Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಪುಲ್ವಾಮಾದಲ್ಲಿ ಎನ್ಕೌಂಟರ್: ಇಬ್ಬರು ಮುಜಾಹಿದ್ದೀನ್ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ!

Casual Photo

ಪ್ರಧಾನಿ ಪ್ರಚಾರ: 1.5 ಲಕ್ಷ ಕಿಲೋಮೀಟರ್ ವಾಯುಯಾನ, 142 ರ‍್ಯಾಲಿ

Dr.Veerendra Heggade

ನೀರಿನ ಕೊರತೆ: ಧರ್ಮಸ್ಥಳ ಪ್ರವಾಸ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ

ಸಂಗ್ರಹ ಚಿತ್ರ

ಡ್ರಾಪ್ ಕೇಳಿದ್ದೇ ತಪ್ಪಾಯ್ತಾ: ಸೇಲ್ಸ್‌ಗರ್ಲ್‌ ಅನ್ನು ಬೈಕ್‌ನಲ್ಲಿ ಕರೆದುಕೊಂಡು ತೋಟದ ಮನೆಗೆ ಹೋಗಿ ಆತ ಮಾಡಿದ್ದೇನು?

FIR against Amazon over products with images of Hindu gods

ಟಾಯ್ಲೆಟ್ ಮ್ಯಾಟ್ ನಲ್ಲಿ ಗಣೇಶನ ಚಿತ್ರ: ಬಾಯ್ಕಾಟ್ ಅಮೆಜಾನ್ ಅಭಿಯಾನ ಆರಂಭ

Prajwal Revanna

ಸುಳ್ಳು ಅಫಿಡಿವಿಟ್ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ಚುನಾವಣಾ ಆಯೋಗ ಕ್ರಮ

"Will Never Forgive Pragya Thakur For Insulting Bapu": PM On Godse Remark

ಬಾಪು ಅವಮಾನಿಸಿದ ಪ್ರಗ್ಯಾ ಸಿಂಗ್ ರನ್ನು ಯಾವುದೇ ಕಾರಣಕ್ಕೂ ಕ್ಷಮಿಸಲ್ಲ: ಪ್ರಧಾನಿ ಮೋದಿ

Sambhaji Patil

ಬೆಳಗಾವಿ : ಮಾಜಿ ಶಾಸಕ, ಎಂಇಎಸ್ ಮುಖಂಡ ಸಂಭಾಜಿ ಪಾಟೀಲ್ ನಿಧನ

Casual Photo

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ತೈವಾನ್

Reashma Pdekanoora

ವಿಜಯಪುರ: ಕಾಂಗ್ರೆಸ್ ನಾಯಕಿ ನಿಗೂಢ ಸಾವು, ಸೇತುವೆ ಕೆಳಗೆ ಶವ ಪತ್ತೆ

Kishor kumar

ಶಿವಮೊಗ್ಗ: ಸೇನೆ ಸೇರಲು ಆಸಕ್ತಿ ಹೊಂದಿರುವ ಯುವಕರಿಗೆ ಉಚಿತ ತರಬೇತಿ ನೀಡುವ ಮಾಜಿ ಸೈನಿಕ

Casual Photo

ಕೇದಾರನಾಥ,ಬದರೀನಾಥ ದೇಗುಲಗಳಿಗೆ ಭೇಟಿ ನೀಡಲು ಮೋದಿಗೆ ಆಯೋಗದ ಅನುಮತಿ

Rahul Gandhi

ಚುನಾವಣೆ ಮುಕ್ತಾಯದ ಹಂತದಲ್ಲಿ ಮೋದಿ ಪತ್ರಿಕಾಗೋಷ್ಠಿ : ರಾಹುಲ್ ಗಾಂಧಿ ಟೀಕೆ

ಮುಖಪುಟ >> ಲೋಕಸಭಾ ಚುನಾವಣೆ 2019 >> ಕರ್ನಾಟಕ

ಚಿಂಚೋಳಿ ಉಪಚುನಾವಣೆ: ರಂಗಪ್ರವೇಶಕ್ಕೆ ಕಾಂಗ್ರೆಸ್‍ನಲ್ಲಿ ಪೈಪೋಟಿ

Casual Photo

ಸಾಂದರ್ಭಿಕ ಚಿತ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಸದ್ದು ತಣ್ಣಗಾಗುತ್ತಿದ್ದಂತೆ ರಾಜ್ಯದಲ್ಲೀಗ ಉಪಚುನಾವಣೆಯ ಸಪ್ಪಳ ಹೆಚ್ಚಾಗುತ್ತಿದೆ. ಮೀಸಲು ಚಿಂಚೋಳಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಾಳಯದಲ್ಲಿ ಬಿ.ಫಾರಂ ಪಡೆಯಲು ಆಕಾಂಕ್ಷಿಗಳ ದಂಡು ಹೆಚ್ಚುತ್ತಿದೆ.

ಶಾಸಕ ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಕ್ಕೀಗ ಮೇ 19 ರಂದು ಉಪಚುನಾವಣೆ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಡಿದೆದ್ದು ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಜಾಧವ್, ಬಿಜೆಪಿಯಿಂದ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದಾರೆ.

ಮೈತ್ರಿ ಪಕ್ಷಗಳು ಒಟ್ಟಾಗಿ ಉಪಚುನಾವಣೆಯನ್ನು ಎದುರಿಸುತ್ತಿದ್ದು, ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಕಾಂಗ್ರೆಸ್ ಚಿಂಚೋಳಿಯನ್ನು ಮರುವಶಕ್ಕೆ ಪಡೆಯಲು ಸಮರ್ಥ ಅಭ್ಯರ್ಥಿಯ ಆಯ್ಕೆಗಾಗಿ ಹುಡುಕಾಟ ನಡೆಸಿದೆ.ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿ ಕಾಂಗ್ರೆಸ್‍ ನಾಯಕರಿದ್ದಾರೆ. ತಮ್ಮ ವಿರುದ್ಧ ತೊಡೆತಟ್ಟಿರುವ ಉಮೇಶ್ ಜಾಧವ್ ಬಣವನ್ನು ಹೇಗಾದರೂ ಮಾಡಿ ಮಣಿಸಬೇಕು. ಹಾಗೂ ಚಿಂಚೋಳಿಯನ್ನು ಮತ್ತೆ ವಶಕ್ಕೆ ಪಡೆಯಬೇಕೆಂಬ ಜಿದ್ದಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿದ್ದಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್‍ನಿಂದ  ಕಣಕ್ಕಿಳಿದಿದ್ದ  ಡಾ.ಉಮೇಶ್ ಜಾಧವ್  ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ದ್ವಿತೀಯ ಸ್ಥಾನದಲ್ಲಿದ್ದು, ಇಲ್ಲಿ ಜೆಡಿಎಸ್ ನಗಣ್ಯವಾಗಿತ್ತು. ಕ್ಷೇತ್ರದಲ್ಲಿ 1,93,782 ಕ್ಕೂ ಹೆಚ್ಚು ಮತದಾರರಿದ್ದು, ಇದರಲ್ಲಿ 1 ಲಕ್ಷಕ್ಕೂ ಹೆಚ್ಚಿನ ಲಿಂಗಾಯತ, 80 ಸಾವಿರಕ್ಕೂ ಅಧಿಕ ಬಂಜಾರ ಸಮುದಾಯದ ಮತಗಳಿವೆ.

ಈ ಬಾರಿ ಉಪಚುನಾವಣೆಗೆ ಕಾಂಗ್ರೆಸ್‍ನಿಂದ ಟಿಕೆಟ್ ಬಯಸಿದ್ದಾರೆ. ಇವರೊಂದಿಗೆ ಬಾಬು ಹೊನ್ನಾನಾಯಕ್ , ಜಿಲ್ಲಾಪಂಚಾಯತ್ ಸದಸ್ಯೆ ಜಯಶ್ರೀ ಅವರ ಪತಿ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕ ಜಯಸಿಂಗ್ ಧನಸಿಂಗ್ ರಾಠೋಡ್ ಸಹ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಬಾಬುರಾವ್ ಚವ್ಹಾಣ್ ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಹೀಗಾಗಿ ಬೇರೆ ಕ್ಷೇತ್ರದಿಂದ ಬಂದಿರುವ ಚವ್ಹಾಣ್ ಅವರಿಗೆ ಟಿಕೆಟ್ ನೀಡಬಾರದು ಎಂಬ ಒತ್ತಡವಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಾಬುಹೊನ್ನಾನಾಯಕ್, ತಾವು ಹಲವು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ, ಸಂಸದ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. 2008 ರಲ್ಲಿ ವಿಧಾನಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದು ತಮಗೆ ಟಿಕೆಟ್ ನೀಡಿರಲಿಲ್ಲ. ಈ ಬಾರಿಯಾದರೂ ಪಕ್ಷ ಉಪಚುನಾವಣೆಗೆ ಬಿ.ಫಾರಂ ನೀಡಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿಯನ್ನು ಅಖೈರುಗೊಳಿಸುವ ನಿಟ್ಟಿನಲ್ಲಿ  ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಥಳೀಯ ನಾಯಕರು ಹಾಗೂ ಆಕಾಂಕ್ಷಿಗಳ ಜೊತೆಗೆ ಸಭೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಚಿಂಚೋಳಿ ಉಪಚುನಾವಣೆಗೆ ಸಂಬಂಧಿಸಿದಂತೆ ಸಭೆ ನಡೆಸಿ ಪಕ್ಷದ ಗೆಲುವಿಗೆ ಅಗತ್ಯ ತಂತ್ರಗಾರಿಕೆ ರೂಪಿಸಲಾಗಿದೆ. ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುತ್ತೇವೆ ಎಂಬ ಒಗ್ಗಟ್ಟಿನ ಅಭಿಪ್ರಾಯಕ್ಕೆ ಪಕ್ಷದ ಕಾರ್ಯಕರ್ತರು ಬಂದಿದ್ದು, ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಆಕಾಂಕ್ಷಿಗಳ ಪಟ್ಟಿಯೊಂದಿಗೆ ಕಾರ್ಯಕರ್ತರ, ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿ ಅವರು ಸೂಚಿಸುವ ಅಭ್ಯರ್ಥಿಗೆ  ಬಿ.ಫಾರಂ ನೀಡಲಾಗುವುದು ಎಂದರು.

ಇದೇ ವೇಳೆ ಉಮೇಶ್ ಜಾಧವ್ ವಿರುದ್ಧ ಹರಿಹಾಯ್ದ ದಿನೇಶ್ ಗುಂಡೂರಾವ್, ಉಮೇಶ್ ಜಾಧವ್ ಕ್ಷೇತ್ರದ ಜನರಿಗೆ, ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಲೋಕಸಭೆಯಲ್ಲಿ ಸ್ಪರ್ಧಿಸಿರುವ ಅವರ ಸೋಲು ನಿಶ್ಚಿತ. ಚಿಂಚೋಳಿಯಲ್ಲಿಯೂ ಅವರು ಸೋಲಲಿದ್ದಾರೆ. ಮೇ 23 ರ ನಂತರ ಸ್ವಕ್ಷೇತ್ರದಿಂದಲೇ ಅವರನ್ನು ಜನರೇ ಹೊರಗೆ ಹಾಕುವ ಪರಿಸ್ಥಿತಿ ನಿರ್ಮಾಣವಾಗುವುದು ಖಚಿತ ಎಂದು ಭವಿಷ್ಯ ನುಡಿದರು.

ಇನ್ನು ಹೈಕಮಾಂಡ್ ಒಪ್ಪಿಗೆ ಪಡೆದ ಬಳಿಕ ಶುಕ್ರವಾರ ಸಂಜೆಯೊಳಗೆ ಚಿಂಚೋಳಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಖೈರುಗೊಳ್ಳಲಿದ್ದಾರೆ ಎನ್ನಲಾಗಿದೆ.

Posted by: ABN | Source: UNI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Politics 2019, Chincholi, By-election, Activities, kick-starts ರಾಜಕೀಯ 2019, ಚಿಂಚೋಳಿ, ಉಪ ಚುನಾವಣೆ, ಚಟುವಟಿಕೆಗಳು, ಆರಂಭ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS