Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
HD Devegowda mocks PM Modi over NDA running coalition governments in many states

ನನಗೆ 86 ವರ್ಷ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ದೇವೇಗೌಡ

ಗೋವಾ ಸಿಎಂ ಪ್ರಮೋದ್ ಸಾವಂತ್

ಗೋವಾ ಸಿಎಂ ಪ್ರಮೋದ್ ಸಾವಂತ್ ಅಧಿಕಾರ ಸ್ವೀಕಾರ; ನಾಳೆ ವಿಶ್ವಾಸಮತ ಯಾಚನೆ

PCB pays USD 1.6 million compensation to BCCI

ಬಿಸಿಸಿಐಗೆ 1.6 ಮಿಲಿಯನ್ ಪರಿಹಾರ ನೀಡಿದ ಪಿಸಿಬಿ

Radhakrishna Vikhe Patil

ಮಹಾರಾಷ್ಟ್ರ ಕಾಂಗ್ರೆಸ್ ಗೆ ಬಿಗ್ ಶಾಕ್: ರಾಧಾಕೃಷ್ಣ ವಿಖೆ ಪಾಟೀಲ್ ರಾಜಿನಾಮೆ

Ajit Doval

ಪುಲ್ವಾಮಾ ಪ್ರತೀಕಾರ ಇನ್ನೂ ಮುಗಿದಿಲ್ಲ, ಪಾಕ್ ಗೆ ಮತ್ತಷ್ಟು ಸರ್ಜಿಕಲ್ ಸ್ಟ್ರೈಕ್ ಎಚ್ಚರಿಕೆ ಕೊಟ್ಟ ಅಜಿತ್ ಧೋವಲ್!

ಸಂಗ್ರಹ ಚಿತ್ರ

ಕೀನ್ಯಾದ 'ಆನೆ ರಾಣಿ' ಸಾಯುವ ಮುನ್ನ ತೆಗೆದ ಅಪರೂಪದ ಚಿತ್ರಗಳು

prashanth Kishore And Chandrababu Naidu

ಬಿಹಾರದ ಡಕಾಯಿತ ಎಂಬ ನಾಯ್ಡು ಟೀಕೆಗೆ ಪ್ರಶಾಂತ್ ಕಿಶೋರ್ ಪ್ರತ್ಯುತ್ತರ!

Cheating case Filed against actress Pooja Gandhi

ಹೋಟೆಲ್​ ಬಿಲ್​ ಕೊಡದೆ ಕಾಲ್ಕಿತ್ತ 'ಮಳೆ ಹುಡುಗಿ'; ನಟಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲು!

Despite Sheila Dikshit

ಶೀಲಾ ದೀಕ್ಷಿತ್ ವಿರೋಧದ ನಡುವೆಯೂ ಆಪ್ ಜತೆ ಮೈತ್ರಿಗೆ ಮುಂದಾದ ಕಾಂಗ್ರೆಸ್

Amit Shah

ಯುವಜನತೆಯ ಸ್ವಾತಂತ್ರ್ಯವನ್ನು ಹತ್ತಿಕ್ಕಬೇಡಿ; ಬೆಂಗಳೂರಿನಲ್ಲಿ ಟೆಕ್ಕಿಗಳ ಬಂಧನಕ್ಕೆ ಅಮಿತ್ ಶಾ ಕಿಡಿ

Anil vij

ನಿಮ್ಮ ಹೆಸರಿನ ಜೊತೆಗೆ #ಪಪ್ಪು ಎಂದು ಸೇರಿಸಿಕೊಳ್ಳಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಹರ್ಯಾಣ ಸಚಿವ ಸಲಹೆ

IPL will be crucial for World Cup selection: BCCI

ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆಗೆ ಐಪಿಎಲ್ ನಿರ್ಣಾಯಕ: ಬಿಸಿಸಿಐ

yogi adityanath

ನನ್ನ ಸರ್ಕಾರದ ಆಡಳಿತಾವಧಿ ಉತ್ತರ ಪ್ರದೇಶದಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ: ಯೋಗಿ ಆದಿತ್ಯನಾಥ್

ಮುಖಪುಟ >> ರಾಜ್ಯ

ಸ್ಯಾಂಡಲ್ ವುಡ್ 'ಐಟಿ ದಾಳಿ'; ತೆರಿಗೆ ಅಧಿಕಾರಿಗಳ ದಾಳಿಯ ಕುರಿತ ಸಂಪೂರ್ಣ ವಿವರ ಇಲ್ಲಿದೆ

ಸ್ವಂತ ಕಾರುಗಳಲ್ಲದೇ 30ಕ್ಕೂ ಅಧಿಕ ಕ್ಯಾಬ್ ಗಳ ಬುಕ್ ಮಾಡಿದ್ದ ಅಧಿಕಾರಿಗಳು, ದಾಳಿ ಬಳಿಕ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚನೆ
From Puneet Rajkumar to Yash:

ಸಂಗ್ರಹ ಚಿತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾರೆ.

ದಾಳಿಯಾದ 24 ಗಂಟೆಗಳ ಬಳಿಕವೂ ಸ್ಟಾರ್ ನಟರ ಮನೆಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಇದೀಗ ಅಧಿಕಾರಿಗಳ ತೆರಿಗೆ ದಾಳಿ ಕುರಿತ ರೋಚಕ ಅಂಶಗಳು ಬಯಲಾಗುತ್ತಿವೆ.

ಒಂದು ತಿಂಗಳಿನಿಂದಲೇ ನಡೆದಿತ್ತು ಭರ್ಜರಿ ತಯಾರಿ
ಇನ್ನು ಕಳೆದ ಒಂದು ತಿಂಗಳಿನಿಂದಲೇ ತೆರಿಗೆ ಅಧಿಕಾರಿಗಳು ದಾಳಿಗಾಗಿ ಯೋಜನೆ ರೂಪಿಸಿದ್ದರು ಎಂದು ಹೇಳಲಾಗಿದೆ. ‘ದಿ ವಿಲನ್‌’, ‘ಕೆಜಿಎಫ್‌’ ಸೇರಿದಂತೆ ಇತ್ತೀಚಿನ ಹಲವು ಕನ್ನಡ ಚಿತ್ರಗಳಲ್ಲಿ ಹೂಡಿಕೆಯಾಗುತ್ತಿರುವ ಅಪಾರ ಪ್ರಮಾಣದ ಹಣ ಮತ್ತು ಹಣ ಗಳಿಕೆ ಬಗ್ಗೆ ಆಯಾ ಚಿತ್ರಗಳ ನಿರ್ಮಾಪಕರ ಹೇಳಿಕೆಗಳು, ಮಾಧ್ಯಮಗಳಲ್ಲಿನ ವರದಿಗಳನ್ನು ಆಧರಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. 

200 ಅಧಿಕಾರಿಗಳು, ಇಲಾಖೆಯ ಕಾರಿದ್ದರೂ ಖಾಸಗಿ ಕ್ಯಾಬ್ ಗಳು ಬುಕ್
ಇನ್ನು ತೆರಿಗೆ ದಾಳಿಗೆ ಯೋಜನೆ ರೂಪಿಸಿದ್ದ ಅಧಿಕಾರಿಗಳು ಈ ಮಾಹಿತಿ ಯಾವುದೇ ಕಾರಣಕ್ಕೂ ಹೊರಹೋಗದಂತೆ ಎಚ್ಚರಿಕೆ ವಹಿಸಿದರು. ಇದಕ್ಕಾಗಿ ಸುಮಾರು 200 ನುರಿತ ಅಧಿಕಾರಿಗಳ ಹಲವು ತಂಡಗಳನ್ನು ರಚಿಸಿದ ತೆರಿಗ ಇಲಾಖೆ ಇಲಾಖೆಯ ಕಚೇರಿಯಲ್ಲಿ ಸಭೆ ನಡೆಸಿ ದಾಳಿ ಕುರಿತು ಚರ್ಚೆ ನಡೆಸಿತ್ತು. ಅಲ್ಲದೆ ಇಲಾಖೆಯ ವಾಹನಗಳನ್ನು ಬಳಸಿದರೆ ಮಾಹಿತಿ ಸೋರಿಕೆಯಾಗುವ ಕಾರಣದಿಂದಾಗಿ ದಾಳಿಗಾಗಿಯೇ 30ಕ್ಕೂಅಧಿಕ ಕ್ಯಾಬ್ ಗಳನ್ನು ಇಲಾಖೆ ಮೊದಲೇ ಬುಕ್ ಮಾಡಿತ್ತು ಎನ್ನಲಾಗಿದೆ.

ಬಳಿಕ ಯೋಜನೆಯಂತೆ ನಿನ್ನೆ 200 ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡು ಖಾಸಗಿ ವಾಹನಗಳಲ್ಲಿ ಬಂದು  ದಾಳಿ ಮಾಡಿದ್ದಾರೆ. ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್,  ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್,  ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದರು. ಸದಾಶಿವನಗರದ ಪುನೀತ್ ರಾಜ್ ಕುಮಾರ್ ನಿವಾಸ, ನಾಗವಾರದಲ್ಲಿರುವ ಶಿವರಾಜ್ ಕುಮಾರ್ ನಿವಾಸ,  ಮಹಾಲಕ್ಷ್ಮಿ ಲೇಔಟ್‌ನ ನಾಗಪುರದ ರಾಕ್ ಲೈನ್ ವೆಂಕಟೇಶ್ ನಿವಾಸ, ನಾಗರಬಾವಿಯ ವಿಜಯ್ ಕಿರಗಂದೂರು ನಿವಾಸ ಹಾಗೂ ಎಚ್ಎಸ್ಆರ್ ಲೇಔಟ್ ನಲ್ಲಿರುವ ಮನೋಹರ್ ನಿವಾಸದ ಮೇಲೆ ದಾಳಿ ನಡೆದಿದೆ.  ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. 

ಇಲಾಖೆಯ ಗಮನ ಸೆಳೆದಿದ್ದ ಬಿಗ್ ಬಜೆಟ್ ಚಿತ್ರಗಳು
ಇತ್ತೀಚಿನ ದಿನಗಳಲ್ಲಿ ಏಕಾಏಕಿ ಕನ್ನಡ ಚಿತ್ರರಂಗದಲ್ಲಿ ಬಿಗ್‌ ಬಜೆಟ್‌ ಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ಕನ್ನಡದಲ್ಲೂ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಹೂಡಿಕೆ ಮಾಡಿ ಚಿತ್ರ ಮಾಡಬಹುದು ಎಂಬುದರ ಊಹೆಯೂ ಇರಲಿಲ್ಲ. ನೆರೆಯ ತಮಿಳು, ತೆಲುಗು ಭಾಷೆಯ ಚಿತ್ರರಂಗಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದ ಮಾರುಕಟ್ಟೆಸೀಮಿತವಾದದ್ದು. ಹೀಗಾಗಿ, ಇಲ್ಲಿ ಬಿಗ್‌ ಬಜೆಟ್‌ ಚಿತ್ರಗಳನ್ನು ನಿರ್ಮಿಸಿ ಲಾಭ ಗಳಿಸುವುದು ಕಷ್ಟಎಂಬ ಮಾತೇ ಚಾಲ್ತಿಯಲ್ಲಿತ್ತು.  ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲೂ ಬಿಗ್ ಬಜೆಟ್ ಚಿತ್ರಗಳು ಬರುತ್ತಿರುವುದು ಐಟಿ ಅಧಿಕಾರಿಗಳು ಇತ್ತ ತಿರುಗುವಂತೆ ಮಾಡಿತ್ತು. 

ಇದೇ ಕಾರಣಕ್ಕೆ ಕಳೆದ ಒಂದು ತಿಂಗಳಿನಿಂದಲೂ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ನಟರು ಹಾಗೂ ನಿರ್ಮಾಪಕರ ಆದಾಯದ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಿ,  ಸೂಕ್ತ ದಾಖಲೆಗಳ ಮಾಹಿತಿ ಸಂಗ್ರಹಿಸಿದ್ದರು. ಕೋರ್ಟ್ ನಲ್ಲಿ ದಾಳಿ ಸಂಬಂಧ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಲು ಅನುಮತಿ ಪಡೆದಿದ್ದರು.  ಬಳಿಕ ಗುರುವಾರ ಬೆಳ್ಳಂಬೆಳಗ್ಗೆ  ಏಕಕಾಲದಲ್ಲಿ  ದಾಳಿ ಮಾಡುವ ಯೋಜನೆ ರೂಪಿಸಿದ್ದರು. 

ದಾಳಿ  ಬಳಿಕ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚನೆ
ಇನ್ನು ಖಾಸಗಿ ಕ್ಯಾಬ್ ಗಳಲ್ಲಿ ಸ್ಟಾರ್ ನಟರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ ಬಳಿಕ ಈ ದಾಳಿ ಕುರಿತು ಪೊಲೀಸ್ ಇಲಾಖೆಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮೊದಲೇ ಪೊಲೀರಿಗೆ ಮಾಹಿತಿ ನೀಡಿದ್ದರೆ ಅದು ಸೋರಿಕೆಯಾಗುವ ಶಂಕೆ ಮೇರೆಗೆ ದಾಳಿ ಬಳಿಕ ಅಧಿಕಾರಿಗಳಿಗೆ ರಕ್ಷಣೆ ನೀಡುವಂತೆ ತೆರಿಗೆ ಇಲಾಖೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿತ್ತು ಎಂದು ತಿಳಿದುಬಂದಿದೆ.

ಸಿನಿಮಾ ಹೆಸರಿನಲ್ಲಿ ಕಪ್ಪು ಹಣ ಚಲಾವಣೆ
ಇನ್ನು ಚಿತ್ರಗಳ ಹೆಸರಿನಲ್ಲಿ ಕೆಲ ಹೆಸರಾಂತ ನಿರ್ಮಾಪಕರು ತಮ್ಮ ಕಪ್ಪು ಹಣವನ್ನು ಬಿಳಿಯಾಗಿಸಲು ಯತ್ನಿಸಿದ್ದರು ಎಂದು ಹೇಳಲಾಗಿದೆ. ಚಿತ್ರಗಳ ತಯಾರಿ ಮೂಲಕ ಸುಳ್ಳು ಲೆಕ್ಕ ತೋರಿಸಿ ತಮ್ಮ ಕಪ್ಪು ಹಣವನ್ನು ಬಿಳಿಯಾಗಿಸಿಕೊಳ್ಳುತ್ತಿದ್ದರು ಎಂಬ ಆರೋಪ ಕೂಡ ಹಲವು ನಿರ್ಮಾಪಕರ ವಿರುದ್ಧ ಕೇಳಿಬಂದಿದೆ. ಇದೂ ಕೂಡ ನಿನ್ನೆಯ ದಾಳಿಗೆ ಕಾರಣವಾಗಿರಬಹುದು ಎನ್ನಲಾಗಿದೆ.
ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Bengaluru, Sandalwood, IT Raid, KGF, Yash, puneet Rajkumar, ಬೆಂಗಳೂರು, ಸ್ಯಾಂಡಲ್ ವುಡ್, ಐಟಿ ದಾಳಿ, ಕೆಜಿಎಫ್, ಯಶ್, ಪುನೀತ್ ರಾಜ್ ಕುಮಾರ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS