ನವದೆಹಲಿ: 2018ರ ಇಂಗ್ಲೆಂಡ್ ಪ್ರವಾಸ ಕೊಹ್ಲಿಗೆ ಬೇವು ಮತ್ತು ಬೆಲ್ಲ ಎರಡನ್ನೂ ನೀಡಿದೆ. ಬ್ಯಾಟಿಂಗ್ ನಲ್ಲಿ ಕೊಹ್ಲಿ ಬ್ಲಾಸ್ಟರ್ ಆದರೆ, ನಾಯಕತ್ವದಲ್ಲಿ ಮಾತ್ರ ಬಿಗ್ ಫ್ಲಾಪ್ ಆಗಿ ಉಳಿದಿದ್ದಾರೆ.
2014ರ ಇಂಗ್ಲೆಂಡ್ ಪ್ರವಾಸದ ಕಹಿ ನೆನಪುಗಳನ್ನು ಮರೆಸುವಂತಹ ಬ್ಯಾಟಿಂಗ್ ಪ್ರದರ್ಶನವನ್ನು 2018ರ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ತೋರಿದ್ದಾರೆ. ಟೆಸ್ಟ್ ಸರಣಿಯಲ್ಲಿ ಕೊಹ್ಲಿ 2 ಶತಕ, 2 ಅರ್ಧಶತಕಗಳೊಂದಿಗೆ 593 ರನ್ ಕಲೆ ಹಾಕಿದ್ದರು. ಇನ್ನು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-4 ಸೋಲಿನೊಂದಿಗೆ ಸರಣಿ ಕೈಚೆಲ್ಲಿದ್ದು ಅವರ ನಾಯಕತ್ವ ಫ್ಲಾಪ್ ಆಗಿರುವುದನ್ನು ತೋರಿಸುತ್ತದೆ.
ಇನ್ನು ಬ್ಯಾಟಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದರಿಂದ ವಿರಾಟ್ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ 930 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ನಾಯಕ ಕೊಹ್ಲಿ ಮಾಡಿದ ತಪ್ಪುಗಳೇನು?
* ವಿರಾಟ್ ಕೊಹ್ಲಿ ತಮ್ಮಷ್ಟೇ ಸಿದ್ಧತೆಯನ್ನು ಸಹ ಆಟಗಾರರು ನಡೆಸುವಂತೆ ಮಾಡದೆ ಇದ್ದಿದ್ದು.
* ಪ್ರತೀ ಪಂದ್ಯಕ್ಕೂ ತಂಡದ ಆಯ್ಕೆಯಲ್ಲಿ ಕೈಗೊಂಡ ಪದೇ ಪದೇ ತಪ್ಪು ನಿರ್ಧಾರಗಳು.
* ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ನೀಡಿದ್ದು.
* ಪಿಚ್, ಸ್ಥಳೀಯ ವಾತಾವರಣದ ಅರಿತು ರಣತಂತ್ರ ಹೂಡದೇ ಇರುವುದು.
* ಡಿಆರ್ಎಸ್ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದು.