Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Investors richer by Rs 5.33 lakh crore as exit polls predict Modi

ಚುನಾವಣೋತ್ತರ ಸಮೀಕ್ಷೆ ಎಫೆಕ್ಟ್‌: ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಬಂಪರ್, 5.33 ಲಕ್ಷ ಕೋಟಿ ರೂ. ಲಾಭ

BJP claims Congress government has lost majority in Madhya Pradesh, demands special Assembly session

ಕಮಲ್ ನಾಥ್ ಸರ್ಕಾರ ಬಹುಮತ ಕಳೆದುಕೊಂಡಿದೆ: ಮಧ್ಯ ಪ್ರದೇಶ ರಾಜ್ಯಪಾಲರಿಗೆ ಬಿಜೆಪಿ ದೂರು

CM HDK

ದೇಶದಲ್ಲಿ ಮೋದಿ ಅಲೆ ಇದೆ ಎಂದು ಬಿಂಬಿಸಲು ಬಿಜೆಪಿಯಿಂದ ಎಕ್ಸಿಟ್ ಪೋಲ್ ಬಳಕೆ: ಕುಮಾರಸ್ವಾಮಿ

Mohamed Nasheed-Narendra Modi

ಚುನಾವಣೋತ್ತರ ಸಮೀಕ್ಷೆ: ಪ್ರಧಾನಿ ಮೋದಿ, ಬಿಜೆಪಿಗೆ ಮಾಲ್ಡೀವ್ಸ್ ಮಾಜಿ ಅಧ್ಯಕ್ಷರ ಶುಭಾಶಯ ಟ್ವೀಟ್!

Karnataka Chief Secretary hold talks with Veerendra Heggade over water crisis in Dharmasthala

ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ: ವೀರೇಂದ್ರ ಹೆಗ್ಗಡೆ ಜೊತೆ ಮುಖ್ಯ ಕಾರ್ಯದರ್ಶಿ ಚರ್ಚೆ

National Commission for Women issues notice to actor Vivek Oberoi demanding explanation over his tweet on exit polls

ವಿವಾದಿತ ಟ್ವೀಟ್; ನಟ ವಿವೇಕ್ ಒಬೆರಾಯ್ ಗೆ ಮಹಿಳಾ ಆಯೋಗ ನೋಟಿಸ್

ಸಂಗ್ರಹ ಚಿತ್ರ

ಐಶ್ವರ್ಯ ರೈ ಬಗ್ಗೆ ಕೀಳು ಮಟ್ಟದ ಟ್ವೀಟ್ ಶೇರ್ ಮಾಡಿದ ವಿವೇಕ್ ಒಬೆರಾಯ್; ಟ್ವೀಟರಿಗರಿಂದ ಮಂಗಳಾರತಿ!

Twinkle Khanna

ಕೇದಾರನಾಥ ಗುಹೆಯಲ್ಲಿ ಧ್ಯಾನ: ಮೋದಿ ಕಾಲೆಳೆದ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ!

Gang of  barges into woman’s house, molests her, stabs brother

ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಸಂತ್ರಸ್ತೆಯ ಸಹೋದರನಿಗೆ ಚಾಕು ಇರಿದ ಗ್ಯಾಂಗ್!

Former Union Minister MJ Akbar denies meeting journalist Priya Ramani at Oberoi hotel

ಒಬೆರಾಯ್ ಹೊಟೆಲ್ ನಲ್ಲಿ ಪ್ರಿಯಾ ರಮಣಿ ಭೇಟಿ ಮಾಡಿಲ್ಲ- ಎಂಜೆ ಅಕ್ಬರ್

After controversial remarks, Pragya Singh opts for

ವಿವಾದಾತ್ಮಕ ಹೇಳಿಕೆ ನಂತರ ಪ್ರಗ್ಯಾ ಸಿಂಗ್ ಮೌನವ್ರತ, ಆತ್ಮಾವಲೋಕನ

Karnataka plans to build modern bus stands to accommodate government offices, says minister DC Thammanna

ಸರ್ಕಾರಿ ಕಚೇರಿಗಳನ್ನೊಳಗೊಂಡ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ: ಸಚಿವ ಡಿ ಸಿ ತಮ್ಮಣ್ಣ

Kamal Haasan gets protection from arrest on Godse jibe

ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ ಹೇಳಿಕೆ: ಕಮಲ್​ ಹಾಸನ್ ಗೆ ನಿರೀಕ್ಷಣಾ ಜಾಮೀನು

ಮುಖಪುಟ >> ರಾಜ್ಯ

ಪಾಕಿಸ್ತಾನದಲ್ಲಿ ಭಾರತೀಯ ವಾಯುಸೇನೆ ದಾಳಿ; ರಾಜ್ಯದಲ್ಲಿ ಹೈ ಅಲರ್ಟ್

ಕಾರವಾರ ನೌಕಾ ನೆಲೆಯಲ್ಲಿ ಕೂಡ ಹೆಚ್ಚಿನ ಭದ್ರತೆ
Kempe gowda international airport

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು: ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣ ಮತ್ತು ಶಿಬಿರಗಳ ಮೇಲೆ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ವಾಯುದಾಳಿ ನಡೆಸಿರುವುದರಿಂದ ಭಾರತ ಪಾಕ್ ನಡುವಿನ ಸಂಬಂಧ ಬಿಗಡಾಯಿಸಿದ್ದು ಈ ಹಿನ್ನಲೆಯಲ್ಲಿ ದೇಶಾದ್ಯಂತ ಸಾರ್ವಜನಿಕ ಸ್ಥಳಗಳು, ಜನ ನಿಬಿಡ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಕರ್ನಾಟಕದ ವಿವಿಧ ರಕ್ಷಣಾ ಕೇಂದ್ರಗಳು ಮತ್ತು ತರಬೇತಿ ಶಿಬಿರಗಳಲ್ಲಿ ತೀವ್ರ ಎಚ್ಚರಿಕೆ ಮತ್ತು ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತು ನಗರದ ರೈಲು, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ವಿಮಾನ ನಿಲ್ದಾಣ, ರೈಲು ನಿಲ್ದಾಣ ಇತ್ಯಾದಿ ಕಡೆಗಳಲ್ಲಿ ಜನರ ತಪಾಸಣೆ, ವಸ್ತುಗಳ ತಪಾಸಣೆ ತೀವ್ರವಾಗಿ ನಡೆಯುತ್ತಿದೆ. ಭದ್ರತೆಯ ಭಾಗವಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ನ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪೊಲೀಸ್ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ಮತ್ತು ತಪಾಸಣೆಗೆ ನಿಯೋಜಿಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೋಡಿಕೊಳ್ಳುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಈ ಸಂಬಂಧ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ರಾಜ್ಯಾದ್ಯಂತ ರೈಲು ನಿಲ್ದಾಣಗಳಲ್ಲಿ ಕೂಡ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

ಜೈಶ್ ಎ ಮೊಹಮ್ಮದ್ ಸಂಘಟನೆಯ ತಾಣಗಳ ಮೇಲೆ ಭಾರತೀಯ ವಾಯುಪಡೆಯ ದಾಳಿಯ ನಂತರ ಕಾರವಾರದಲ್ಲಿರುವ ನೌಕಾಪಡೆ ದುರಸ್ತಿ ಕೇಂದ್ರದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.

ಈ ಮಧ್ಯೆ ರಜೆಯ ಮೇಲೆ ತಮ್ಮ ಊರುಗಳಿಗೆ ತೆರಳಿರುವ ಸೇನಾಪಡೆ ಯೋಧರಿಗೆ ಮತ್ತು ಇತರ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಪೊಲೀಸ್ ಪಡೆಗೆ ರಾಜ್ಯಾದ್ಯಂತ ಎಚ್ಚರವಾಗಿರುವಂತೆ ಸೂಚಿಸಲಾಗಿದೆ. ಆದರೆ ರಾಜ್ಯದ ಯಾವುದೇ ನಿರ್ದಿಷ್ಟ ಕೇಂದ್ರಗಳು ಮತ್ತು ಸ್ಥಳಗಳಿಗೆ ಎಚ್ಚರಿಕೆ ಕಳುಹಿಸಿಲ್ಲ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂತ್ ತಿಳಿಸಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ನಿಗದಿಗಿಂತ ಹೆಚ್ಚಿನ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಸೇನಾ ಘಟಕಗಳಲ್ಲಿ ಮಾತ್ರವಲ್ಲದೆ ಇಸ್ರೊ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ(ಡಿಆರ್ ಡಿಒ)ಗಳಿಗೆ ಸಹ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Kempegowda international airport, Bengaluru, IAF strikes in Pakistan, Alert, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು, ಭಾರತೀಯ ವಾಯುಸೇನೆ, ಭದ್ರತೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS