Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Congress leader Sajjan Kumar gets life sentence in 1984 anti-Sikh riots

1984ರ ಸಿಖ್​ ವಿರೋಧಿ ದಂಗೆ: ಕಾಂಗ್ರೆಸ್ ಮುಖಂಡ ಸಜ್ಜನ್​ ಕುಮಾರ್ ದೋಷಿ, ಜೀವಾವಧಿ ಶಿಕ್ಷೆ

2nd test, day 4: Australia 326 and 243 all out, India (283) need 287 runs to win

ಶಮಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಕಾಂಗರೂಗಳು, ಭಾರತಕ್ಕೆ ಗೆಲ್ಲಲು 287 ರನ್ ಗುರಿ

Many opposition leaders have reservations against naming anyone as PM candidate: Sources

ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ, ಯುಪಿಎ ಮಿತ್ರ ಪಕ್ಷಗಳಿಂದಲೇ ವಿರೋಧ: ವರದಿ

Congress

ರಾಜಸ್ಥಾನ ಸಿಎಂ ಗೆಹ್ಲೋಟ್, ಡೆಪ್ಯುಟಿ ಸಿಎಂ ಸಚಿನ್ ಪೈಲಟ್ ಪ್ರಮಾಣ ವಚನ ಸ್ವೀಕಾರ

IGP Sharath Chandra

ದೇವಸ್ಥಾನ ಪ್ರಸಾದದಲ್ಲಿ ಕೀಟನಾಶಕ ಬೆರತದ್ದು ನಿಜ: ಐಜಿಪಿ ಶರತ್ ಚಂದ್ರ

File Image

ಬ್ಯಾಂಕ್ ವಂಚನೆ: 3 ವರ್ಷಗಳಲ್ಲಿ 1.10 ಲಕ್ಷ ಕೋಟಿ ರೂ. ನಷ್ಟ, ಆರ್ ಬಿಐ ಮಾಹಿತಿ

File Image

ಬೆಂಗಳೂರು: ಫುಟ್ ಪಾತ್ ಮೇಲೆ ಕಂಟೈನರ್ ಹರಿದು 14ರ ಬಾಲಕ ಸಾವು, 14 ಮಂದಿಗೆ ಗಾಯ!

Catriona Elisa Gray

ಭುವನ ಸುಂದರಿ-2018 ಪಟ್ಟ ಫಿಲಿಪೈನ್ಸ್ ಪಾಲು!

Rahul gandhi

'ಪಪ್ಪು' ಇದೀಗ 'ಪಪ್ಪಾ' ಆಗಿ ಬದಲಾಗಿದ್ದಾರೆ: ರಾಹುಲ್ ಗಾಂಧಿಯನ್ನು ಕೊಂಡಾಡಿದ ಕೇಂದ್ರ ಸಚಿವ

Dhanurmasa

ದೈವಾರಾಧನೆಗೆ ಶ್ರೇಷ್ಠವಾದರೂ ಧನುರ್ ಮಾಸ ಶುಭಕಾರ್ಯಗಳಿಗೆ ಶ್ರೇಷ್ಠವಲ್ಲ! ಏಕೆ?, ಇಲ್ಲಿದೆ ವಿವರ

smartphones

ಆಪ್ ಡೌನ್ ಲೋಡ್ ಅಂಕಿ-ಅಂಶ: ಈ ವಿಷಯದಲ್ಲಿ ಭಾರತೀಯರೇ ಮುಂದು!

Sriimurali

'ಸ್ಟಾರ್ ಗಿರಿ'ಗಿಂತ ನಂಬಿಕೆಯೇ ಮುಖ್ಯ: ಜನ್ಮದಿನಕ್ಕಾಗಿ ಶ್ರೀಮುರಳಿ ವಿಶೇಷ ಸಂದರ್ಶನ

File photo

ಪೆಥೈ ಚಂಡಮಾರುತ: ಆಂಧ್ರಪ್ರದೇಶ ಕರಾವಳಿ ತೀರದಲ್ಲಿ ಕಟ್ಟೆಚ್ಚರ ಘೋಷಣೆ

ಮುಖಪುಟ >> ರಾಷ್ಟ್ರೀಯ

ವಸಂತ್ ಕುಂಜ್ ತ್ರಿವಳಿ ಕೊಲೆ: ತಂದೆ ಮೇಲಿನ ದ್ವೇಷಕ್ಕೆ ಕುಟುಂಬವನ್ನೇ ಸರ್ವನಾಶ ಮಾಡಿದ ಪುತ್ರ!

ಪೋಷಕರನ್ನು ಕೊಲ್ಲುವ ಗಂಟೆಗಳ ಮುನ್ನ ಅವರೊಡನೆ ಕುಳಿತು ಫೋಟೋ ಆಲ್ಬಮ್ ನೋಡಿದ್ದ!
He Looked At Photo Albums With Parents. Hours Later, He Killed Them

ವಸಂತ್ ಕುಂಜ್ ತ್ರಿವಳಿ ಕೊಲೆ: ತಂದೆ ಮೇಲಿನ ದ್ವೇಷಕ್ಕೆ ಕುಟುಂಬವನ್ನೇ ಸರ್ವನಾಶ ಮಾಡಿದ ಪುತ್ರ!

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ವಸಂತ್​ ಕುಂಜ್ ನಲ್ಲಿ ನಡೆದ ತ್ರಿವಳಿ ಕೊಲೆ ರಹಸ್ಯ ಕಡೆಗೂ ಬಯಲಾಗಿದೆ. ದೆಹಲಿ ಜನತೆ ಬೆಚ್ಚಿ ಬೀಳುವಂತೆ ಮಾಡಿದ್ದ ಈ ಕೊಲೆಗಳನ್ನು ಸ್ವತಃ ಮಗನೇ ಮಾಡಿದ್ದನು ಎನ್ನುವುದು ಪೋಲೀಸ್ ತನಿಖೆಯಿಂದ ಸಾಬೀತಾಗಿದೆ.

19  ವರ್ಷದ ಮಗನೇ ತಂದೆ, ತಾಯಿ ಹಾಗೂ ತನ್ನ ಸೋದರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದನೆಂದು ಪೋಲೀಸರು ಹೇಳಿದ್ದಾರೆ. ಸಧ್ಯ ಆರೋಪಿ ಸೂರಜ್ ವರ್ಮಾ ನನ್ನು ಪೋಲೀಸರು ಬಂಧಿಸಿದ್ದಾರೆ. 44 ವರ್ಷದ ಮಿಥಿಲೇಶ್, ಸಿಯಾ ದಂಪತಿ ಮತ್ತು ಇವರ 16 ವರ್ಷದ ಮಗಳು ನೇಹಾ ಕೊಲೆಯ ಆರೋಪದ ಹಿನ್ನೆಲೆಯಲ್ಲಿ ಈತನ ಬಂಧನವಾಗಿದೆ.

ಘಟನೆ ವಿವರ

ಉತ್ತರ ಪ್ರದೇಶ ಮೂಲದ ಮಿಥಿಲೇಶ್ ಕಂಟ್ರಾಕ್ಟರ್​ ಆಗಿ ಕೆಲಸ ಮಾಡುತ್ತಾ ದೆಹಲಿಯಲ್ಲಿ ವಾಸವಿದ್ದರು ಇವರ ಮಗ ಸೂರಜ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಸರಿಯಾಗಿ ಕಾಲೇಜಿಗೆ ತೆರಳದೆ ಪೋಲಿ ಅಲೆಯುತ್ತಿದ್ದ. ಇದನ್ನು ಕಂಡ ಪೋಷಕರು ಮಗನಿಗೆ ಬುದ್ದಿ ಮಾತುಗಳನ್ನು ಹೇಳಿದ್ದಾರೆ. ಆದರೆ ಬುದ್ದಿವಾದವನ್ನು ಅರಿತು ನಡೆಯುವ ಬದಲು ತನಗೆ ಬುದ್ದಿ ಹೇಳಿದ್ದ ಪಾಲಕರ ಮೇಲೆಯೇ ಈತ ದ್ವೇಷ ಬೆಳೆಸಿಕೊಂಡಿದ್ದ.

ಮಂಗಳವಾರ ಸ್ನೇಹಿತರೊಡನೆ ಹೊರಗೆ ತೆರಳಿದ್ದ ಸೂರಜ್ ಮನೆಗೆ ಹಿಂತಿರುಗುವಾಗ ಒಂದು ಚೂರಿ ಹಾಗೂ ಒಂದು ಜೊತೆ ಕತ್ತರಿಗಳನ್ನು ಖರೀದಿಸಿ ತಂದಿದ್ದ.ಅಂದು ಮಧ್ಯರಾತ್ರಿಯವರೆಗೆ ಹೆತ್ತವರೊಡನೆ ಅವರ ಹಳೆಯ ಫೋಟೋ ಆಲ್ಬಂ ಗಳನ್ನು ನೋಡುತ್ತಾ ಕಾಲ ಕಳೆದಿದ್ದ ಸೂರಜ್ ಬುಧವಾರ ಬೆಳಗಿನ ಜಾವಮೂರರ ಸುಮಾರಿಗೆ ಹೆತ್ತವರು ಮಲಗಿದ್ದ ಕೋಣೆಗೆ ನುಗ್ಗಿದ್ದಾನೆ.ಅಲ್ಲಿ ತಂದೆ ಮಿಥಿಲೇಶ್ ಹಾಗೂ ತಾಯಿ ಸಿಯಾ ಅವರ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದಿದ್ದನು. ಬಳಿಕ ತನ್ನ ಸೋದರಿ ನೇಹಾ ಕೋಣೆಗೆ ನುಗ್ಗಿದ ಸೂರಜ್ ಅವಳ ಕತ್ತನ್ನು ಸೀಳಿ ಹತ್ಯೆಗೆ ಯತ್ನಿಸಿದ. ಆಗ ಗಂಭೀರ ಗಾಯಗೊಂಡಿದ್ದ ಅವನ ತಾಯಿ ಮಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲೇ ಅಲ್ಲಿಯೇ ಇದ್ದ ಸೂರಜ್ ತಾಯಿಗೆ ಸತತವಾಗಿ ಇರಿದು ಅವರನ್ನೂ ಕೊಲೆ ಮಾಡಿದ್ದಾನೆ.

ಇದಾದ ಬಳಿಕ ಮನೆಯಲ್ಲಿದ್ಸ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಲ್ಲದೆ ಕೃತ್ಯಕ್ಕೆ ಬಳಸಿದ ಚೂರಿಯನ್ನು ತೊಳೆದು ಸ್ವಚ್ಚವಾಗಿಸಿದ. ಅದರಲ್ಲಿದ್ದ ಬೆರಳಚ್ಚುಗಳನ್ನು ಅಳಿಸಿ ಹಾಕಿದ್ದ. ಕಡೆಗೆ ಸುಮಾರು ಎರಡು ಗಂಟೆ ಬಳಿಕ ಅಂದರೆ ಬೆಳಿಗ್ಗೆ ಐದಕ್ಕೆ ನೆರೆ ಮನೆಯವರನ್ನೆಲ್ಲಾ ಕರೆದು ನಮ್ಮ ಮನೆಗೆ ದರೋಡೆಕೋರರು ನುಗ್ಗಿದ್ದರು, ತಂದೆ-ತಾಯಿ, ಸೋದರಿಯರನ್ನು ಕೊಂದು ಹೋಗಿದ್ದಾರೆ ಎಂದು ಬೊಬ್ಬೆ ಹಾಕಿದ್ದಾನೆ. 

ಈ ಕುರಿತಂತೆ ಪೋಲೀಸರು ಸೂರಜ್ ನನ್ನು ವಿಚಾರಣೆ ನಡೆಸಿದ್ದು ಆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ.ತನಗೆ ಅಪ್ಪನೆಂದರೆ ದ್ವೇಷವಿತ್ತು,  ನನ್ನ ತಂಗಿ ಆಗಾಗ್ಗೆ ನನ್ನ ಮೊಬೈಲ್​ ಚೆಕ್​ ಮಾಡಿ, ನನ್ನ ಚಟುವಟಿಕೆಗಳ ಬಗ್ಗೆ ನನ್ನ ತಂದೆಗೆ ಹೇಳುತಿದ್ದಳು.ಅಲ್ಲದೆ ನನ್ನ ತಂದೆ ಹನ್ನೆರಡನ್ ತರಗತಿ ಕಲಿಯುವಾಗ ಅವರು ಕಟ್ಟಿಸುತ್ತಿದ್ದ ಹೊಸ ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನೀಡಿದ್ದರು. ಹೀಗಾಗಿ ನಾನು ಅನುತ್ತೀರ್ಣನಾದೆ, ಇದರಿಂದ ನನ್ನ ಭವಿಷ್ಯ ಹಾಳಾಗಿತ್ತು ಹೀಗಾಗಿ ಮೂವರನ್ನೂ ನಾನೇ ಕೊಲೆ ಮಾಡಿದೆ ಎಂದು ವಿವರಿಸಿದ್ದಾನೆ.
Posted by: RHN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Delhi, tribble murder, Vasant Kunj, ಹಲಿ, ತ್ರಿವಳಿ ಕೊಲೆ, ವಸಂತ್ ಕುಂಕುಂಜ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS