ್ಯಾಲ್ಯೂವೇಶನ್ ವಿಧಾನವಾದ ಗ್ರಾಸ್ ಮರ್ಚಂಡೈಸ್ ವಾಲ್ಯೂಮ್ (GMV) ವಿಧಾನದ ಮೌಲ್ಯವನ್ನ ಒಪ್ಪಿ ಕೊಟ್ಟಿದೆ. 

ಏನಿದು ಗ್ರಾಸ್ ಮರ್ಚಂಡೈಸ್ ವಾಲ್ಯೂಮ್ ವಿಧಾನ? 

ಈ ವಿಧಾನವನ್ನ e -ಕಾಮರ್ಸ್ ಸಂಸ್ಥೆಗಳ ಮೌಲ್ಯವನ್ನ ಅಳೆಯಲು ಬಳಸಲಾಗುತ್ತದೆ. ಇಲ್ಲಿ ಗ್ರಾಹಕನಿಗೆ ಮಾರಿದ ವಸ್ತುವಿನ ಬೆಲೆಯನ್ನ ಒಟ್ಟು ಎಷ್ಟು ವಸ್ತು ಮಾರಲಾಯಿತು ಅದರೊಂದಿಗೆ ಗುಣಿಸಿ ಬರುವ ಮೊತ್ತವನ್ನ ಮೌಲ್ಯ ಎನ್ನಲಾಗುತ್ತದೆ. 

ಉದಾಹರಣೆ ನೋಡಿ ಫ್ಲಿಪ್ ಕಾರ್ಟ್ ಹತ್ತು ಪುಸ್ತಕವನ್ನ ಒಂದಕ್ಕೆ ನೂರರಂತೆ ಮಾರಿದರೆ ಒಟ್ಟು ಮೊತ್ತ ಸಾವಿರವಾಯಿತು, ಹೀಗೆ ಮಾರಿದ ಎಲ್ಲಾ ವಸ್ತುಗಳ ಬೆಲೆಯನ್ನ ಒಟ್ಟುಗೂಡಿಸಿ ಅದನ್ನ ಆ ಸಂಸ್ಥೆಯ ಮೌಲ್ಯ ಎನ್ನಲಾಗಿದೆ. ಜೊತೆಗೆ ಇಲ್ಲಿ ರನ್ ರೇಟ್ ಅಂದರೆ ಮುಂಬರುವ ವರ್ಷಗಳಲ್ಲಿ ಈ ಸಂಸ್ಥೆ ಇನ್ನೆಷ್ಟು ಉತ್ಪನ್ನಗಳನ್ನ ಮಾರಬಹದು? ಎನ್ನುವುದನ್ನ ಕೂಡ ಅಂದಾಜಿಸಿ ಹಣದುಬ್ಬರವನ್ನ ಕೂಡ ಪರಿಗಣಿಸಿ ಮೌಲ್ಯವನ್ನ ನಿರ್ಧರಿಸಲಾಗುತ್ತದೆ.  ವಿಧಾನ ಯಾವುದೇ ಇರಲಿ ಕೊಳ್ಳುವ ಸಂಸ್ಥೆಗೆ ಮುಂಬರುವ ದಿನಗಳಲ್ಲಿ ತಾವು ಕೊಳ್ಳುತ್ತಿರುವ ಸಂಸ್ಥೆ ಲಾಭ ನೀಡುತ್ತದೆ ಎನ್ನುವ ಅಗಾಧ ನಂಬಿಕೆ, ಅಥವಾ ಕೊಂಡ ಮೇಲೆ ಆ ಸಂಸ್ಥೆಯನ್ನ ನೆಡೆಸಲು ಅವರ ಬಳಿ ಇರುವ ಅತ್ಯಂತ ನಿಖರ ಬಿಸಿನೆಸ್ ಪ್ಲಾನ್ ಮಾತ್ರವೇ ಕೇಳಿದಷ್ಟು ಹಣ ಕೊಟ್ಟು ಕೊಳ್ಳಲು ಪ್ರೇರೇಪಿಸುವ ಅಂಶ. ವಾಲ್ ಮಾರ್ಟ್ ಭಾರತದ ನೆಲದಲ್ಲಿ ಭದ್ರವಾಗಿ ನೆಲೆಯೂರಲು ಫ್ಲಿಪ್ ಕಾರ್ಟ್ ಒಂದು ದಾರಿ, ಆ ದಾರಿಯಲ್ಲಿ ಮುಂದಿನ ಪ್ರಯಾಣ ಹೇಗಿರುತ್ತದೆ? ಫ್ಲಿಪ್ ಕಾರ್ಟ್ ಗೆ ತೆತ್ತ ಹಣ ಸರಿಯೇ? ಇದಕ್ಕೆ ಕಾಲವೇ ಉತ್ತರ ಹೇಳಲಿದೆ.  

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಲೇಖಕರ ಕುರಿತು : ಕಳೆದ ಎರಡು ದಶಕದಿಂದ ಆಂತರಿಕ ಲೆಕ್ಕ ಪರಿಶೋಧಕರಾಗಿ ದುಬೈ ಮತ್ತು ಯೂರೋಪಿನ ವಿತ್ತ ಪ್ರಪಂಚದಲ್ಲಿ ಬದುಕು ಕಂಡು ಕೊಂಡಿರುವ ಶ್ರೀ. ರಂಗಸ್ವಾಮಿ ಮೂಕನಹಳ್ಳಿಯವರು ಹವ್ಯಾಸಿ ಬರಹಗಾರರು. ವೃತ್ತಿ ಮತ್ತು ಪ್ರವೃತ್ತಿಯ ಸಲುವಾಗಿ ಐವತ್ತಕ್ಕೂ ಹೆಚ್ಚು ದೇಶಗಳ ಸುತ್ತಿರುವ ಲೇಖಕರು ತಾವು ಕಂಡ ದೇಶಗಳಷ್ಟೇ ಅಲ್ಲದೆ ಜಗತ್ತಿನ ಆರ್ಥಿಕ ಸ್ಥಿತಿಗತಿ ಬಗ್ಗೆ ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿಗೆ ಲೇಖನಗಳ ಬರೆದಿದ್ದಾರೆ. ಇವರು ಕಂಡ ದೇಶಗಳ ಪ್ರವಾಸಿ ಕಥನ ತರಂಗ, ವಿಜಯ ನೆಕ್ಸ್ಟ್ ಮತ್ತು ಡಿಜಿಟಲ್ ಕನ್ನಡದಲ್ಲಿ ಲೇಖನ ಮತ್ತು ಸರಣಿ ರೂಪದಲ್ಲಿ ಪ್ರಕಟವಾಗಿವೆ. ಹಣಕ್ಲಾಸು ಕನ್ನಡಪ್ರಭ.ಕಾಮ್ ನಲ್ಲಿ ಪ್ರತಿ ಗುರುವಾರ ಪ್ರಕಟವಾಗುವ ಅಂಕಣ ಬರಹ.
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Hanaclassu, Flipkart-Walmart deal, Business valuation, ಫ್ಲಿಪ್ ಕಾರ್ಟ್-ವಾಲ್ಮಾರ್ಟ್, ಬ್ಯುಸಿನೆಸ್ ವ್ಯಾಲ್ಯುವೇಶನ್, ಹಣಕ್ಲಾಸು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS