Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Voter turnout recorded till 9 am: Yogi, Ravi Shankar Prasad and others cast there votes

ಲೋಕಸಮರ: ಎಲ್ಲೆಡೆ ಬಿರುಸಿನ ಮತದಾನ, ಯೋಗಿ, ರವಿಶಂಕರ್ ಪ್ರಸಾದ್ ಸೇರಿ ಗಣ್ಯರಿಂದ ಹಕ್ಕು ಚಲಾವಣೆ

ಮುನಿರತ್ನ-ಸ್ಫೋಟ

ಆತಂಕ ಸೃಷ್ಠಿ: ಕಾಂಗ್ರೆಸ್ ಶಾಸಕ ಮುನಿರತ್ನ ಮನೆ ಬಳಿ ಸ್ಫೋಟ, ವ್ಯಕ್ತಿ ದೇಹ ಛಿದ್ರ ಛಿದ್ರ!

ಸಂಗ್ರಹ ಚಿತ್ರ

ಉಪ ಚುನಾವಣೆ: ಕುಂದಗೋಳ, ಚಿಂಚೋಳಿಯಲ್ಲೂ ಮತದಾನ ಆರಂಭ!

Cave PM Modi meditated in can be rented for Rs 990/day

ಪ್ರಧಾನಿ ಮೋದಿ ದ್ಯಾನಕ್ಕೆ ಕುಳಿತಿದ್ದ ಕೇದಾರನಾಥ್ ಗುಹೆಯ ವಿಶೇಷತೆಗಳೇನು ಗೊತ್ತೆ?

ಸಂಗ್ರಹ ಚಿತ್ರ

ಸ್ನೇಹಿತರೊಂದಿಗೆ ಸೇರಿ ಯುವತಿಯರಿಬ್ಬರ ಮೇಲೆ ಕನ್ನಡದ ನಟನಿಂದ ಅತ್ಯಾಚಾರ!

Nitish Kumar

ಗೋಡ್ಸೆಯ ಸಮರ್ಥಿಸಿಕೊಂಡ ಪ್ರಗ್ಯಾ ಠಾಕೂರ್ ರನ್ನು ಬಿಜೆಪಿಯಿಂದ ವಜಾಗೊಳಿಸಿ: ನಿತೀಶ್ ಕುಮಾರ್

TMC cadres attack BJP

7 ನೇ ಹಂತದ ಮತದಾನ: ಟಿಎಂಸಿ ಕಾರ್ಯಕರ್ತರಿಂದ ಬಿಜೆಪಿಯ ಬಾಬುಲ್ ಸುಪ್ರಿಯೋ ಮೇಲೆ ದಾಳಿ!

Shyam Saran Negi

ಭಾರತದ ಮೊದಲ ಮತದಾರನಿಂದ 17ನೇ ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾವಣೆ

Actress Radhika Kumaraswamy

ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿಗೆ ಪಿತೃ ವಿಯೋಗ'

PM Narendra Modi

ಕೇದಾರನಾಥದಲ್ಲಿ ಮೋದಿ ಪ್ರಾರ್ಥಿಸಿದ್ದೇನು ಗೊತ್ತೇ? ಕೇಳಿದರೆ ಅಚ್ಚರಿಯಾಗುತ್ತೆ

Mamata Banerjee

36 ಗಂಟೆಗಳಲ್ಲಿ ಬಹಿರಂಗ ಕ್ಷಮೆ ಕೇಳಿ, ಇಲ್ಲವಾದರೆ ಕಠಿಣಕ್ರಮ; ಪಿಎಂ ಮೋದಿಗೆ ಮಾನನಷ್ಟ ಮೊಕದ್ದಮೆ ನೋಟಿಸ್!

ಸಂಗ್ರಹ ಚಿತ್ರ

ನೋ ಪಾರ್ಕಿಂಗ್: ಬೈಕ್ ತೆಗಿ ಅಂದಿದ್ದಕ್ಕೆ ಮೈ ಮುಟ್ಟಿದ ಸವಾರ, ಲೇಡಿ ಕಾನ್‌ಸ್ಟೇಬಲ್ ಮಾಡಿದ್ದೇನು?

AIR to broadcast special programme on election results for 40 hours

ಆಲ್ ಇಂಡಿಯಾ ರೇಡಿಯೋದಲ್ಲಿ ಮತ ಎಣಿಕೆ ವಿಸ್ತೃತ ವರದಿ, 40 ಗಂಟೆಗಳ ವಿಶೇಷ ಪ್ರಸಾರ

ಮುಖಪುಟ >> ಕ್ರಿಕೆಟ್

ಬ್ರಿಯಾನ್ ಲಾರಾ, ಸಚಿನ್ ಗಿಂತ ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ?: ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದೇನು?

ಕ್ರಿಕೆಟ್ ಅಭಿಮಾನಿಗಳ ಗೊಂದಲಕ್ಕೆ ಕಾರಣವಾದ ಮೈಕಲ್ ವಾನ್ ಟ್ವೀಟ್, ಏಕದಿನದಲ್ಲಿ ಕೊಹ್ಲಿ ಶ್ರೇಷ್ಠ ಬ್ಯಾಟ್ಸಮನ್ ಎಂದ ಇಂಗ್ಲೆಂಡ್ ಮಾಜಿ ನಾಯಕ
Virat Kohli Better Than Sachin Tendulkar, Brian Lara? Ex-England Captain Makes Big Statement

ಸಂಗ್ರಹ ಚಿತ್ರ

ಲಂಡನ್: ಆಧುನಿಕ ಕ್ರಿಕೆಟ್ ನ ದ್ರುವತಾರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಮತ್ತು ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗಿಂತಲೂ ಶ್ರೇಷ್ಠ ಆಟಗಾರರೇ ಎಂಬ ಹೊಸದೊಂದು ವಾದ ಹುಟ್ಟಿಕೊಂಡಿದೆ.

ಹೌದು.. ಇಂತಹ ವಾದಕ್ಕೆ ಕಾರಣವಾಗಿದ್ದು, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅವರ ಟ್ವೀಟ್.. ನಿನ್ನೆ ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ತಮ್ಮ ಏಕದಿನ ವೃತ್ತಿ ಜೀವನದ 41ನೇ ಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ಪಂದ್ಯವನ್ನು ಭಾರತ 32 ರನ್ ಗಳ ಅಂತರದಲ್ಲಿ ಕಳೆದುಕೊಂಡಿತಾದರೂ, ಕೊಹ್ಲಿ ಬ್ಯಾಟಿಂಗ್ ವೈಖರಿ ಮಾತ್ರ ಎಲ್ಲರ ಗಮನ ಸೆಳೆಯಿತು.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಮೈಕಲ್ ವಾನ್, ದ ಗೋಟ್ ಈಸ್ ಅಟ್ ಅಗೈನ್ #ವಿರಾಟ್ (The Goat is at Again..) ಎಂದು ಟ್ವೀಟ್ ಮಾಡಿದ್ದಾರೆ. ವಾನ್ ಅವರ ಈ ಟ್ವೀಟ್ ಗೆ ತಲೆ ಕೆಡಿಸಿಕೊಂಡ ಅಭಿಮಾನಿಗಳು ಅವರ ಟ್ವೀಟ್ ಗೆ ಪ್ರಶ್ನೆಗಳ ಸುರಿಮಳೆ ಗರೆದಿದ್ದಾರೆ. ಈ ಪೈಕಿ ಓರ್ವ ಅಭಿಮಾನಿ.. ನೀವು ವಿರಾಟ್ ಕೊಹ್ಲಿಯನ್ನು ಗೋಟ್ (ಮೇಕೆ) ಎಂದು ಕರೆದಿದ್ದೀರಿ.. ಕೊಹ್ಲಿ.. ಲಾರಾ, ಸಚಿನ್, ಬ್ರಾಡ್ಮನ್ ಗಿಂತಲೂ ಶ್ರೇಷ್ಠ ಆಟಗಾರರೇ..! ಎಂದು ಪ್ರಶ್ನಿಸಿದ್ದಾರೆ. 

ಇದಕ್ಕೆ ಉತ್ತರ ನೀಡಿರುವ ವಾನ್, ಹೌದು.. ಕೊಹ್ಲಿ ಏಕದಿನ ಕ್ರಿಕೆಟ್ ಶ್ರೇಷ್ಠ ಆಟಗಾರ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಕೇವಲ 95 ಎಸೆತಗಳಲ್ಲಿ 123 ರನ್ ಸಿಡಿಸಿದ್ದರು. ಅಲ್ಲದೆ ಇದು ಅವರ ಏಕದಿನ ಕ್ರಿಕೆಟ್ ವೃತ್ತಿ ಜೀವನದ 41 ಶತಕ ಕೂಡ ಆಗಿತ್ತು. ಅಂತೆಯೇ ಕ್ಯಾಪ್ಟನ್ ಕೊಹ್ಲಿ ನಾಯಕರಾಗಿ ಅತಿವೇಗವಾಗಿ 4000 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದರು.
ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Ranchi, Cricket, india, Australia, 3rd ODI, Virat Kohli, Michael Vaughan, ರಾಂಚಿ, ಕ್ರಿಕೆಟ್, ಭಾರತ, ಆಸ್ಟ್ರೇಲಿಯಾ, 3ನೇ ಏಕದಿನ, ವಿರಾಟ್ ಕೊಹ್ಲಿ, ಮೈಕಲ್ ವಾನ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS