Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
File photo

ರಫೇಲ್ ಯುದ್ಧ ವಿಮಾನ ಖರೀದಿ ತನಿಖೆಗೆ 'ಸುಪ್ರೀಂ' ನಕಾರ: ಕೇಂದ್ರ ಸರ್ಕಾರ ನಿರಾಳ

ಸಂಗ್ರಹ ಚಿತ್ರ

ಶಾಕಿಂಗ್ ಸುದ್ದಿ: ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ನಿಷೇಧ!

File Image

ಬೆಳಗಾವಿ: ದೇಶದ ಮೊದಲ ಮಾದರಿ ರಸ್ತೆಗೆ ವಿಶ್ವಬ್ಯಾಂಕ್ ಮೆಚ್ಚುಗೆ

A coffee cube sachet

30 ಸೆಕೆಂಡುಗಳಲ್ಲಿ ಕಾಫಿ! ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಿಂದ ಹೊಸ ಉತ್ಪನ್ನ ಬಿಡುಗಡೆ

Linking Aadhaar card with voter ID may be mandatory

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಕಡ್ಡಾಯ?

ಸಂಗ್ರಹ ಚಿತ್ರ

ಶಾಲೆಯಲ್ಲೇ ವಿದ್ಯಾರ್ಥಿನಿಯನ್ನು ಕಾಮತೃಷೆಗೆ ಬಳಸಿಕೊಂಡ ಮಂಗಳೂರು ಶಿಕ್ಷಕ, ವಿಡಿಯೋ ವೈರಲ್!

ಸಂಗ್ರಹ ಚಿತ್ರ

ಕುಂಬ್ಳೆ ವಿಶ್ವದಾಖಲೆ ಮುರಿದ ಯುವ ಕ್ರಿಕೆಟಿಗ, ತರಗೆಲೆಯಂತೆ ಉದುರಿದ ಬ್ಯಾಟ್ಸ್‌ಮನ್ಸ್, ವಿಡಿಯೋ ವೈರಲ್!

ಶ್ರುತಿ ಹರಿಹರನ್, ಅರ್ಜುನ್ ಸರ್ಜಾ

ಹಳ್ಳ ಹಿಡಿಯುತ್ತಿದೆ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀಟೂ ಪ್ರಕರಣ!

Nitin Gadkari

ಒಮ್ಮೆ ಸಾಲ ತೀರಿಸಿಲ್ಲ ಎಂದು ಮಲ್ಯರನ್ನು 'ವಂಚಕ' ಎನ್ನಬೇಡಿ: ನಿತಿನ್ ಗಡ್ಕರಿ

Tulsi Ramsay

ಹಾರರ್ ಚಿತ್ರಗಳ ಸೃಷ್ಟಿಕರ್ತ, ಬಾಲಿವುಡ್ ದಿಗ್ಗಜ ನಿರ್ದೇಶಕ ತುಳಸಿ ರಾಮ್ಸೆ ನಿಧನ!

Representational image

ಹಳೇ ನೋಟು ಬದಲಾವಣೆ ದಂಧೆಗೆ ಇಲ್ಲ ಬ್ರೇಕ್: ಬೆಂಗಳೂರಿನಲ್ಲಿ 1.95 ಕೋಟಿ ಹಣ ಪತ್ತೆ

Rajinikanth

ತಮಿಳುನಾಡಿಗೆ ಹರಿವ ನೀರಿನ ಪ್ರಮಾಣ ಇಳಿಕೆಯಾದರೆ ನ್ಯಾಯಾಲಯದ ಮೊರೆ: ಮೇಕೆದಾಟು ಕುರಿತು ನಟ ರಜನಿಕಾಂತ್

PM Modi-Rahul At Parliament Event After Poll Results, No Interaction

ಮುಖಾಮುಖಿ ಎದುರಾದರೂ ಪರಸ್ಪರ ಮಾತನಾಡದ ಪ್ರಧಾನಿ ಮೋದಿ-ರಾಹುಲ್

ಮುಖಪುಟ >> ಅಂಕಣಗಳು

ಯಾವುದೇ ಸಂಸ್ಥೆ ತನ್ನ ಷೇರನ್ನ ತಾನೇ ಏಕೆ ಮರು ಖರೀಸುತ್ತದೆ ?

ಹಣಕ್ಲಾಸು-42
What is buy-back of shares? Why would any company buyback its own shares?

ಯಾವುದೇ ಸಂಸ್ಥೆ ತನ್ನ ಷೇರನ್ನ ತಾನೇ ಏಕೆ ಮರು ಖರೀಸುತ್ತದೆ ?

ಐ.ಟಿ ಕ್ಷೇತ್ರದ ಹೆಸರಾಂತ ಸಂಸ್ಥೆ  ಟಿ.ಸಿ.ಎಸ್ (ಟಾಟ ಕನ್ಸಲ್ಟಿಂಗ್ ಸರ್ವಿಸಸ್) ಮಾರುಕಟ್ಟೆಯಲ್ಲಿ ಇರುವ ತನ್ನ ಷೇರುಗಳನ್ನ ಮರು ಖರೀದಿ ಮಾಡಲು ಸಿದ್ಧವಿರುವುದಾಗಿ ಹೇಳಿಕೆ ನೀಡಿತು. ಇದು ಒಂದು ರೀತಿಯಲ್ಲಿ ಸಂಚಲನ ಸೃಷ್ಟಿಸಿದ ಹೇಳಿಕೆ. ಏಕೆಂದರೆ ಟಿಸಿಎಸ್ ಸಂಸ್ಥೆ 16 ಸಾವಿರ ಕೋಟಿ ರೂಪಾಯಿ ಹಣವನ್ನ ಈ ರೀತಿಯ ಮರು ಖರೀದಿಗೆ ಖರ್ಚು ಮಾಡಲು ಸಿದ್ಧವಿದೆ. ಮಾರುಕಟ್ಟೆಯಲ್ಲಿ ತನ್ನ ಷೇರಿನ ಮುಖ ಬೆಲೆ ಎಷ್ಟಿದೆ ಅದಕ್ಕಿಂದ 15 ಪ್ರತಿಶತ ಹೆಚ್ಚಿನ ಮೊತ್ತ ಕೊಟ್ಟು ಷೇರು ಖರೀದಿ ಮಾಡುವುದಾಗಿ ಹೇಳಿದೆ. ಐಟಿ ಕ್ಷೇತ್ರದಲ್ಲಿ ಬೇರೆಲ್ಲಾ ಸಂಸ್ಥೆಗಳು ಹೇಳಿಕೊಳ್ಳುವಂತಹ ಹೆಚ್ಚಿನ ಪ್ರಗತಿ ಕಾಣದ ಇಂದಿನ ದಿನಗಳಲ್ಲೂ ಟಿಸಿಎಸ್ ಮಾತ್ರ ಪರವಾಗಿಲ್ಲ ಎನ್ನುವ ಪ್ರಗತಿಯ ಹಾದಿಯಲ್ಲಿದೆ. ಕಳೆದ ವರ್ಷ ನಾಲ್ಕು ಬಿಲಿಯನ್ ಡಾಲರ್ ಹಣವನ್ನ ತನ್ನ ಷೇರುದಾರರಿಗೆ ಡಿವಿಡೆಂಡ್ ರೂಪದಲ್ಲಿ ಹಣವನ್ನ ಹಿಂತಿರುಗಿಸಿತ್ತು. ಮಾರ್ಚ್ 2018 ರಲ್ಲಿ ತನ್ನ ಬ್ಯಾಲೆನ್ಸ್ ಶೀಟ್ ನಲ್ಲಿ 7 ಬಿಲಿಯನ್ ಡಾಲರ್ ಗೂ ಹೆಚ್ಚಿನ ಹಣವಿದೆ ಎಂದು ತೋರಿಸಿತ್ತು. 

ಸ್ಟಾಕ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ವಿಧಿಸಿರುವ ನಿಯಮಗಳ ಪ್ರಕಾರ 15 ಪ್ರತಿಶತ ಇಂತಹ ಹಣವನ್ನ ಸಣ್ಣ ಹೂಡಿಕೆದಾರರ ಷೇರು ಖರೀದಿ ಮಾಡಲು ಉಪಯೋಗಿಸಬೇಕು. ಅಂದರೆ ಟಿಸಿಎಸ್ ಸಂಸ್ಥೆ ನಿಗದಿ ಮಾಡಿರುವ 16೦೦೦ ಕೋಟಿ ರೂಪಾಯಿಯಲ್ಲಿ 15 ಪ್ರತಿಶತ ಅಂದರೆ 24೦೦ ಕೋಟಿ ರೂಪಾಯಿ ಹಣವನ್ನ ಸಣ್ಣ ಹೂಡಿಕೆದಾರರ ಷೇರನ್ನ ಮೊದಲು ಖರೀದಿಸಬೇಕು. 

ಎರಡು ಲಕ್ಷ ಅಥವಾ ಅದಕ್ಕೂ ಕಡಿಮೆ ರೂಪಾಯಿ ಮೌಲ್ಯದ ಷೇರನ್ನ ಹೊಂದಿರುವ ಹೂಡಿಕೆದಾರರನನ್ನ ಸಣ್ಣ ಹೂಡಿಕೆದಾರ ಎಂದು ಪರಿಗಣಿಸಲಾಗಿದೆ. ಟಿಸಿಎಸ್ ನಲ್ಲಿ ಇಂತಹ ಸಣ್ಣ ಹೂಡಿಕೆದಾರರ ಸಂಖ್ಯೆಯೇ 4,78,೦೦೦ಕ್ಕೂ ಹೆಚ್ಚಿದೆ. ಟಿಸಿಎಸ್ ಇರಲಿ ಅಥವಾ ಯಾವುದೇ ಸಂಸ್ಥೆಯಿರಲಿ ತನ್ನ ಷೇರನ್ನ ಮರು ಖರೀದಿ ಅಥವಾ ಬಯ್ ಬ್ಯಾಕ್ ಮಾಡುವುದಕ್ಕೆ ಹಲವು ಅರ್ಥ, ಆಯಾಮಗಳಿರುತ್ತವೆ. ಹೀಗಾಗಿ ಸಣ್ಣ ಹೂಡಿಕೆದಾರ ದೊಡ್ಡ ಹೂಡಿಕೆದಾರರ ಹೊಸ ಪ್ರಯೋಗಗಳಿಗೆ ಬಲಿಯಾಗಬಾರದು ಎನ್ನುವುದು ಸೆಬಿಯ ಉದ್ದೇಶ. ಇರಲಿ. ಏನಿದು ಷೇರು ಮರು ಖರೀದಿ, ಅಥವಾ ಬಯ್ ಬ್ಯಾಕ್ ಆಫ್ ಷೇರ್ಸ್ ಎಂದರೇನು? ಬಯ್ ಬ್ಯಾಕ್ ಮಾಡುವ ಉದ್ದೇಶವೇನು? ಇತ್ಯಾದಿ ವಿಷಯಗಳ ಬಗ್ಗೆ ಇಂದಿನ ಹಣಕ್ಲಾಸುವಿನಲ್ಲಿ ತಿಳಿದುಕೊಳ್ಳೋಣ. 

ಬಯ್ ಬ್ಯಾಕ್ ಆಫ್ ಷೇರ್ಸ್ ಎಂದರೇನು?

ಇದರ ಹೆಸರಲ್ಲಿ ಎಲ್ಲವೂ ಇದೆ. ಅಂದರೆ ಯಾವುದೇ ಪಬ್ಲಿಕ್ ಟ್ರೇಡೆಡ್ ಕಂಪನಿ ತನ್ನ ಸಾಮಾನ್ಯ ಷೇರುದಾರನಿಂದ ತನ್ನ ಕಂಪನಿಯ ಷೇರನ್ನ ಮಾರುಕಟ್ಟೆಯ ಮೌಲ್ಯ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯ ಕೊಟ್ಟು ಮರಳಿ ಕೊಳ್ಳುವ ಪ್ರಕ್ರಿಯೆಗೆ ಬಯ್ ಬ್ಯಾಕ್ ಆಫ್ ಷೇರ್ಸ್ ಅಥವಾ ಷೇರು ಮರು ಖರೀದಿ ಎನ್ನುತ್ತಾರೆ. ಉದಾಹರಣೆ ನೋಡೋಣ. ಟಿಸಿಎಸ್ ಸಂಸ್ಥೆ ತನ್ನ ಬಳಿ ಇರುವ ಹಲವು ಪ್ರಾಜೆಕ್ಟ್ ಗಳನ್ನ ಪೂರ್ಣಗೊಳಿಸಲು ಹಣದ ಅವಶ್ಯಕೆತೆಗಾಗಿ ಜನ ಸಾಮಾನ್ಯರಿಂದ ಹಿಡಿದು ಯಾರು ಬೇಕಾದರೂ ಷೇರು ಕೊಳ್ಳಬಹದು ಎಂದು ಮಾರುಕಟ್ಟೆಯಲ್ಲಿ ಷೇರನ್ನ ವಿತರಣೆ ಮಾಡಿ ತನಗೆ ಬೇಕಾದ ಹಣವನ್ನ ಪಡೆದುಕೊಂಡಿತು. ಈಗ ಟಿಸಿಎಸ್ ಬಳಿ ಹಣವಿದೆ ಹೀಗಾಗಿ ಅದು ಹಿಂದೆ ಹಣಕ್ಕಾಗಿ ಮಾರಿದ್ದ ಷೇರನ್ನ ವಾಪಸ್ಸು ಪಡೆಯಲು ಮಾಡಿರುವ ನಿರ್ಧಾರಕ್ಕೆ ಬಯ್ ಬ್ಯಾಕ್ ಅಥವಾ ಷೇರು ಮರು ಖರೀದಿ ಎನ್ನಲಾಗುತ್ತದೆ. 

ಮರು ಖರೀದಿ ಮಾಡುವ ಉದ್ದೇಶವೇನು?

ಹಲವು ಸಂಸ್ಥೆಗಳು ತಮ್ಮ ಷೇರನ್ನ ಮರು ಖರೀದಿ ಮಾಡಿದ ಉದಾಹರಣೆಗಳು ನಮ್ಮ ಮುಂದಿದೆ. ಟಿಸಿಎಸ್ ಮಾಡುತ್ತಿರುವ ಈ ಕ್ರಿಯೆ ಪ್ರಥಮವೇನು ಅಲ್ಲ. ಹೀಗೆ ತನ್ನ ಕಂಪನಿಯ ಷೇರನ್ನ ಮರಳಿ ಪಡೆಯುವ ಹಿಂದೆ ಒಂದಲ್ಲ ಹತ್ತಾರು ಕಾರಣಗಳಿರುತ್ತವೆ. ಈಗ ಪಟ್ಟಿ ಮಾಡಲಿರುವ ಕಾರಣಗಳು ಟಿಸಿಎಸ್ ಸಂಸ್ಥೆಯಲ್ಲಿದೆ ಎಂದರ್ಥವಲ್ಲ. ಸಾಮಾನ್ಯವಾಗಿ ಈ ಕಾರಣಗಳಿಗಾಗಿ ಸಂಸ್ಥೆ ಮರು ಖರೀದಿಯಂತಹ ನಿರ್ಧಾರಕ್ಕೆ ಮುಂದಾಗುತ್ತದೆ. 

1. ಸಂಸ್ಥೆಯಲ್ಲಿ ಹೊಸ ಕೆಲಸದ ಅಥವಾ ಐಡಿಯಾದ ಕೊರತೆ: ಗಮನಿಸಿ ನೋಡಿ ಯಾವುದೇ ಸಂಸ್ಥೆ ಮಾರುಕಟ್ಟೆಯಲ್ಲಿ ತನ್ನ ಷೇರನ್ನ ವಿತರಣೆ ಮಾಡಿ ಹಣವನ್ನ ಏಕೆ ಸಂಗ್ರಹಿಸುತ್ತದೆ? ಏಕೆಂದರೆ ಅದರ ಬಳಿ ಹೊಸ ಹೊಸ ಕೆಲಸಗಳು ಹೊಸ ಕಲ್ಪನೆಗಳು ಇರುತ್ತವೆ. ಅವನ್ನ ಸಾಕಾರಗೊಳಿಸಲು ಅದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಹೀಗಾಗಿ ಅವುಗಳು ತಮ್ಮ ಷೇರನ್ನ ಜನರಿಗೆ/ಹೂಡಿಕೆದಾರರಿಗೆ ಮಾರುತ್ತವೆ. ಈಗ ನೀವೇ ಯೋಚಿಸಿ ನೋಡಿ ಯಾವುದೇ ಸಂಸ್ಥೆ ಹೀಗೆ ಜನರಿಂದ ಸಂಗ್ರಹಿಸಿದ ಹಣವನ್ನ ವಾಪಸ್ಸು ಕೊಡಲು ಮುಂದಾಗುತ್ತದೆ ಎಂದರೆ ಅದರ ಬಳಿ ತಾನು ಹಿಂದೆ ಯೋಚಿಸಿದಂತೆ ಯೋಜನೆ ಮುಂದುವರಿಸಲು ಕೌಶಲ್ಯದ ಕೊರತೆ ಅಥವಾ ಕೆಲಸದ ಕೊರತೆಯಿದೆ ಎಂದರ್ಥ. 

2. ದೊಡ್ಡ ಹೂಡಿಕೆದಾರರಿಗೆ ಹೆಚ್ಚಿನ ಪಾಲು ಸಿಗಲಿ ಎನ್ನುವ ಆಶಯ: ಒಂದು ಸಂಸ್ಥೆ ಚೆನ್ನಾಗಿ ಅಭಿವೃದ್ಧಿ ಹೊಂದಿದ ನಂತರ ಅದಕ್ಕೆ ಸಣ್ಣ ಪುಟ್ಟ ಲಕ್ಷಾಂತರ ಹೂಡಿಕೆದಾರರ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ತನ್ನ ಬಳಿ ಇರುವ ಹೆಚ್ಚಿನ ಲಾಭದ ಹಣದಲ್ಲಿ ಷೇರು ಮರು ಖರೀದಿ ಮಾಡಿದರೆ ಮುಂಬರುವ ದಿನಗಳಲ್ಲಿ ತನ್ನ ದೊಡ್ಡ ಹೂಡಿಕೆದಾರರಿಗೆ ಹೆಚ್ಚಿನ ಲಾಭಂಶ ಹಂಚಬಹದು ಎನ್ನುವುದು ಕೂಡ ಉದ್ದೇಶವಾಗಿರುತ್ತದೆ. ಉದಾಹರಣೆ ನೋಡಿ ಟಿಸಿಎಸ್ ನ ವಾರ್ಷಿಕ ಲಾಭ 12 ಸಾವಿರ ಎಂದುಕೊಳ್ಳಿ, ಅದರಲ್ಲಿ 2 ಸಾವಿರ ಬದಿಗಿರಿಸಿ ಹತ್ತು ಸಾವಿರವನ್ನ ಡಿವಿಡೆಂಡ್ ಮೂಲಕ ಷೇರುದಾರರಿಗೆ ಹಂಚಲು ನಿರ್ಧರಿಸಿತು ಎಂದುಕೊಳ್ಳಿ. ಟಿಸಿಎಸ್ ಸಂಸ್ಥೆಯ ಒಟ್ಟು ಷೇರುದಾರರ ಸಂಖ್ಯೆ ಸಾವಿರ ಎಂದುಕೊಳ್ಳಿ. ಪ್ರತಿ ಷೇರುದಾರನಿಗೆ ಹತ್ತು ರೂಪಾಯಿ ಲಾಭ ಸಿಕ್ಕಿತು. ಈಗ ಟಿಸಿಎಸ್ ಷೇರು ಮರು ಖರೀದಿ ಮೂಲಕ 250 ಜನ ಷೇರುದಾರರನ್ನ ನಿವೃತ್ತಿ ಮಾಡಿದರೆ ಮುಂಬರುವ ದಿನಗಳಲ್ಲಿ ಬರುವ ಲಾಭ ಉಳಿದ 750 ಷೇರುದಾರರ ನಡುವೆ ಹಂಚಲಾಗುತ್ತದೆ. 

3. ಷೇರಿನ ಮಾರುಕಟ್ಟೆ ಮೌಲ್ಯ ಕಡಿಮೆಯಿದೆ ಎನ್ನುವುದು ಗೊತ್ತಿರುವುದು: ಅಂದರೆ ಗಮನಿಸಿ ಟಿಸಿಎಸ್ ನ ಒಂದು ಷೇರಿನ ಮೌಲ್ಯ 1೦೦ ರೂಪಾಯಿ ಎಂದುಕೊಳ್ಳಿ, ಆಡಳಿತ ಮಂಡಳಿಗೆ ಗೊತ್ತಿರುತ್ತದೆ ಇದರ ನಿಜವಾದ ಮೌಲ್ಯ 120 ಅಥವಾ 13೦ ಎಂದು. ಆದರೂ ಮಾರುಕಟ್ಟೆಯಲ್ಲಿ ಇರುವ 100 ರೂಪಾಯಿ ಮೌಲ್ಯಕ್ಕೆ ಚಕಾರ ಎತ್ತುವುದಿಲ್ಲ. ಷೇರು ಮರು ಖರೀದಿ ಮಾಡಿದ ನಂತರ ತನ್ನ ಮಾರುಕಟ್ಟೆಯ ನಿಜವಾದ ಮೌಲ್ಯಕ್ಕೆ ಅಂದರೆ 120/130 ಕ್ಕೆ ಏರಿಸುತ್ತದೆ. ಹೀಗಾಗಿ ಉಳಿದ ತನ್ನ ದೊಡ್ಡ ಹೂಡಿಕೆದಾರರಿಗೆ ಹೆಚ್ಚಿನ ಲಾಭ ನೀಡುವುದರ ಜೊತೆಗೆ ಕಂಪನಿಯ ಮೌಲ್ಯವೃದ್ಧಿ ಮಾಡುವುದು ಉದ್ದೇಶವಾಗಿರುತ್ತದೆ. 

4. ಕಂಪನಿಯ ಹುಟ್ಟಿಗೆ ಕಾರಣರಾದ ಪ್ರೊಮೋಟರ್ಸ್ ಮತ್ತು ಇತರ ಉನ್ನತ ಹುದ್ದೆಯಲ್ಲಿರುವ ಜನರಿಗೆ ಅನುಕೂಲ ಮಾಡಿಕೊಡಲು ಕೂಡ ಷೇರು ಮರು ಖರೀದಿ ಮಾಡಲಾಗುತ್ತದೆ. ಅಂದರೆ ಕಂಪನಿಯ ಅಧಿಕಾರದ ಚುಕ್ಕಾಣಿ ಹಿಡಿದವರಿಗೆ ಸಂಸ್ಥೆಯ ಭವಿಷ್ಯದ ಕುರಿತು ಒಂದು ನಿಖರತೆಯಿರುತ್ತದೆ. ಈ ಸಂಸ್ಥೆ ಯಾವ ಮಟ್ಟ ಮುಟ್ಟಬಲ್ಲದು ಎನ್ನುವ ಒಂದು ಕಲ್ಪನೆ ಅವರಲ್ಲಿದ್ದರೆ ಆಗ ಸಂಸ್ಥೆಗೆ ಹೆಚ್ಚಿನ ಪಾಲುದಾರರು ಬೇಡ ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಆಗ ಪ್ರತಿ ಷೇರಿಗೆ ಬರುವ ಆದಾಯ ಜಾಸ್ತಿಯಾಗುತ್ತದೆ. ಗಮನಿಸಿ ಇಂತಹ ಹುದ್ದೆಯಲ್ಲಿರುವವರಿಗೆ ಮಾಸಿಕ ವೇತನ ರೂಪದಲ್ಲಿ ಹಣ ದೊರೆಯುವುದು ಕಡಿಮೆ. ಅವರಿಗೆ ಕಂಪನಿಯ ಷೇರುಗಳನ್ನ ವಿತರಣೆ ಮಾಡಿರುತ್ತಾರೆ. ಹೀಗಾಗಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಕೂಡ ಆಡಳಿತ ಮಂಡಳಿ ಇಂತಹ ನಿರ್ಧಾರ ಕೈಗೊಳ್ಳುತ್ತದೆ. 

5. ಕೆಲವೊಮ್ಮೆ ನಿಜವಾಗಿಯೂ ಸಂಸ್ಥೆಯ ಬಳಿ ಹೆಚ್ಚಿನ ಹಣ ಲಾಭದ ರೂಪದಲ್ಲಿ ಸಂಗ್ರಹವಾಗುತ್ತದೆ. ಅಂದಿನ ದಿನದ ಸ್ಥಿತಿಯಲ್ಲಿ ಆ ಹಣವನ್ನ ಉಪಯೋಗಿಸುವುದು ಹೇಗೆ ಎನ್ನುವ ನಿಖರತೆ ಸಂಸ್ಥೆಗೆ ಇರುವುದಿಲ್ಲ. ಆದರೆ ಹಣವನ್ನ ಸುಮ್ಮನೆ ಇಟ್ಟುಕೊಂಡರೆ ಅದರಿಂದ ಯಾವುದೇ ತೆರನಾದ ಲಾಭವಿಲ್ಲ. ಈ ಕಾರಣಕ್ಕೂ ಹಲವು ಬಾರಿ ಷೇರು ಮರು ಖರೀದಿಯಂತಹ ನಿರ್ಧಾರ ಮಾಡಲಾಗುತ್ತದೆ. 

ಷೇರು ಮರು ಖರೀದಿ ಒಳ್ಳೆಯದೇ ಅಥವಾ ಕೆಟ್ಟದ್ದೇ ? 

ಇದಕ್ಕೆ ಉತ್ತರ ಇದಮಿತ್ತಂ ಎಂದು ಹೇಳುವುದು ಕಷ್ಟ. ಷೇರು ಮರುಖರೀದಿ ಸಂಸ್ಥೆಯ ಆಡಳಿತ ವರ್ಗ ಅಥವಾ ತನ್ನ ದೊಡ್ಡ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡಲು ಮಾಡಿದ್ದರೆ ಅದು ಖಂಡಿತ ತಪ್ಪು. ಹಾಗೆಯೇ ಸಂಸ್ಥೆಯ ಬಳಿ ಹೊಸ ಯೋಜನೆಯಿಲ್ಲ ಅಥವಾ ಭವಿಷ್ಯದ ಬಗ್ಗೆ ನಿಖರತೆ ಇಲ್ಲ ಎಂದು ಷೇರು ಮರು ಖರೀದಿ ಮಾಡಿದ್ದರೆ ಅದು ಕೂಡ ಋಣಾತ್ಮಕ ಅಂಶವೇ ಸರಿ. ಇದು ಸರಿ ಅಥವಾ ಇದು ತಪ್ಪು ಎಂದು ನಿರ್ಧರಿಸಲು ಆಗದ ಒಂದು ಸಣ್ಣ ಗೆರೆಯಷ್ಟೇ ಅಂತರವಿರುತ್ತದೆ. ಹೀಗಾಗಿ ಇದಕ್ಕೆ ಸರಿಯಾದ ಉತ್ತರ ಸಮಯವೇ ನೀಡಲಿದೆ. 

ಷೇರು ಮರು ಖರೀದಿ ಸರಿ ಅಥವಾ ತಪ್ಪು ಎಂದು ಹೇಳಲು ಯಾವುದೂ ನಿಖರ ಅಂಶವಿಲ್ಲವೇ ? 

ಖಂಡಿತಾ ಇದೆ. ಇದಕ್ಕೆ ನಾವು ಷೇರು ಮರು ಖರೀದಿ ಮಾಡುವ ಸಂಸ್ಥೆಯ ಬ್ಯಾಲನ್ಸ್ ಶೀಟ್ ನೋಡಬೇಕು. ಷೇರುದಾರ ಸಂಸ್ಥೆಯ ಪಾಲುದಾರ ಆತನಿಂದ ಪಡೆದ ಹಣ ಸಾಲ ಎನಿಸಿಕೊಳ್ಳುವುದಿಲ್ಲ. ಷೇರುದಾರರಲ್ಲದೆ ಸಂಸ್ಥೆ ಹಲವು ಸಂಸ್ಥೆ ಅಥವಾ ವ್ಯಕ್ತಿಗಳಿಂದ ಸಾಲವನ್ನೂ ಕೂಡ ಪಡೆದಿರುತ್ತದೆ. ಹೀಗೆ ಸಾಲ ಕೊಟ್ಟವರ ಹಣವನ್ನ ಮೊದಲು ಹಿಂತಿರುಗಿಸಬೇಕು. ನಂತರ ಬಯ್ ಬ್ಯಾಕ್. ಆದರೆ ಸಾಲವನ್ನ ಹಾಗೆ ಉಳಿಸಿಕೊಂಡು ಷೇರನ್ನ ಸಂಸ್ಥೆ ಮರಳಿ ಖರೀದಿ ಮಾಡಿದರೆ ಅದು ಖಂಡಿತ ಉತ್ತಮ ಲಕ್ಷಣವಲ್ಲ. ಯಾರಿಗಾದರೂ ಇದರಿಂದ ವೈಯಕ್ತಿಕ ಲಾಭವಾಗುತ್ತಿರುತ್ತದೆ. ಅಥವಾ ಸಂಸ್ಥೆಯ ನೆಡವಳಿಕೆ ಅನುಮಾನಾಸ್ಪದ ಎಂದು ನಿಸ್ಸಂಶಯವಾಗಿ ಹೇಳಬಹದು. 

ಕೊನೆಮಾತು: ಷೇರು ಮರು ಖರೀದಿ ಸಂಸ್ಥೆ ತನ್ನ ಬಳಿ ಇರುವ ಹಣವನ್ನ ಖರ್ಚು ಮಾಡಲು ಇಡುವ ಹೆಜ್ಜೆ. ಇದೊಂದು ಅತ್ಯಂತ ಸೂಕ್ಷ್ಮ ನಿರ್ಧಾರ. ಹೆಚ್ಚಿನ ಸನ್ನಿವೇಶದಲ್ಲಿ ಈ ನಿರ್ಧಾರಗಳು ಸಂಸ್ಥೆಗೆ ಋಣಾತ್ಮಕವಾಗಿ ಸಾಬೀತಾಗುತ್ತದೆ. ಇಂತಹ ನಿರ್ಧಾರಗಳು ತೆಗೆದು ಕೊಳ್ಳುವುದಕ್ಕೆ ನಿಜವಾದ ಕಾರಣವೇನೇ ಇರಲಿ, ಇದೊಂದು ಅತ್ಯಂತ ಧೈರ್ಯದ ಜೊತೆ ಜೊತೆಗೆ ಕಠಿಣ ನಿರ್ಧಾರವೆಂದು ಹೇಳಬಹದು. ಇಂತಹ ನಿರ್ಧಾರದ ನಿಖರ ಫಲಿತಾಂಶ ಮಾತ್ರ ಹೇಳಲು ಬರುವುದಿಲ್ಲ. ಬೇರೆ ಯಾವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ತೆಗೆದುಕೊಂಡಿರುವ ಕೊನೆಯ ನಿರ್ಧಾರ ಎಂದು ಮಾತ್ರ ಹೇಳಬಹದು. 

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
ಸಂಬಂಧಿಸಿದ್ದು...

ಲೇಖಕರ ಕುರಿತು : ಕಳೆದ ಎರಡು ದಶಕದಿಂದ ಆಂತರಿಕ ಲೆಕ್ಕ ಪರಿಶೋಧಕರಾಗಿ ದುಬೈ ಮತ್ತು ಯೂರೋಪಿನ ವಿತ್ತ ಪ್ರಪಂಚದಲ್ಲಿ ಬದುಕು ಕಂಡು ಕೊಂಡಿರುವ ಶ್ರೀ. ರಂಗಸ್ವಾಮಿ ಮೂಕನಹಳ್ಳಿಯವರು ಹವ್ಯಾಸಿ ಬರಹಗಾರರು. ವೃತ್ತಿ ಮತ್ತು ಪ್ರವೃತ್ತಿಯ ಸಲುವಾಗಿ ಐವತ್ತಕ್ಕೂ ಹೆಚ್ಚು ದೇಶಗಳ ಸುತ್ತಿರುವ ಲೇಖಕರು ತಾವು ಕಂಡ ದೇಶಗಳಷ್ಟೇ ಅಲ್ಲದೆ ಜಗತ್ತಿನ ಆರ್ಥಿಕ ಸ್ಥಿತಿಗತಿ ಬಗ್ಗೆ ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿಗೆ ಲೇಖನಗಳ ಬರೆದಿದ್ದಾರೆ. ಇವರು ಕಂಡ ದೇಶಗಳ ಪ್ರವಾಸಿ ಕಥನ ತರಂಗ, ವಿಜಯ ನೆಕ್ಸ್ಟ್ ಮತ್ತು ಡಿಜಿಟಲ್ ಕನ್ನಡದಲ್ಲಿ ಲೇಖನ ಮತ್ತು ಸರಣಿ ರೂಪದಲ್ಲಿ ಪ್ರಕಟವಾಗಿವೆ. ಹಣಕ್ಲಾಸು ಕನ್ನಡಪ್ರಭ.ಕಾಮ್ ನಲ್ಲಿ ಪ್ರತಿ ಗುರುವಾರ ಪ್ರಕಟವಾಗುವ ಅಂಕಣ ಬರಹ.
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Hanaclassu, Buy-back of shares, ಹಣಕ್ಲಾಸು, ಷೇರು ಮರು ಖರೀದಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS