Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Shivakumara Swamiji

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ

Casual Photo

ಇವಿಎಂ ಹ್ಯಾಕ್ ಸಾಧ್ಯವಿಲ್ಲ, ದುರುದ್ದೇಶ ಪೂರಿತ ಆರೋಪದ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ- ಚುನಾವಣಾ ಆಯೋಗ

Arun Jaitly

ಮಹಾಘಟಬಂಧನ್' ಕ್ಷಣಿಕ ರಾಜಕೀಯ ಮೈತ್ರಿ: ಪ್ರತಿಪಕ್ಷಗಳ ಒಗ್ಗಟ್ಟಿನ ವಿರುದ್ಧ ಜೇಟ್ಲಿ ವಾಗ್ದಾಳಿ

ICC Test Rankings: India and Virat Kohli maintain top spot

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ಭಾರತ, ವಿರಾಟ್ ಕೊಹ್ಲಿ

Attempt to murder case registered against Congress MLA who

ಶಾಸಕ ಗಣೇಶ್ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು; ಮುಖಕ್ಕೆ ಹೊಡೆದು, ತಲೆಯನ್ನು ಗೋಡೆಗೆ ಗುದ್ದಿದರು: ಆನಂದ್‌ ಸಿಂಗ್

Shashikala

ಕಾರಾಗೃಹ ನಿಯಮಗಳನ್ನು ಉಲ್ಲಂಘಿಸಿಲ್ಲ- ಶಶಿಕಲಾ ಪರ ವಕೀಲರ ಹೇಳಿಕೆ

ಜೇಕಬ್

ಟೀಂ ಇಂಡಿಯಾ ಮಾಜಿ ಆಟಗಾರ ಜೀವನ್ಮರಣ ಹೋರಾಟ; ಬದುಕಿಸಿಕೊಡಿ ಎಂದು ಪತ್ನಿ ಕಂಬನಿ!

Chief Justice of India Ranjan Gogoi.

ಸಿಬಿಐ ಮಧ್ಯಂತರ ನಿರ್ದೇಶಕರ ನೇಮಕಾತಿ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ರಂಜನ್ ಗೊಗೊಯ್

Dr. Shivakumara Swamiji

ಶಿವಕುಮಾರ ಸ್ವಾಮೀಜಿ ಅಂತಿಮ ದರ್ಶನ, ಯಶವಂತಪುರದಿಂದ ತುಮಕೂರಿಗೆ ವಿಶೇಷ ರೈಲು

8 people died after a boat was submerged in sea near Kaewar

ಕಾರವಾರ: ಜಾತ್ರೆ ಮುಗಿಸಿ ಬರುವಾಗ ದೋಣಿ ಮುಳುಗಡೆ, 9 ಮಂದಿ ನೀರುಪಾಲು, ಹಲವರು ನಾಪತ್ತೆ

Anna says Lokpal would have prevented Rafale

ಲೋಕಪಾಲ್ ನೇಮಕವಾಗಿದ್ದರೆ ರಾಫೆಲ್ ಹಗರಣ ತಡೆಯಬಹುದಿತ್ತು: ಅಣ್ಣಾ ಹಜಾರೆ

Thak Thak gang robs, assaults actress Farheen Prabhakar in Delhi

'ಹಳ್ಳಿ ಮೇಷ್ಟ್ರು' ನಟಿಯನ್ನು ದೋಚಿದ ತಕ್ ತಕ್ ಗ್ಯಾಂಗ್!

Collective photo

ಕೇಂದ್ರ ಸರ್ಕಾರ ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕು- ಖರ್ಗೆ ಒತ್ತಾಯ

ಮುಖಪುಟ >> ಕ್ರಿಕೆಟ್

ಒಂದೇ ಪಂದ್ಯದಲ್ಲಿ ಬರೊಬ್ಬರಿ 1,045 ರನ್ ಸಿಡಿಸಿ ದಾಖಲೆ ಬರೆದ ಮುಂಬೈ ಬಾಲಕ ತನಿಷ್ಕ್ ಗಾವಟೆ!

ಈ ಹಿಂದೆ ಬಾಲಕ ಪ್ರಣವ್ ಧನವಾಡೆ ನಿರ್ಮಿಸಿದ್ದ 1, 009 ರನ್ ಗಳ ದಾಖಲೆ ಧೂಳಿಪಟ
Mumbai Boy Tanishq Gavate Smashes Unbeaten 1045 Runs In School Game

ದಾಖಲೆ ನಿರ್ಮಿಸಿದ ಬಾಲಕ ತನಿಷ್ಕ್ ಗಾವಟೆ

ಮುಂಬೈ: ದೇಶೀ ಕ್ರಿಕೆಟ್ ನಲ್ಲಿ ಮುಂಬೈನ ಬಾಲಕನೋರ್ವ ಅಭೂತಪೂರ್ವ ಸಾಧನೆ ಮಾಡಿದ್ದು, ಒಂದೇ ಪಂದ್ಯದಲ್ಲಿ ಬರೊಬ್ಬರಿ 1,045 ರನ್ ಸಿಡಿಸುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾನೆ.

ನವಿ ಮುಂಬೈನ ಶಾಲಾ ಬಾಲಕ ತನಿಷ್ಕ್ ಗಾವಟೆ ಈ ದಾಖಲೆ ನಿರ್ಮಿಸಿದ್ದು, ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ ನ ಆಶ್ರಯದಲ್ಲಿ ನಡೆದ ಅಂಡರ್ -14 ನವಿ ಮುಂಬೈ ಶಿಲ್ಡ್ ಆಹ್ವಾನಿತ ಕ್ರಿಕೆಟ್ ಟೂರ್ನಮೆಂಟ್‌ ಪಂದ್ಯದಲ್ಲಿ ಗಾವಟೆ  ಮಂಗಳವಾರ ಔಟಾಗದೆ 1,045 ರನ್ ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಶಾಲಾ ಕ್ರಿಕೆಟ್‌ನಲ್ಲಿ ಇದೊಂದು ವಿಶ್ವದಾಖಲೆಯಾಗಿದ್ದು, ಈ ಹಿಂದೆ 2016ರ ಜನವರಿಯಲ್ಲಿ ಇದೇ ಮುಂಬೈನ ಬಾಲಕ ಪ್ರಣವ್  ಧನವಾಡೆ 1, 009 ರನ್ ಸಿಡಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ.

ಇದೀಗ ತನಿಷ್ಕ್ ಗಾವಟೆ 1, 045 ರನ್ ಸಿಡಿಸುವ ಮೂಲಕ ಈ ದಾಖಲೆಯನ್ನು ಧೂಳಿಪಟ ಮಾಡಿ ತನ್ನ ಹೆಸರಿಗೆ ನೂತನ ದಾಖಲೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅವರ ಕ್ರಿಕೆಟಿಂಗ್ ಕೋಚ್ ಮನೀಶ್ ಮಾಹಿತಿ  ನೀಡಿದ್ದು, ಕೋಪರ್‌ ಖೈರ್ನೆಯ ಯಶವಂತ್‌ ರಾವ್ ಚವಾಣ್ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಯಶವಂತ್‌ ರಾವ್ ಚವಾಣ್ ಇಲೆವನ್ ತಂಡದ ಪರ ಆಡಿದ ಗಾವಟೆ ಸೋಮವಾರ ಮತ್ತು  ಮಂಗಳವಾರ ಮ್ಯಾರಥಾನ್ ಇನ್ನಿಂಗ್ಸ್ ಆಡಿದ್ದು ಈ ವೇಳೆ 1, 045 ರನ್ ಸಿಡಿಸಿ ಎಂದು ಹೇಳಿದ್ದಾರೆ.

ಈ ಇನ್ನಿಂಗ್ಸ್ ನಲ್ಲಿ ಗಾವಟೆ ಯಶವಂತ್ ರಾವ್ ಚವಾಣ್ ಆಂಗ್ಲ ಮಾಧ್ಯಮ ಶಾಲಾ ತಂಡದ ವಿರುದ್ಧ 515 ಎಸೆತಗಳನ್ನು ಎದುರಿಸಿ 149 ಬೌಂಡರಿ ಮತ್ತು 67 ಸಿಕ್ಸರ್ ನೆರವಿನಿಂದ 1,045 ರನ್ ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ. 

ಈ ಮೊದಲು 2016ರ ಜನವರಿಯಲ್ಲಿ ಭಂಡಾರಿ ಕಪ್ ಇಂಟರ್-ಸ್ಕೂಲ್ ಟೂರ್ನಮೆಂಟ್‌ನಲ್ಲಿ ಇದೇ ಮುಂಬೈನ ಬಾಲಕ ಪ್ರಣವ್ ಧನವಾಡೆ 1,009 ರನ್ ಸಿಡಿಸಿ ದಾಖಲೆ ನಿರ್ಮಿಸಿದ್ದ. ಆದರೆ ಇದೀಗ 14ರ ಹರೆಯದ ತನಿಷ್ಕ್  ಗಾವಟೆ ಈ ದಾಖಲೆಯನ್ನು ಧೂಳಿಪಟ ಮಾಡಿದ್ದಾನೆ. ಧನವಾಡೆ1899ರಲ್ಲಿ ಅರ್ಥರ್ ಕಾಲಿನ್ಸ್ ದಾಖಲಿಸಿದ್ದ 628 ರನ್‌ಗಳ ದಾಖಲೆಯನ್ನು ಎರಡು ವರ್ಷಗಳ ಹಿಂದೆ ಮುರಿದು ಹೊಸ ದಾಖಲೆ ನಿರ್ಮಿಸಿದ್ದನು.
Posted by: SVN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Mumbai, Cricket Offbeat, Record, Tanishq Gavate, Pranav Dhanavade, ಮುಂಬೈ, ಕ್ರಿಕೆಟ್ ಸ್ವಾರಸ್ಯ, ದಾಖಲೆ, ತನಿಷ್ಕ್ ಗಾವಟೆ, ಪ್ರಣವ್ ಧನವಾಡೆ
English summary
A 14-year-old student achieved an unprecedented record as he smashed an unbeaten 1,045 runs in a local cricket tournament in Navi Mumbai, his coach claimed on Tuesday. Tanishq Gavate played this knock over two days - Monday and Tuesday - at the semi-final of the tournament at the Yashwantrao Chavan English Medium School ground in Koparkhairne, his coach Manish told PTI. Gavate played on a ground which has a leg side boundary of 60-65 yards, while the off side boundary was 50 yards, the coach claimed.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS