Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Casual Photo

ನಾಯ್ಡು,ಮಮತಾ ಮಾತುಕತೆ,ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಬಿಜೆಪಿಯೇತರ ಸರ್ಕಾರ ರಚನೆ ಬಗ್ಗೆ ಚರ್ಚೆ

Arundathi Nag

ದೇಶ ಸರ್ವಾಧಿಕಾರತ್ವದ ಹಿಡಿತಕ್ಕೆ - ಅರುಂಧತಿ ನಾಗ್ ಆತಂಕ

NIA

ದಕ್ಷಿಣ ಭಾರತಕ್ಕೆ ಉಗ್ರ ಭೀತಿ, ತಮಿಳನಾಡಿನ 10 ಕಡೆಗಳಲ್ಲಿ ಶೋಧ ಕಾರ್ಯಾಚರಣೆ

Sumalatha Ambareesh, Nikhil Kumaraswamy

ಮಂಡ್ಯ: ಚುನಾವಣೋತ್ತರ ಸಮೀಕ್ಷೆ ವರದಿ ನಂತರ ಬೆಟ್ಟಿಂಗ್ ನಲ್ಲೂ ಬದಲಾವಣೆ

Moin-ul-Haque

ಭಾರತಕ್ಕೆ ನೂತನ ಪಾಕ್ ಹೈಕಮಿಷನರ್ ಆಗಿ ಮೊಯಿನ್-ಉಲ್-ಹಕ್ ನೇಮಕ

Counting of votes will take place at Government Boys College on May 23

ಮಂಡ್ಯ, ಮೈಸೂರು ಜಿಲ್ಲೆಗಳ ರೈತರಿಗೆ ಸಾಲಮನ್ನಾದ ಚಿಂತೆ

File image

ಧರ್ಮಸ್ಥಳ ನಂತರ ಸಿದ್ದಗಂಗಾ ಮಠದಲ್ಲಿ ನೀರಿನ ಅಭಾವ: ವಿದ್ಯಾರ್ಥಿಗಳ ಪ್ರವೇಶ ನಿರಾಕರಣೆ

Investors richer by Rs 5.33 lakh crore as exit polls predict Modi

ಚುನಾವಣೋತ್ತರ ಸಮೀಕ್ಷೆ ಎಫೆಕ್ಟ್‌: ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಬಂಪರ್, 5.33 ಲಕ್ಷ ಕೋಟಿ ರೂ. ಲಾಭ

ವಿವಾದಿತ ಟ್ವೀಟ್; ಅದರಲ್ಲಿ ತಪ್ಪೇನಿದೆ ಎಂದ ನಟ ವಿವೇಕ್ ಒಬೆರಾಯ್

MS Dhoni Hints At Post-Retirement Plans In Viral Video: Reports

'ಸಾಕಷ್ಟು ಕ್ರಿಕೆಟ್ ಆಡಿದ್ದೇನೆ.. ಈಗ'...: ನಿವೃತ್ತಿ ಪ್ಲಾನ್ ಮಾಡಿದ್ರಾ ಧೋನಿ!

No problem, we are ready: MP CM Kamal Nath on BJP

ಬಹುಮತ ಸಾಬೀತುಪಡಿಸಲು ಸಿದ್ಧ: ಬಿಜೆಪಿಗೆ ಮಧ್ಯ ಪ್ರದೇಶ ಸಿಎಂ ತಿರುಗೇಟು

Ranbir Singh

ಕಾಂಗ್ರೆಸ್‌ಗೆ ಮುಖಭಂಗ: ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದೆ 2016ರಲ್ಲಿ; ಲೆಫ್ಟಿನಂಟ್ ಜನರಲ್

Tejasvi surya

ಇವಿಎಂಗಳ ವಿಶ್ವಾಸಾರ್ಹತೆ ಪ್ರಶ್ನಿಸುವ ಜನ ಪ್ರತಿನಿಧಿಗಳಿಗೆ ತೇಜಸ್ವಿ ಸೂರ್ಯ ಬಹಿರಂಗ ಸವಾಲು!

ಮುಖಪುಟ >> ಲೋಕಸಭಾ ಚುನಾವಣೆ 2019 >> ಕರ್ನಾಟಕ

ರಾಜ್ಯದಲ್ಲಿ ಒಟ್ಟಾರೆ ಶೇ. 68.62 ಮತದಾನ: ಮಂಡ್ಯದಲ್ಲಿ ಅತಿ ಹೆಚ್ಚು, ಬೆಂಗಳೂರು ಕೇಂದ್ರದಲ್ಲಿ ಅತಿ ಕಡಿಮೆ ಮತದಾನ

ಸಂಗ್ರಹ ಚಿತ್ರ

ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳಿಗೆ  ನಡೆದ ಎರಡು ಹಂತಗಳ ಚುನಾವಣೆಯಲ್ಲಿ  ಬಹುತೇಕ ಶಾಂತಿಯುತ ಮತದಾನ ನಡೆಸಿದ್ದು, ಒಟ್ಟು ಶೇ. 68.62ರಷ್ಟು ಮತ ಪ್ರಮಾಣ ದಾಖಲಾಗಿದೆ. 

ರಾಜ್ಯದ ಒಟ್ಟು  58, 186 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಒಟ್ಟು 478 ಅಭ್ಯರ್ಥಿಗಳ ಹಣೆಬರಹ ಮತಯಂತ್ರ ಸೇರಿದೆ. ಏ.23ರಂದು ಫಲಿತಾಂಶ ಹೊರಬೀಳಲಿದೆ. 

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ರಾಜಕೀಯ ಸೂಕ್ಷ್ಮ ಕ್ಷೇತ್ರ ಎಂದು ಗುರುತಿಸಿಕೊಂಡಿದ್ದ ಮಂಡ್ಯದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‍ ಕುಮಾರಸ್ವಾಮಿ ಹಾಗೂ ಸ್ಟಾರ್ ಪ್ರಚಾರಕರ ಭಾರಿ ಬೆಂಬಲ ಪಡೆದಿದ್ದ ಸುಮಲತಾ ಅಂಬರೀಶ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದ ಈ ಕ್ಷೇತ್ರದಲ್ಲಿ ಬಿಗಿ ಭದ್ರತೆ ನಡುವೆ ಶೇ. 80.23ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. 

ಉಳಿದಂತೆ ದಕ್ಷಿಣ ಕನ್ನಡ, ಕೋಲಾರ, ಹಾಸನ, ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ, ಚಿಕ್ಕೋಡಿ, ಬಾಗಲಕೋಟೆ, ಧಾರವಾಡ, ಹಾವೇರಿ, ತುಮಕೂರು, ಚಾಮರಾಜನಗರ, ಉಡುಪಿ ಚಿಕ್ಕಮಗಳೂರು  ಹಾಗೂ ಚಿತ್ರದುರ್ಗದಲ್ಲಿ ಶೇ. 70ಕ್ಕೂ ಹೆಚ್ಚಿನ ಮತದಾನವಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಶೇ.54.66 ರಷ್ಟು ಅತಿ ಕಡಿಮೆ ಮತದಾನವಾಗಿದೆ. ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ಕಡಿಮೆ ಮತದಾನ ದಾಖಲಾಗಿದೆ. 

ಎರಡೂ ಹಂತಗಳ ಚುನಾವಣೆಯಲ್ಲಿ ಹಲವೆಡೆ ಗ್ರಾಮಸ್ಥರು ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮತದಾನ ಬಹಿಷ್ಕರಿಸಿದ್ದು, ಈ ವೇಳೆ ಚುನಾವಣಾ ಆಯೋಗದ ಸಿಬ್ಬಂದಿ ಅವರ ಮನವೊಲಿಸಿದ್ದಾರೆ. 

2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಮತಪ್ರಮಾಣದಲ್ಲಿ ಅಲ್ಪಪ್ರಮಾಣದ ಹೆಚ್ಚಳ ಕಂಡು ಬಂದಿದೆ. 2014ರಲ್ಲಿ 67.20ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. 1.42ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ, ಬೆಳಗಾವಿ, ರಾಯಚೂರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ , ಬೆಂಗಳೂರು ಕೇಂದ್ರ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿದೆ. 

ಜಿಲ್ಲೆಗಳ ಶೇಕಡಾವಾರು ವಿವರ 
ಎರಡನೇ ಹಂತ- ಚಿಕ್ಕೋಡಿ ಶೇ.75.52, ಬೆಳಗಾವಿ  ಶೇ.67.44, ಬಾಗಲಕೋಟೆ ಶೇ.70.59, ಬಿಜಾಪುರ ಶೇ. 61.70, ಗುಲ್ಬರ್ಗ ಶೇ.60.88, ರಾಯಚೂರು ಶೇ.57.91, ಬೀದರ್  ಶೇ. 62.69, ಕೊಪ್ಪಳ ಶೇ.68.41 ,ಬಳ್ಳಾರಿ  ಶೇ.69.90, ಹಾವೇರಿ  ಶೇ.73.99, ಧಾರವಾಡ  ಶೇ.70.03, 

ಉತ್ತರಕನ್ನಡ ಶೇ.74.07, ದಾವಣಗೆರೆ ಶೇ.72.96, ಶಿವಮೊಗ್ಗ ಶೇ. 76.37
ಒಂದನೇ ಹಂತ-ಉಡುಪಿ ಚಿಕ್ಕಮಗಳೂರು ಶೇ. 75.91, ಹಾಸನ  ಶೇ. 77.08, ದಕ್ಷಿಣ ಕನ್ನಡ ಶೇ.77.90, ಚಿತ್ರದುರ್ಗ ಶೇ. 70.65, ತುಮಕೂರು ಶೇ. 77.21, ಮಂಡ್ಯ ಶೇ.80.23, ಮೈಸೂರು ಶೇ.69.28, ಚಾಮರಾಜನಗರ ಶೇ. 75.19, ಬೆಂಗಳೂರು ಗ್ರಾಮಾಂತರ ಶೇ. 64.90,ಬೆಂಗಳೂರು ಉತ್ತರ ಶೇ. 54.66, ಬೆಂಗಳೂರು ಕೇಂದ್ರ ಶೇ. 54.28, ಬೆಂಗಳೂರು ದಕ್ಷಿಣ ಶೇ.53.47, ಚಿಕ್ಕಬಳ್ಳಾಪುರ ಶೇ. 76.61, ಕೋಲಾರ  ಶೇ.77.11
Posted by: VS | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Karnataka, Lok sabha Polls, Politics, ಕರ್ನಾಟಕ, ಲೋಕಸಭೆ ಚುನಾವಣೆ, ರಾಜಕೀಯ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS