Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Government has taken control of Jaish headquarters in Bahawalpur, informs Pakistan

ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕ್, ಜೈಶ್ ಪ್ರಧಾನ ಕಚೇರಿ ವಶಕ್ಕೆ

ಬಿಎಸ್ ಯಡಿಯೂರಪ್ಪ-ಕೆಎಚ್ ಮುನಿಯಪ್ಪ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದ ಅತೃಪ್ತ ಕಾಂಗ್ರೆಸ್ ಮುಖಂಡರು!

SC asks 11 states to take action against assault on Kashmiris

ಕಾಶ್ಮೀರಿಗಳ ಮೇಲಿನ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: 11 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

Shah Rukh Khan

ಪುಲ್ವಾಮಾ ದಾಳಿ: ಪಾಕ್ ಕಲಾವಿದರನ್ನು ನಿಷೇಧಿಸಿದರೆ ದೇಶ ಬಿಡ್ತೀನಿ; ಶಾರುಖ್ ಖಾನ್?

Supreme Court

ಆದಿವಾಸಿಗಳ ವಿರುದ್ಧ ಸುಪ್ರೀಂ ತೀರ್ಪು: ರಾಜ್ಯದ 20,000 ಕುಟುಂಬಗಳು ಅತಂತ್ರ

Ahead of Lok Sabha elections, ‘dispute’ between leaders rocks Vijayapura BJP

ಲೋಕಸಮರಕ್ಕೆ ಮುನ್ನ ವಿಜಯಪುರ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ, ಸಂಧಾನಕ್ಕಾಗಿ ಯಡಿಯೂರಪ್ಪಗೆ ಮೊರೆ

Sunny Leone

ತಮಾಷೆ ಮಾಡೋಕ್ಕೋಗಿ ತಗ್ಲಾಕೊಂಡ 'ಸನ್ನಿ ಲಿಯೋನ್', ಜೈಲು ಭೀತಿ?

D K Shivakumar

ಅಕ್ರಮ ಆಸ್ತಿ: ಡಿಕೆಶಿ ಅರ್ಜಿ ವಜಾಗೊಳಿಸುವಂತೆ ಹೈಕೋರ್ಟ್ ಗೆ ಇಡಿ, ಐಟಿ ಇಲಾಖೆ ಮನವಿ

Rahul gandhi

ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಬಹಿರಂಗ ಸಮರ

Flybus to link Davangere, Malnad to KIA

ದಾವಣಗೆರೆ, ಮಲೆನಾಡಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫ್ಲೈ ಬಸ್ ಸಂಚಾರ ಶೀಘ್ರ

S. Rajendran

ತಮಿಳುನಾಡು: ರಸ್ತೆ ಅಪಘಾತದಲ್ಲಿ ಎಐಎಡಿಎಂಕೆ ಸಂಸದ ಎಸ್ ರಾಜೇಂದ್ರನ್ ನಿಧನ

PM Modi will inaugurate Suburban Rail Projects for Karnataka, says Piyush Goyal

ಶೀಘ್ರದಲ್ಲೇ ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿಗೆ ಪ್ರಧಾನಿ ಶಿಲಾನ್ಯಾಸ: ಪಿಯೂಷ್ ಗೋಯಲ್

Vande Bharat Express to be introduced on M

ಮಂಗಳೂರು - ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲು: ಗೋಯಲ್

ಮುಖಪುಟ >> ರಾಷ್ಟ್ರೀಯ

ಗೋವಾ ಆಡಿಯೋ ಟೇಪ್ ಅಧಿಕೃತ, ಪರಿಕ್ಕರ್ ಬಳಿ ರಾಫೆಲ್ ರಹಸ್ಯಗಳ 'ಸ್ಫೋಟಕ' ಮಾಹಿತಿ ಇದೆ: ರಾಹುಲ್

Rahul Gandhi

ರಾಹುಲ್ ಗಾಂಧಿ

ನವದೆಹಲಿ: ರಾಫೆಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸುತ್ತಾ  ಬಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಗೋವಾ ಆಡಿಯೋ ಟೇಪ್  ಅಧಿಕೃತವಾದದ್ದು, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್  ಬಳಿಯೇ ರಾಫೆಲ್ ರಹಸ್ಯಗಳ ಸ್ಪೋಟಕ ಮಾಹಿತಿ ಇದೆ ಎಂದು ಹೇಳಿದ್ದಾರೆ.

ರಫೇಲ್ ವ್ಯವಹಾರ ರಹಸ್ಯ ಕಡತ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಮನೆಯ ಬೆಡ್ ರೊಮ್ ನಲ್ಲಿವೆ ಎಂಬ ಗೋವಾ ಸಚಿವ ವಿಶ್ವಜಿತ್ ರಾಣೆ ಧ್ವನಿಯುಳ್ಳ ಆಡಿಯೋ ಟೇಪ್ ಬಿಡುಗಡೆಯಾದ ಬೆನ್ನಲ್ಲೇ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜನವರಿ ಮೊದಲ ವಾರದಲ್ಲಿ ಬಿಡುಗೆಯಾಗಿದ್ದ ರಾಣೆ ಆಡಿಯೋ ಟೇಪ್  ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ,  ಆಡಿಯೋ ಟೇಪ್ ಬಿಡುಗಡೆಯಾಗಿ 30 ದಿನ ಕಳೆದಿದ್ದರೂ ಯಾವುದೇ ಎಫ್ ಐಆರ್ ದಾಖಲಿಸಿಲ್ಲ, ಅಥವಾ ವಿಚಾರಣೆಗೆ ಆದೇಶಿಸಿಲ್ಲ. ಸಚಿವರಾಗಲೀ ಅಥವಾ ಬೇರೆ ಯಾವುದೇ ಮುಖಂಡರ ವಿರುದ್ಧವಾಗಲೀ ಕ್ರಮ ಕೈಗೊಂಡಿಲ್ಲ ಎಂದು  ಆರೋಪಿಸಿದ್ದಾರೆ.

ಆಡಿಯೋ ಟೇಪ್  ಅಧಿಕೃತವಾದದ್ದು,  ಗೋವಾ ಮುಖ್ಯಮಂತ್ರಿ ಪರಿಕ್ಕರ್ ಬಳಿಯೇ  ರಹಸ್ಯಗಳ  ಸ್ಪೋಟಕ ಮಾಹಿತಿ ಇದೆ. ಪ್ರಧಾನಿ ಮೋದಿ ಅವರೇ ಈ ಅಧಿಕಾರ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಫೇಲ್ ವ್ಯವಹಾರ ರಹಸ್ಯ ಕಡತ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಬೆಡ್ ರೂಮ್ ನಲ್ಲಿವೆ ಎಂದು ವಿಶ್ವಜಿತ್ ರಾಣೆ ಧ್ವನಿಯುಳ್ಳ ಆಡಿಯೋ ಬಿಡುಗಡೆಯ ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ ಸಮರ ಮುಂದುವರೆದಿದೆ.

ಗೋವಾ ಸಂಪುಟ ಸಭೆ ಸಂದರ್ಭದಲ್ಲಿ ರಾಫೆಲ್  ಒಪ್ಪಂದಕ್ಕೆ ಸಂಬಂಧಿಸಿದ ಕಡತಗಳು ತಮ್ಮ  ಬೆಡ್ ರೂಮಿನಲ್ಲಿವೆ ಎಂದು ಮನೋಹರ್ ಪರಿಕ್ಕರ್ ಹೇಳಿಕೆ ನೀಡಿರುವುದಾಗಿ ರಾಣೆ ಹೇಳಿರುವುದು ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ನಲ್ಲಿ ಕಂಡುಬಂದಿದೆ.

ಸಂಸತ್ತಿನ ಚಳಿಗಾಲ ಅಧಿವೇಶನ ಸಂದರ್ಭದಲ್ಲೂ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಡಿದ್ದ ಆಡಿಯೋ ಟೇಪ್  ಕೇಳಿಸಲು ಪ್ರಯತ್ನಿದ್ದರೂ  ಇದು ಸುಳ್ಳಿನಿಂದ ಕೂಡಿದ್ದು, ಅಧಿಕೃತವಲ್ಲ ಎಂದು ಅರುಣ್ ಜೇಟ್ಲಿ ಹೇಳಿಕೆ ನೀಡಿದ್ದರು.

ರಾಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದ  ಸರ್ಕಾರ, ಈ ಒಪ್ಪಂದದಲ್ಲಿ ಯಾವುದೇ  ಹಗರಣ ನಡೆದಿಲ್ಲ. ಯಾವುದೇ ಮಧ್ಯವರ್ತಿ ಇಲ್ಲದೆ, ಅಥವಾ ಭ್ರಷ್ಟಾಚಾರ ನಡೆಸದೆ ವ್ಯವಹಾರ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು.

Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Rafale secrets, Goa AudioTapes Authentic, Manohar Parrikar, Rahul Gandhi ರಾಫೆಲ್ ರಹಸ್ಯಗಳು, ಗೋವಾ ಆಡಿಯೋ ಟೇಪ್ ಅಧಿಕೃತ, ಮನೋಹರ್ ಪರಿಕ್ಕರ್, ರಾಹುಲ್ ಗಾಂಧಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS