Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Narendra Modi

ಮಹಾಘಟಬಂಧನ್ ಗೆ ಮರ್ಮಾಘಾತ: ಮೋದಿ ಸುನಾಮಿಗೆ ಪ್ರತಿಪಕ್ಷಗಳು ಧೂಳಿಪಟ: ಬಿಜೆಪಿಗೆ ಬಹುಮತ!

Narendra Modi-Mamata Banerjee

ಮಮತಾ ಬ್ಯಾನರ್ಜಿಯ ಭದ್ರಕೋಟೆಯನ್ನೇ ಅಲುಗಾಡಿಸಿದ ಮೋದಿ ಸುನಾಮಿ! ದೀದಿ ಕೋಟೆ ಕೆಡವಿದ್ದೇಗೆ?

LK Advani

ಬಿಜೆಪಿಗೆ ಜಯಮಾಲೆ: ನರೇಂದ್ರ ಮೋದಿ, ಶಾಗೆ ಅಡ್ವಾಣಿ ಶುಭ ಹಾರೈಕೆ

ಸಂಗ್ರಹ ಚಿತ್ರ

ಎನ್‌ಡಿಎಗೆ ಭಾರೀ ಮುನ್ನಡೆ: ಮೋದಿ ಹವಾ; ಷೇರು ಮಾರುಕಟ್ಟೆಯಲ್ಲಿ ದಾಖಲೆ ಏರಿಕೆ!

Imran Khan

ಚುನಾವಣೆಯಲ್ಲಿ ಮೋದಿಗೆ ಜಯ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳೀದ್ದೇನು?

Lok Sabha Election Results 219; World Leaders Congratulate PM modi

ಲೋಕಸಭಾ ಚುನಾವಣೆ ಫಲಿತಾಂಶ; ಪ್ರಧಾನಿ ಮೋದಿ ವಿಶ್ವ ನಾಯಕರಿಂದ ಶುಭಾಶಯಗಳ ಮಹಾಪೂರ

Axis My India chief, who got election results 100% right, breaks down on live TV

ನೇರಪ್ರಸಾರದಲ್ಲಿ ಕಣ್ಣೀರಿಟ್ಟ ಚುನಾವಣಾ ಸಮೀಕ್ಷೆ ಸಂಸ್ಥೆಯ ಮುಖ್ಯಸ್ಥ: ಇಲ್ಲಿದೆ ಕಾರಣ

Loksabha Poll Results: CM Siddaramaiah congratulates PM Modi on victory

ಮುಂದಿನ ಐದು ವರ್ಷ ಜನ ಮೆಚ್ಚುವಂತಹ ಕೆಲಸ ಮಾಡಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಶುಭಾಶಯ

Ratan Singh

ಮಧ್ಯಪ್ರದೇಶ: ಮತಎಣಿಕೆ ಕೇಂದ್ರದಲ್ಲಿ ಹೃದಯಾಘಾತವಾಗಿ ಕಾಂಗ್ರೆಸ್ ನಾಯಕ ಸಾವು

Congress President Rahul Gandhi leading with over 7,90,000 votes from Kerala

ಅಮಿತ್ ಶಾ ದಾಖಲೆ ಹಿಂದಿಕ್ಕಿದ ರಾಹುಲ್ ಗಾಂಧಿ, ವಯನಾಡ್ ನಲ್ಲಿ 7.90 ಲಕ್ಷ ಮತಗಳ ಭರ್ಜರಿ ಮುನ್ನಡೆ

Manohar Parrikar

ಗೋವಾ ಉಪಚುನಾವಣೆ: ಮನೋಹರ್ ಪರಿಕ್ಕರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಜಯ

Israel PM Benjamin Netanyahu congratulates Prime Minister NarendraModi

ಲೋಕಾ ದಿಗ್ವಿಜಯ; ಪ್ರಧಾನಿ ಮೋದಿಗೆ ಆಪ್ತ ಗೆಳೆಯ ಇಸ್ರೇಲ್ ಪ್ರಧಾನಿ ನೆತಾನ್ಯಾಹು ಶುಭಾಶಯ

Priyanka meets Rahul as Cong stares at defeat

ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಿನ ಕಹಿ: ರಾಹುಲ್ ಗಾಂಧಿ-ಪ್ರಿಯಾಂಕಾ ವಾದ್ರಾ ಭೇಟಿ

ಮುಖಪುಟ >> ಅಂಕಣಗಳು

ಲಾಭ-ನಷ್ಟದ ಲೆಕ್ಕಾಚಾರ ಬಿಟ್ಟು ಪಾಕಿಸ್ತಾನಕ್ಕೆ ನೀಡಬೇಕಿದೆ ನೇರ ಉತ್ತರ!

ಹಣಕ್ಲಾಸು-76
How will India-Pakistan conflict impact economy, countries that support India: here is all you need to know

ಲಾಭ-ನಷ್ಟದ ಲೆಕ್ಕಾಚಾರ ಬಿಟ್ಟು ಪಾಕಿಸ್ತಾನಕ್ಕೆ ನೀಡಬೇಕಿದೆ ನೇರ ಉತ್ತರ!

ಯುದ್ಧವಿರಬಹದು ಅಥವಾ ಪೂರ್ಣ ಪ್ರಮಾಣದ ಯುದ್ಧವಲ್ಲದೆ ಸ್ಟ್ರಾಟರ್ಜಿಕಲ್ ಸ್ಟ್ರೈಕ್ (ಸರ್ಜಿಕಲ್ ಸ್ಟ್ರೈಕ್) ಇರಬಹದು ಇಂತಹ ವಿಷಯಗಳು ಜನರ ಗಮನವನ್ನು ಬಹುಬೇಗ ತನ್ನೆಡೆಗೆ ಆಕರ್ಷಿಸುತ್ತದೆ. 

ನೆರೆಯ ಪಾಕಿಸ್ತಾನ ತನ್ನ ಹುಟ್ಟಿನ ದಿನದಿಂದ ಇಂದಿನವರೆಗೆ ಭಾರತಕ್ಕೆ ಕಾಟ ಕೊಡುತ್ತಲೇ ಬಂದಿದೆ. ಭಾರತದ ಅಲಿಪ್ತ ನೀತಿ ಧೋರಣೆ ಎಲ್ಲಿಯವರೆಗೆ ವ್ಯವಸ್ಥೆಯಲ್ಲಿ ಬೇರು ಬಿಟ್ಟಿತ್ತೆಂದರೆ ಶತ್ರು ನಮ್ಮ ದೇಶದ ಮೇಲೆ ದಾಳಿ ಮಾಡಿದಾಗ ಕೂಡ ಅದನ್ನ ಮಾತಿನಲ್ಲಿ ಖಂಡಿಸಿ ವಿಷಯವನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಳಲು ತೋಡಿಕೊಳ್ಳುವ ಮಟ್ಟಕ್ಕೆ ಸೀಮಿತವಾಗುವಷ್ಟು. 

ದೇಶದಲ್ಲಿ 2014 ರಲ್ಲಿ ಬದಲಾದ ನಾಯಕತ್ವ ಭಾರತವನ್ನ ವಿಶ್ವ ಮಟ್ಟದಲ್ಲಿ ಬೇರೆಯ ದೃಷ್ಟಿಯಲ್ಲಿ ನೋಡುವಂತೆ ಮಾಡಿದೆ. ಪಾಕಿಸ್ತಾನ ಪುಲ್ವಾಮ ಮೇಲೆ ಮಾಡಿದ ದಾಳಿಗೆ ಭಾರತ ಉತ್ತರ ನೀಡಿದೆ. ಭಾರತದಾದ್ಯಂತ ಒಂದು ರೀತಿಯ ಸಡಗರ ಆವರಿಸಿದೆ. ಸ್ವಾತಂತ್ರ್ಯ ಬಂದ ದಿನದಿಂದ ಇಲ್ಲಿಯವರೆಗೆ ಪಾಕಿಸ್ತಾನ ಮಾಡುವ ಇಂತಹ ಕುಚೇಷ್ಟೆಗಳಿಗೆ ಭಾರತ ತಕ್ಕ ಉತ್ತರ ಕೊಟ್ಟಿರಲಿಲ್ಲ. ನಮ್ಮ ಸೇನೆ ಕೂಡ ಕೋಪದಿಂದ ತನಗಾದ ನಷ್ಟ ಮತ್ತು ಅವಮಾನವನ್ನ ಇಷ್ಟು ದಿನ ಸಹಿಸಿಕೊಂಡು ಬಂದಿತ್ತು. ಇದೀಗ ಭಾರತದ ಜನತೆ ಮತ್ತು ಸೈನ್ಯ ಎರಡೂ ಹಿಂದಿನ ನೋವು, ಅಪಮಾನ ಮರೆತು ವಿಜಯ ದಿವಸವನ್ನ ಆಚರಿಸುತ್ತಿವೆ. ಇಂತಹ ಸ್ಥಿತಿ ಭಾರತಕ್ಕೆ ಒಂದೇ ದಿನದಲ್ಲಿ ಬರಲಿಲ್ಲ! ಇದರ ಹಿಂದೆ ವ್ಯವಸ್ಥಿತ ಯೋಜನೆ ಮತ್ತು ಆ ಯೋಜನೆಯನ್ನ ಕರಾರುವಕ್ಕಾಗಿ ಕಾರ್ಯಗತಗೊಳಿಸಿದ ತಂಡವಿದೆ. ಹಣದ ಬಲವಿಲ್ಲದೆ ಅಥವಾ ಆರ್ಥಿಕ ಸದೃಢತೆಯಿಲ್ಲದಿದ್ದರೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಕಷ್ಟ. ಭಾರತ ವಿಶ್ವ ಮಟ್ಟದಲ್ಲಿ ಇಂದಿನ ಸ್ಥಿತಿ ತಲುಪಲು ಮಾಡಿದ ಕಸರತ್ತು ತಿಳಿದುಕೊಳ್ಳೋಣ. ಗಮನಿಸಿ ಇಲ್ಲಿ ಕೇವಲ ನಮ್ಮ ಆರ್ಥಿಕತೆಯಷ್ಟೇ ಪ್ರಮುಖವಾಗುವುದಿಲ್ಲ ಜೊತೆಗೆ ಬೇರೆ ದೇಶಗಳ ಆರ್ಥಿಕ ಸ್ಥಿತಗತಿ ಕೂಡ ಮುಖ್ಯವಾಗುತ್ತದೆ. 

ವಿದೇಶಿ ಪ್ರವಾಸ, ವ್ಯಾಪಾರ ವೃದ್ಧಿ ಮತ್ತು ಹೂಡಿಕೆ 

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿದೇಶಿ ಪ್ರಯಾಣವನ್ನ ನಮ್ಮಲ್ಲಿ ಲೇವಡಿ ಮಾಡಿ ನಕ್ಕವರ ಸಂಖ್ಯೆ ಬಹಳವಿದೆ. ಆದರೆ ಗಮನಿಸಿ ನೋಡಿ ನರೇಂದ್ರ ಮೋದಿಯವರು ಮಾಡಿದ ಎಲ್ಲಾ ಪ್ರವಾಸಗಳು ಭಾರತಕ್ಕೆ ವ್ಯಾಪಾರ ವೃದ್ಧಿಸುವುದರಲ್ಲಿ ಸಹಾಯ ಮಾಡಿವೆ. ಇದು ಕೇವಲ ವ್ಯಾಪಾರಕ್ಕೆ ಅಷ್ಟೇ ಸೀಮಿತವಾಗಿಲ್ಲ. ಭಾರತ, ಆ ದೇಶಗಳೊಂದಿಗೆ ವಿದೇಶಿ ವಿನಿಮಯ ಒಪ್ಪಂದ ಮಾಡಿಕೊಂಡಿದೆ, ಹಲವು ದೇಶಗಳೊಂದಿಗೆ ರೂಪಾಯಿಯಲ್ಲಿ ಹಣವನ್ನ ನೀಡುವ ಒಪ್ಪಂದ ಕೂಡ ಮಾಡಿಕೊಂಡಿದೆ. ಇದರ ಜೊತೆಗೆ ಬಹುತೇಕ ಸಣ್ಣ ಪುಟ್ಟ ರಾಷ್ಟ್ರಗಳಲ್ಲಿ ಭಾರತ ಹೂಡಿಕೆ ಮಾಡಿದೆ. ನಮಗಿಂತ ಸದೃಢ ದೇಶಗಳನ್ನ ನಮ್ಮಲ್ಲಿ ಹೂಡಿಕೆ ಮಾಡುವಂತೆ ಮಾಡಿದೆ. ಇದರಿಂದ ಭಾರತದ ಬಾಂಧವ್ಯ ಈ ಎಲ್ಲಾ ದೇಶಗಳ ನಡುವೆ ಬಹಳ ಉತ್ತಮವಾಗಿದೆ. 

ಚೀನಾ ದೇಶವೇಕೆ ಪಾಕಿಸ್ತಾನವನ್ನ ಬೆಂಬಲಿಸುತ್ತದೆ? 

ಉತ್ತರ ಬಹಳ ಸುಲಭ. ಚೀನಾ ದೇಶ ಪಾಕಿಸ್ತಾನದಲ್ಲಿ ಬಹಳಷ್ಟು ಹಣವನ್ನ ಹೂಡಿಕೆ ಮಾಡಿದೆ. ಇನ್ನಷ್ಟು ಹಣವನ್ನ ಸಾಲದ ರೂಪದಲ್ಲಿ  ನೀಡಿದೆ. ಅರ್ಥ ಬಹಳ ಸರಳ, ಚೀನಾಕ್ಕೆ ತನ್ನ ಲಾಭದ ಚಿಂತೆ ಜೊತೆಗೆ ತನ್ನ ಸಾಮ್ರಾಜ್ಯ ವಿಸ್ತರಿಸುವಲ್ಲಿ ಪಾಕಿಸ್ತಾನದ ಅವಶ್ಯಕತೆ ಇದೆ. 

ಇದೀಗ ಭಾರತ ಪಾಕಿಸ್ತಾನದ ಮೇಲೆ ಮಾಡಿರುವ ಆಕ್ರಮಣ ಚೀನಾ ದೇಶಕ್ಕೆ ನುಂಗಲಾರದ ಬಿಸಿ ತುಪ್ಪ. ಅದು ಎರಡೂ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎನ್ನುವ ಹೇಳಿಕೆ ನೀಡಿದೆ. ಇದು ಕೇವಲ ತೋರಿಕೆ ಮಾತುಗಳು. ಸದ್ಯಕ್ಕೆ ನೇರ ಯುದ್ಧ ಮಾಡುವುದು ಮತ್ತು ದಕ್ಷಿಣ ಏಷ್ಯಾದಲ್ಲಿ ಅಸ್ಥಿರತೆ ಹೆಚ್ಚಾಗುವುದು ಚೀನಾದ ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಅದು ಅಮೆರಿಕಾ ಜೊತೆಗಿನ ತನ್ನ ವಾಣಿಜ್ಯ ಕಾದಾಟದಲ್ಲಿ ಸಾಕಷ್ಟು ಬಸವಳಿದಿದೆ. ಅಂದರೆ ಶಾಂತಿ ಮಂತ್ರ ಪಠಿಸುವ ಹಿಂದಿನ ಉದ್ದೇಶ ಹಣ ಮತ್ತು ಲಾಭ ನಷ್ಟದ ಲೆಕ್ಕಾಚಾರ ಬಿಟ್ಟು ಬೇರೇನೂ ಅಲ್ಲ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿರುವ ಭಾರತದ ಘನತೆಯ ಮುಂದೆ ನೇರವಾಗಿ ಭಾರತವನ್ನ ಹೀಗಳೆಯಲಾಗದ ಚೀನಾದ ಸ್ಥಿತಿ ಕೂಡ ಕಾರಣ. ಇದರರ್ಥ ಸದ್ಯದ ಮಟ್ಟಿಗೆ ನೇರ ಯುದ್ಧ ಆಗುವ ಸಾಧ್ಯತೆಗಳು ಬಹಳ ಕಡಿಮೆ ಅಂತಾಯ್ತು.

ಪಾಕಿಸ್ತಾನ ಹೇಳಿಕೇಳಿ ಮೊದಲೇ ದಿವಾಳಿ ದೇಶ ನೀರಲ್ಲಿ ಇಳಿದವನಿಗೆ ಮಳೆಯಾದರೇನು ಚಳಿಯಾದರೇನು? 'ಎನ್ನುವ ಗಾದೆಯಂತೆ ಒಂದು ವೇಳೆ ಭಾರತದ ಮೇಲೆ ಯುದ್ಧಕ್ಕೆ ಶುರು ಮಾಡಿದರೆ?? ಎನ್ನುವ ಪ್ರಶ್ನೆಗೆ ಉತ್ತರ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸಗಳು ಹಾಗೂ ಪ್ರಬಲ ವಿದೇಶಾಂಗ ನೀತಿ. ಗಮನಿಸಿ ನೋಡಿ ಹಾಗೊಮ್ಮೆ ಯುದ್ಧವಾದರೆ ಇಲ್ಲಿಯೂ ಯಾರು ಯಾರನ್ನ ಬೆಂಬಲಿಸುತ್ತಾರೆ ಎನ್ನುವುದು ಕೂಡ ಲಾಭ-ನಷ್ಟದ ಲೆಕ್ಕಾಚಾರದ ಆಧಾರದಲ್ಲಿಯೇ ನಡೆಯುತ್ತದೆ. ಚೀನಾ ಸಹಜವಾಗೇ ತನ್ನ ಹೂಡಿಕೆಯನ್ನ, ತನ್ನ ಸ್ವಹಿತ ಕಾಯ್ದುಕೊಳ್ಳಲು ಪಾಕಿಸ್ತಾನವನ್ನ ಬೆಂಬಲಿಸುತ್ತದೆ. ಜಗತ್ತಿನ ಉಳಿದ ಬಲಿಷ್ಠ ರಾಷ್ಟ್ರಗಳ ಕಥೆಯೇನು? 

ರಷ್ಯಾ ಮತ್ತು ಅಮೆರಿಕಾ ಲಾಭವಿಲ್ಲದೆ ದೈತ್ಯ ಚೀನಾ ದೇಶವನ್ನ ನೇರವಾಗಿ ವಿರೋಧಿಸುವುದಿಲ್ಲ. ಚೀನಾ ದೇಶ ತನ್ನ ರಫ್ತನ್ನು ನಿಲ್ಲಿಸಿದರೆ ಅದರ ಆರ್ಥಿಕತೆ ಕೆಡುತ್ತದೆ ಜೊತೆಗೆ ಅಮೆರಿಕಾ ಕೂಡ ಬೀದಿಗೆ ಬರುತ್ತದೆ. ಈ ಎರಡು ದೇಶಗಳ ನಡುವಿನ ಹಣಕಾಸು ವ್ಯವಹಾರ ಅತ್ಯಂತ ಕ್ಲಿಷ್ಟವಾಗಿದೆ. ರಷ್ಯಾದ ಕೂಡ ಅವಕಾಶವಾದಿ ದೇಶ. ಅದು ಭಾರತದ ಉತ್ತಮ ಮಿತ್ರದೇಶ ಎನ್ನುವುದು ಮಾಧ್ಯಮಗಳು ಇಲ್ಲಿಯವರೆಗೆ ಪೋಷಿಸಿಕೊಂಡು ಬಂದಿರುವ ಹಸಿ ಸುಳ್ಳು... ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ರಷ್ಯಾ ಅತಿ ಕಡಿಮೆ ಬೆಲೆಯಲ್ಲಿ ನಮ್ಮ ಲೋಹಗಳನ್ನ ಬಹಳಷ್ಟು ವರ್ಷ ತಿಂದು ತೇಗಿದೆ. ಅದು ಮಿತ್ರ ರಾಷ್ಟ್ರವಾಗಿದ್ದು ಲಾಭದ ಲೆಕ್ಕಾಚಾರಲ್ಲಿ ಮಾತ್ರ. 

ಇರಲಿ. ಸರಳವಾಗಿ ಹೇಳಬೇಕಂದರೆ ಸಾಕಷ್ಟು ಪ್ರಮಾಣದಲ್ಲಿ ಲಾಭವಿಲ್ಲದೆ ರಷ್ಯಾ ಮತ್ತು ಅಮೆರಿಕಾ ದೇಶಗಳು ಚೀನಾ ವಿರುದ್ಧ ಹೋಗುವುದಿಲ್ಲ. ಅವು ತಟಸ್ಥವಾಗಬಹದು. ಹೀಗಾದಾಗ ಚೀನಾ ಮತ್ತು ಪಾಕಿಸ್ತಾನದ ಮುಂದೆ ಭಾರತದ ಆಟ ಹೆಚ್ಚು ನೆಡೆಯುವುದಿಲ್ಲ. ಇಂತಹ ಪರಿಸ್ಥಿತಿ ಎದುರಾದರೆ ಏನು ಮಾಡುವುದು? ಇಲ್ಲಿ ಸಹಾಯಕ್ಕೆ ಬರುವುದು ನರೇಂದ್ರ ಮೋದಿಯವರ ವಿದೇಶಿ ಪ್ರವಾಸ ಮತ್ತು ಅವರ ವಿದೇಶಾಂಗ ನೀತಿಗಳು. 

ಪ್ರಧಾನಮಂತ್ರಿ ಮೋದಿ ಹಿಂದಿನ ವಿದೇಶಿ ಪ್ರವಾಸ ಯುದ್ಧದ ಸಮಯದಲ್ಲಿ ಹೇಗೆ ಸಹಾಯ ಮಾಡುತ್ತದೆ? 

ಗಮನಿಸಿ ಚೀನಾ ದೇಶಕ್ಕೆ ಸರಹದ್ದು ಹಂಚಿಕೊಂಡಿರುವ ದೇಶಗಳು ಹದಿನಾಲ್ಕು. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ಕೂಡ ಸೇರಿದೆ. ಇವೆರಡು ದೇಶಗಳನ್ನ ಹೊರತುಪಡಿಸಿದರೆ ಉಳಿಯುವುದು ಹನ್ನೆರಡು. ಆಫ್ಘಾನಿಸ್ತಾನ, ಕೈರೇಗಿಸ್ತಾನ, ಕಜಕಿಸ್ಥಾನ, ತಜಿಕಿಸ್ತಾನ, ಮಂಗೋಲಿಯಾ, ರಷ್ಯಾ, ನಾರ್ತ್ ಕೊರಿಯಾ, ವಿಯೆಟ್ನಾಮ್, ಲಾವೋಸ್, ಮಯನ್ಮಾರ್, ಭೂತಾನ್ ಮತ್ತು ನೇಪಾಳ ಆ ದೇಶಗಳು. ಭಾರತ ಈ ಎಲ್ಲಾ ದೇಶಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದೆ. ಈ ಎಲ್ಲಾ ದೇಶಗಳೂ ಒಂದಲ್ಲ ಒಂದು ಕಾರಣದಿಂದ ಚೀನಾ ದೇಶದೊಂದಿಗೆ ಉತ್ತಮ ಸಾಮರಸ್ಯ ಹೊಂದಿಲ್ಲ. ಈ ಹನ್ನೆರಡು ದೇಶಗಳಲ್ಲಿ ಬಹಳಷ್ಟು ದೇಶಗಳಿಗೆ ಭಾರತ ಬಹಳಷ್ಟು ದೇಣಿಗೆ ನೀಡಿದೆ. ಅವೆಲ್ಲವೂ ಭಾರತದಿಂದ ಉಪಕೃತವಾದ ದೇಶಗಳು. ರಷ್ಯಾ ಮತ್ತು ನಾರ್ತ್ ಕೊರಿಯಾ ತಟಸ್ಥವಾದರೂ ಉಳಿದ ದೇಶಗಳು ಭಾರತದ ಬೆನ್ನಿಗೆ ನಿಲ್ಲುತ್ತವೆ. ಅವು ಚೀನಾಗೆ ಸಾಕಷ್ಟು ತಲೆನೋವು ನೀಡುವ ಜಾಗಗಳಲ್ಲಿ ಚೀನಾಕ್ಕೆ ಹೊಡೆಯುವ ಶಕ್ತಿ ಹೊಂದಿವೆ. 

ಉಳಿದಂತೆ ಚೀನಾ ದೇಶಕ್ಕೆ ಸರಹದ್ದು ಹೊಂದಿಲ್ಲದಿದ್ದರೂ, ಗಾತ್ರದಲ್ಲಿ ಚಿಕ್ಕದಾದರೂ ಚೀನಾ ದೇಶವನ್ನ ಅಲ್ಲಾಡಿಸುವ ಶಕ್ತಿ ಇರುವ ಪುಟ್ಟ ಜಪಾನ್ ಭಾರತದ ನೆಲದಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ. ಇತ್ತೀಚೆಗಷ್ಟೇ ಭಾರತೀಯ ರೂಪಾಯಿ ಮತ್ತು ಜಪಾನೀ ಯೆನ್ ನಡುವೆ ವಹಿವಾಟು ನಡೆಸುವ ಸಹಸ್ರಾರು ಕೋಟಿ ರೂಪಾಯಿ ಒಪ್ಪಂದ ಕೂಡ ನಡೆದಿದೆ. ಭಾರತ ಸೋಲುವುದು ಅಥವಾ ಅಸ್ಥಿರ ಭಾರತ ಜಪಾನ್ ದೇಶಕ್ಕೆ ಲಾಭದಾಯಕವಲ್ಲ. ಹೀಗಾಗಿ ಜಪಾನ್ ಎರಡನೇ ಯೋಚನೆಯಿಲ್ಲದೆ ಭಾರತಕ್ಕೆ ಬೆಂಬಲ ಘೋಷಿಸುತ್ತದೆ. 

ಇಸ್ರೇಲ್ ದೇಶ ಕೂಡ ಭಾರತದೊಂದಿಗೆ ಬಹಳಷ್ಟು ವ್ಯಾಪಾರ ವಹಿವಾಟು ಹೊಂದಿದೆ. ಇದೊಂದು ದೇಶ ಮಾತ್ರ ವ್ಯಾಪಾರವನ್ನೂ ಮೀರಿ ಭಾರತದೊಂದಿಗೆ ಭಾವುಕತೆಯಿಂದ ಬೆಸೆದುಕೊಂಡಿದೆ. ಪುಲ್ವಾಮ ದಾಳಿಯಾದ ಕೆಲವೇ ಗಂಟೆಗಳಲ್ಲಿ ನೀವು ಮುನ್ನುಗ್ಗಿ ಜೊತೆಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ಅಲ್ಲಿಯ ಪ್ರಧಾನಿ ಮುಕ್ತವಾಗಿ ಹೇಳಿರುವುದು ಇದಕ್ಕೊಂದು ಉದಾಹರಣೆ. ಫ್ರಾನ್ಸ್ ಮೂಲಭೂತ ಇಸ್ಲಾಂವಾದದಿಂದ ಸಾಕಷ್ಟು ಹಾನಿಗೊಳಗಾಗಿದೆ. ಭಾರತದ ನೋವನ್ನು ಅದು ಕೂಡ ಅನುಭವಿಸಿದೆ. ಹೀಗಾಗಿ ಭಾರತೀಯ ವಾಯುಸೇನೆ ನೀಡಿದ ಉತ್ತರಕ್ಕೆ ಫ್ರಾನ್ಸ್ ಅದಾಗಲೇ ಮುಕ್ತ ಬೆಂಬಲ ವ್ಯಕ್ತಪಡಿಸಿದೆ. 

ಮುಂದೇನು? 

ಪಾಕಿಸ್ತಾನ ಸುಮ್ಮನೆ ಕೂರುವುದಿಲ್ಲ ಅದು ನೇರವಾಗಿ ಯುದ್ಧ ಮಾಡದಿದ್ದರೂ ಪರೋಕ್ಷವಾಗಿ ಭಾರತಕ್ಕೆ ಹಾನಿ ಮಾಡಲು ಏನಾದರೂ ಖಂಡಿತ ಮಾಡುತ್ತದೆ. ಇದು ಕೊನೆಯಾಗದ ಸಮಸ್ಯೆ. ಅವರು ನಮ್ಮ ಮೇಲೆ ಆಕ್ರಮಣ ಮಾಡಿದಾಗ ಪಾಪಿಸ್ತಾನ ಎಂದು ಕೂಗುವುದು ನಾವು ಅವರನ್ನ ಹೊಡೆದಾಗ ಯುದ್ಧ ಗೆದ್ದವರಂತೆ ಸಂಭ್ರಮಿಸುವುದು ಎಷ್ಟು ದಿನ ನೆಡೆಯಲು ಸಾಧ್ಯ.? 

ಪಾಕಿಸ್ತಾನ ಮತ್ತು ಚೀನಾ ದೇಶಕ್ಕೆ ಸದ್ಯದ ಸಮಯದಲ್ಲಿ ಯುದ್ಧ ಬೇಕಿಲ್ಲ. ಯುದ್ಧ ಆರ್ಥಿಕತೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಆದರೆ ದಿನ ನಿತ್ಯ ಆಗುವ ಈ ಕಿರಿಕಿರಿಯಿಂದ ಮುಕ್ತಿ ಪಡೆದರೆ ನಂತರ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಹೋಗಬಹದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಭಾರತಕ್ಕೆ ಹಿಂದೆಂದೂ ಇಲ್ಲದ ಬೆಂಬಲ ಮತ್ತು ಗೌರವ ಎರಡೂ ಇದೆ. ಇದನ್ನ ಬಳಸಿಕೊಂಡು ರಷ್ಯಾ ಮತ್ತು ಅಮೆರಿಕಾ ದೇಶಗಳ ಬೆಂಬಲ ಪಡೆದು ಪಾಕಿಸ್ತಾನದ ಮತ್ತು ಚೀನಾದ ಉದ್ಧಟತನವನ್ನ ಕನಿಷ್ಟ ಇನ್ನೊಂದೆರಡು ಅಥವಾ ಮೂರು ದಶಕ ಅಡಗಿಸಲು ಇದು ಸಕಾಲ.

ಈ ಕಸರತ್ತಿನಲ್ಲಿ ಭಾರತದ ಆರ್ಥಿಕತೆ ಬಹಳಷ್ಟು ಹದಗೆಡುವುದು ಅತ್ಯಂತ ಸ್ಪಷ್ಟ. ಒಪ್ಪೊತ್ತು ಊಟ ಮಾಡಿದರೂ ಸರಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿ ಸಾಕು ಎನ್ನುವ ಜನತೆ ಜೊತೆಗಿರುವಾಗ ಕೇವಲ ಹಣಕಾಸು, ಲಾಭ ನಷ್ಟದ ಲೆಕ್ಕಾಚಾರ ಕೆಲಸ ಮಾಡುವುದಿಲ್ಲ. ದೇಶದ ಭದ್ರತೆ ಮತ್ತು ಮಾನ-ಸಮ್ಮಾನದ ವಿಷಯ ಬಂದಾಗ ಆರ್ಥಿಕತೆ ಒಳಗೊಂಡು ಎಲ್ಲವೂ ಗೌಣ. ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಿನ ನಡೆ ಏನಿರಬಹದು ಎನ್ನುವುದು ಕುತೂಹಲ... 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
ಸಂಬಂಧಿಸಿದ್ದು...

ಲೇಖಕರ ಕುರಿತು : ಕಳೆದ ಎರಡು ದಶಕದಿಂದ ಆಂತರಿಕ ಲೆಕ್ಕ ಪರಿಶೋಧಕರಾಗಿ ದುಬೈ ಮತ್ತು ಯೂರೋಪಿನ ವಿತ್ತ ಪ್ರಪಂಚದಲ್ಲಿ ಬದುಕು ಕಂಡು ಕೊಂಡಿರುವ ಶ್ರೀ. ರಂಗಸ್ವಾಮಿ ಮೂಕನಹಳ್ಳಿಯವರು ಹವ್ಯಾಸಿ ಬರಹಗಾರರು. ವೃತ್ತಿ ಮತ್ತು ಪ್ರವೃತ್ತಿಯ ಸಲುವಾಗಿ ಐವತ್ತಕ್ಕೂ ಹೆಚ್ಚು ದೇಶಗಳ ಸುತ್ತಿರುವ ಲೇಖಕರು ತಾವು ಕಂಡ ದೇಶಗಳಷ್ಟೇ ಅಲ್ಲದೆ ಜಗತ್ತಿನ ಆರ್ಥಿಕ ಸ್ಥಿತಿಗತಿ ಬಗ್ಗೆ ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿಗೆ ಲೇಖನಗಳ ಬರೆದಿದ್ದಾರೆ. ಇವರು ಕಂಡ ದೇಶಗಳ ಪ್ರವಾಸಿ ಕಥನ ತರಂಗ, ವಿಜಯ ನೆಕ್ಸ್ಟ್ ಮತ್ತು ಡಿಜಿಟಲ್ ಕನ್ನಡದಲ್ಲಿ ಲೇಖನ ಮತ್ತು ಸರಣಿ ರೂಪದಲ್ಲಿ ಪ್ರಕಟವಾಗಿವೆ. ಹಣಕ್ಲಾಸು ಕನ್ನಡಪ್ರಭ.ಕಾಮ್ ನಲ್ಲಿ ಪ್ರತಿ ಗುರುವಾರ ಪ್ರಕಟವಾಗುವ ಅಂಕಣ ಬರಹ.
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : India-Pakistan conflict, Impact on economy, China, US, Russia, ಭಾರತ-ಪಾಕಿಸ್ತಾನ ಸಂಘರ್ಷ, ಆರ್ಥಿಕತೆ ಪರಿಣಾಮ, ಚೀನಾ, ರಷ್ಯ, ಅಮೆರಿಕ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS