Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
I will send notice to absentees, says Siddaramaiah after CLP meeting

ಕಾಂಗ್ರೆಸ್ ಶಾಸಕರು ರೆಸಾರ್ಟ್ ಗೆ ಶಿಫ್ಟ್, ಶಾಸಕಾಂಗ ಸಭೆಗೆ ಗೈರಾದ ಶಾಸಕರಿಗೆ ನೋಟಿಸ್

Over 700 million email IDs hacked: Sources

ವಿಶ್ವಾದ್ಯಂತ 77 ಕೋಟಿ ಇಮೇಲ್ ವಿಳಾಸ, 2.1 ಕೋಟಿ ಪಾಸ್​ವರ್ಡ್ ಲೀಕ್!

Sunil Gavaskar questions no prize money to Team India after ODI triumph Against Australia

ಐತಿಹಾಸಿಕ ಸರಣಿ ಗೆದ್ದರೂ ಟೀಂ ಇಂಡಿಯಾಗಿಲ್ಲ ಪ್ರಶಸ್ತಿ ಮೊತ್ತ, ಕ್ರಿಕೆಟ್​ ಆಸ್ಟ್ರೇಲಿಯಾ ವಿರುದ್ಧ ಗವಾಸ್ಕರ್ ಗರಂ

Mukesh Ambani set to take on Amazon in India with new e-commerce venture

ಇ-ಕಾಮರ್ಸ್ ಮಾರುಕಟ್ಟೆ ಪ್ರವೇಶಕ್ಕೆ ರಿಲಯನ್ಸ್ ಸಿದ್ಧತೆ, ಆಮೆಜಾನ್ ಗೆ ಪೈಪೋಟಿ

Congress can support me in Bangalore central: Prakash Raj

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲ ಕೇಳಿದ ಪ್ರಕಾಶ್ ರಾಜ್

After Alok Verma, Rakesh Asthana and three other officers

ವರ್ಮಾ ನಂತರ ರಾಕೇಶ್ ಅಸ್ತಾನ ಸೇರಿ ನಾಲ್ವರು ಅಧಿಕಾರಿಗಳು ಸಿಬಿಐನಿಂದ ಎತ್ತಂಗಡಿ

Five dead after avalanche strikes in Ladakh, search on for 7

ಲಡಾಖ್ ನಲ್ಲಿ ಹಿಮಪಾತ: ಐವರು ಸಾವು, ಏಳು ಮಂದಿಗಾಗಿ ಹುಡುಕಾಟ

Have seen Sachin get angry but not MS Dhoni, says Coach Ravi Shastri

ಸಚಿನ್ ಕೋಪಗೊಂಡಿರುವುದನ್ನು ನೋಡಿದ್ದೇನೆ, ಆದರೆ ಧೋನಿ ಕೋಪ ನೋಡಿಲ್ಲ: ಕೋಚ್ ರವಿಶಾಸ್ತ್ರಿ

Dhoni at No. 5 is the most logical and ideal thing, both for him and team says Skipper Virat Kohli

ಎಂಎಸ್ ಧೋನಿಗೆ 5ನೇ ಕ್ರಮಾಂಕ ಅತ್ಯಂತ ಸೂಕ್ತ, ತಂಡಕ್ಕೂ ನೆರವಾಗಲಿದೆ: ವಿರಾಟ್ ಕೊಹ್ಲಿ

WATCH: Indian Batsman MS Dhoni survives despite clearly edging the ball to the wicketkeeper

ಒಂದೇ ಪಂದ್ಯದಲ್ಲಿ ಎರಡೆರಡು ಜೀವದಾನ; ಆಸಿಸ್ ಬೌಲರ್ ಗಳ ಬೆಂಡೆತ್ತಿದ ಧೋನಿ

MS Dhoni Becomes Fourth Indian To Achieve Stunning Feat In Australia

ಆಸಿಸ್ ನೆಲದಲ್ಲಿ ಈ ಸಾಧನೆ ಗೈದ 4ನೇ ಭಾರತೀಯ ಆಟಗಾರ ಧೋನಿ.. ಇಷ್ಟಕ್ಕೂ ಯಾವುದೀ ದಾಖಲೆ?

Representational image

ಬೆಂಗಳೂರು: ಮುಂದಿನ ವರ್ಷದಿಂದ ಶಾಲಾ ವಾರ್ಷಿಕೋತ್ಸವಗಳಲ್ಲಿ ಸಿನಿಮಾ ಹಾಡು-ಡ್ಯಾನ್ಸ್ ನಿಷೇಧ!

51 women aged below 50 entered Sabarimala shrine: Kerala government to SC

50 ವರ್ಷದೊಳಗಿನ 51 ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿದ್ದಾರೆ: ಸುಪ್ರೀಂಗೆ ಕೇರಳ ಸರ್ಕಾರ

ಮುಖಪುಟ >> ರಾಜ್ಯ

2 ವಾರಗಳಲ್ಲಿ ಕರ್ನಾಟಕ ಆರೋಗ್ಯ ಯೋಜನೆಯಿಂದ 600 ಜನರಿಗೆ ಪ್ರಯೋಜನ: ಆರೋಗ್ಯ ಕಾರ್ಯದರ್ಶಿ

File photo

ಸಂಗ್ರಹ ಚಿತ್ರ

ಬೆಂಗಳೂರು: ಕೇಂದ್ರ ಆರೋಗ್ಯ ಸಂಸ್ಥೆಯೊಂದಿಗೆ ರಾಜ್ಯ ಆರೋಗ್ಯ ಯೋಜನೆಯನ್ನು ವಿಲೀನಗೊಳಿಸಿದ 2 ವಾರಗಳಲ್ಲಿ 600ಕ್ಕೂ ಹೆಚ್ಚು ಮಂದಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು ಹೇಳಿದ್ದಾರೆ. 

ಯೋಜನೆಯಿ ರೂ. 5 ಲಕ್ಷ ವಿಮೆಯನ್ನು ನೀಡಲಿದ್ದು, 62 ಲಕ್ಷ ಬಡ ಕುಟುಂಬಗಳಿಗೆ ಲಾಭವಾಗಲಿದೆ. ಸಾಮಾಜಿಕವಾಗಿ ವಂಚಿತರಾದವರು 1,615 ಮಾಧ್ಯಮಿಕ ಹಾಗೂ ಸಂಕೀರ್ಣ ಕಾರ್ಯವಿಧಾನಗಳ ಮೂಲಕ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರ ಕೂಡ ರೂ.5ಲಕ್ಷ ದೊಂದಿಗೆ ರೂ.1.5 ಲಕ್ಷವನ್ನು ವಿಸ್ತರಿಸಿದೆ. ಬಿಪಿಎಲ್ ಕುಟುಂಬಗಳಿಗೆ ರೂ.65 ಲಕ್ಷ ವಿಮೆ ದೊರೆಯಲಿದೆ. ರಾಜ್ಯದಲ್ಲಿ ಒಟ್ಟು 1.15 ಕೋಟಿ ಬಿಪಿಎಲ್ ಕುಟುಂಬಗಳಿವೆ. 19 ಲಕ್ಷ ಎಪಿಎಲ್ ಕುಟುಂಬಗಳಿವೆ. ಎಪಿಎಲ್ ಕಾರ್ಡ್ ಗಳನ್ನು ಹೊಂದಿರುವವರಿಗೆ ಶೇ.30 ರಷ್ಟು ವಿಮೆಯನ್ನು ರಾಜ್ಯ ಸರ್ಕಾರ ನೀಡಲಿದೆ. ಇದರೊಂದಿಗೆ ರೂ.1.5 ಲಕ್ಷ ವಿಮೆ ಕೂಡ ನೀಡಲಿದೆ ಎಂದು ತಿಳಿಸಿದ್ದಾರೆ. 

ರೋಗಿಗಳಿಗೆ ಚಿಕಿತ್ಸೆ ನೀಡಲು 900 ಆಸ್ಪತ್ರೆಗಳಿದ್ದು, ಇದರಲ್ಲಿ 490 ಖಾಸಗಿ ಆಸ್ಪತ್ರೆಗಳಾಗಿವೆ. ಕೆಪಿಎಂಇ ಕಾಯ್ದೆಯಂತೆಯೇ ತಜ್ಞರ ಸಮಿತಿ ರಚಿಸಿ ಚಿಕಿತ್ಸಾ ವೆಚ್ಚಗಳನ್ನು ನಿಗದಿಪಡಿಸಲಾಗುತ್ತದೆ. ಶೀಘ್ರದಲ್ಲಿಯೇ ಈ ಕಾರ್ಯವನ್ನು ಮಾಡಲಾಗುತ್ತದೆ. ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಗಳಲ್ಲಿ ಪ್ರಕ್ರಿಯೆಗಳ ವೆಚ್ಚ ಭಿನ್ನತೆಗಳು ಕಂಡು ಬಂದಿದ್ದೇ ಆದರೆ, ನಂತರ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಶೀಘ್ರದಲ್ಲಿಯೇ ಮಂಡಳಿಯ ಅಡಿಗೆ ಹಲವು ಆಸ್ಪತ್ರೆಗಳು ಸೇರ್ಪಡೆಗೊಳ್ಳಲಿವೆ ಎಂದಿದ್ದಾರೆ. 

ಆಯುಷ್ಮಾನ್ ಭಾರತ್ ಸಿಇಒ ಇಂದು ಭೂಷಣ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕಣ್ಗಾವಲಿನ ವ್ಯವಸ್ಥೆಯೊಂದಿದ್ದು, ಇದರಲ್ಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡದ ಹೊರತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವುದಿಲ್ಲ ಎಂಬ ಮಾಹಿತಿಯಿದೆ. ರೋಗಿಗಳು ಸರ್ಕಾರಿ ಆಸ್ಪತ್ರೆಗೆ ತೆರಳಬೇಕು. ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯವಿಲ್ಲದೇ ಹೋದರೆ, ಅಲ್ಲಿಂದ ಪತ್ರವನ್ನು ತಂದರೆ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂಬ ಮಾಹಿತಿಯಿದೆ. ಈ ರೀತಿ ವ್ಯವಸ್ಥೆಯನ್ನು ಇತರೆ ರಾಜ್ಯಗಳೂ ಕೂಡ ಅನುಸರಿಸಬೇಕು ಎಂದಿದ್ದಾರೆ. 

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ದೇಶಕ ನಘತ್ ತಬಸ್ಸುಮ್ ಅಬ್ರೂ ಅವರು ಮಾತನಾಡಿ, 62 ಲಕ್ಷ ಕುಟುಂಬಗಳ ವೆಚ್ಚದ ಶೇ.60 ರಷ್ಟುನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ. ಇನ್ನುಳಿದ ಶೇ.40 ರಷ್ಟುನ್ನು ರಾಜ್ಯ ಸರ್ಕಾರ ಹೊರುತ್ತಿದೆ. ಯೋಜನೆ ಸಾಕಷ್ಟು ಪರಿಣಾಮಕಾರಿಯಾಗಿದ್ದು, ಯೋಜನೆ ಕುರಿತು ಸರ್ಕಾರ ಸೋಮವಾರ ಅಥವಾ ಮಂಗಳವಾಗ ಆದೇಶಗಳನ್ನು ನೀಡಲಿದೆ ಎಂದು ಹೇಳಿದ್ದಾರೆ. 

ರಾಜ್ಯ ಸರ್ಕಾರ ಈವರೆಗೂ 4.5 ಲಕ್ಷ ಆರೋಗ್ಯ ಕರ್ನಾಟಕ ಗುರುತು ಚೀಟಿಗಳನ್ನು ನೀಡಿದ್ದು, ಕಾರ್ಡ್'ನ್ನು ಎಆರ್'ಕೆಐಡಿ (ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಐಡಿ) ಎಂದು ಕರೆಯಲಾಗುತ್ತದೆ. ಸರ್ಕಾರದ ಆದೇಶದ ಬಳಿಕ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಸರ್ಕಾರ ಯೋಜನೆಗಳ ಎರಡೂ ಲೋಗೋಗಳನ್ನೂ ಐಡಿ ಕಾರ್ಡ್ ಗಳ ಮೇಲೆ ಮುದ್ರಿಸಲಾಗುತ್ತದೆ. ಪ್ರಸ್ತುತ ವಿತರಿಸುವ ಕಾರ್ಡ್ ಗಳೂ ಕೂಡ ಮಾನ್ಯವಾಗಿರುತ್ತವೆ. ಬಿಪಿಎಲ್ ಕಾರ್ಡ್ ಮೂಲಕ ಚಿಕಿತ್ಸೆ ಪಡೆಯುವ ರೋಗಿಗಳು ಆಧಾರ್ ಕಾರ್ಡ್ ಗಳನ್ನು ನೀಡುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದಾರೆ. 
Posted by: MVN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Karnataka, Health, Karnataka state health scheme, ಕರ್ನಾಟಕ, ಆರೋಗ್ಯ, ಕರ್ನಾಟಕ ಆರೋಗ್ಯ ಯೋಜನೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS