Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Pramod Sawant to be sworn in as Goa CM tonight

ಗೋವಾ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಇಂದು ರಾತ್ರಿಯೇ ಪ್ರಮಾಣ

Reliance Communications pays Rs 458.77 crore to Ericsson: Sources

ಜೈಲು ಶಿಕ್ಷೆಯಿಂದ ಅನಿಲ್‌ ಅಂಬಾನಿ ಪಾರು, ಎರಿಕ್ಸನ್ ಗೆ 458 ಕೋಟಿ ರೂ. ಪಾವತಿಸಿದ ರಿಲಯನ್ಸ್ ಕಮ್ಯುನಿಕೇಷನ್ಸ್‌

PM pays homage to Parrikar, meets family

ಪರಿಕ್ಕರ್ ಪಾರ್ಥಿವ ಶರೀರ ದರ್ಶನ ಪಡೆದ ಪ್ರಧಾನಿ ಮೋದಿ

IPL 2019: Party Starts in Chennai as 12000 Turn Up for CSK Practice Game

ಧೋನಿ ಹವಾ: ಐಪಿಎಲ್ ಆಟಗಾರರ ಅಭ್ಯಾಸಕ್ಕೇ ಸ್ಟೇಡಿಯಂ ಹೌಸ್ ಫುಲ್! ವಿಡಿಯೋ ನೋಡಿ..

ಸಂಗ್ರಹ ಚಿತ್ರ

ಗಂಡಸ್ತನ ಇಲ್ಲದವರೂ ಮದುವೆಯಾಗ್ತಾರೆ, ಆದರೆ ಮಕ್ಕಳಾಗಲ್ಲ; ಮೋದಿ ಬಗ್ಗೆ ಕಾಂಗ್ರೆಸ್ ಶಾಸಕ ಹೇಳಿಕೆ!

Rahul Gandhi-Ramya

ಕೊನೆಗೂ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮದಲ್ಲಿ ರಮ್ಯಾ ಪ್ರತ್ಯಕ್ಷ!

Sumalatha Ambareesh

ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ, ಮಾರ್ಚ್ 20ರಂದು ನಾಮಪತ್ರ ಸಲ್ಲಿಕೆ: ಸುಮಲತಾ

ಸಂಗ್ರಹ ಚಿತ್ರ

ಇಂದಿರಾ ಕ್ಯಾಂಟಿನ್ ಆಹಾರ ವಿಷಕಾರಿ: ಕೋಟ್ಯಂತರ ರೂ. ಅಕ್ರಮ: ಉಮೇಶ್ ಶೆಟ್ಟಿ ಆರೋಪ

Dead whale in Philippines had 40 kg of plastic in stomach

ಸತ್ತ ತಿಮಿಂಗಿಲ ಹೊಟ್ಟೆಯಲ್ಲಿ ಸಿಕ್ತು 40 ಕೆಜಿ ಪ್ಲಾಸ್ಟಿಕ್!

Congress MLA B Nagendra sent to police custody in Illegal mining case

ಅಕ್ರಮ ಗಣಿಗಾರಿಕೆ: ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಪೊಲೀಸ್ ವಶಕ್ಕೆ

Several wounded in shooting on tram in Netherlands

ನ್ಯೂಜಿಲ್ಯಾಂಡ್ ಬಳಿಕ ನೆದರ್ಲ್ಯಾಂಡ್ ನಲ್ಲಿ ಗುಂಡಿನ ದಾಳಿ: ಒಬ್ಬ ಸಾವು ಹಲವರಿಗೆ ಗಾಯ

MS Dhoni

ಮೈದಾನದಲ್ಲಿ ಮತ್ತೆ ಧೋನಿಯ ತುಂಟಾಟ; ಅಭಿಮಾನಿ ಕೈಗೆ ಸಿಗದೆ ಓಡಾಡಿಸಿದ ಮಾಹಿ, ವಿಡಿಯೋ ವೈರಲ್!

Wife, Lover arrested For killing husband in Bengaluru

ಅನೈತಿಕ ಸಂಬಂಧ: ಪತಿ ಕೊಲೆ ಮಾಡಿದ್ದ ಪತ್ನಿ, ಪ್ರಿಯಕರನ ಬಂಧನ

ಮುಖಪುಟ >> ರಾಷ್ಟ್ರೀಯ

1946ರಲ್ಲಿ ಸ್ವಾತಂತ್ರ್ಯ ಹೋರಾಟದ ವೇಳೆ ಬೇರ್ಪಟ್ಟ ಕೇರಳ ದಂಪತಿ 72 ವರ್ಷಗಳ ಬಳಿಕ ಪುನರ್ಮಿಲನ!

Representational image

ಸಾಂದರ್ಭಿಕ ಚಿತ್ರ

ಕಣ್ಣೂರು: ಇದು ಬರೋಬ್ಬರಿ ಮುಕ್ಕಾಲು ಶತಮಾನದ ಬಳಿಕ ಒಂದಾದ ದಂಪತಿಯ ಅಪೂರ್ವ ಪುನರ್ಮಿಲನದ ಕಥೆ. 1946 ರಲ್ಲಿ  ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ಜೈಲು ಶಿಕ್ಷೆ ಅನುಭವಿಸಿದ್ದ ಇ.ಕೆ ನಾರಾಯಣ್ ಬರೋಬ್ಬರೀ 72 ವರ್ಷಗಳ ನಂತರ ತಮ್ಮ ಮೊದಲ ಪತ್ನಿಯನ್ನು ಭೇಟಿಯಾಗದ್ದಾರೆ.

ನಾರಾಯಣನ್ ನಂಬಿಯಾರ್ ಮತ್ತವರ ಪತ್ನಿ ಶಾರದಾ ದೇಶಕ್ಕಾಗಿ ತಮ್ಮ ಖಾಸಗಿ ಬದುಕನ್ನು ತ್ಯಾಗ ಮಾಡಿದ್ದರು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದ ನಂಬಿಯಾರ್ ಮದುವೆಯಾಗಿ ಒಂದು ವರ್ಷವಾಗುವಷ್ಟರಲ್ಲಿ ತಂದೆ ಜತೆ ಜೈಲು ಪಾಲಾಗಿದ್ದರು. 

ಅದು 1946ರ ಸಮಯ. ದೇಶದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟ ಉತ್ತುಂಗದಲ್ಲಿತ್ತು, ಅದರ ಜತೆಗೆ ಊಳಿಗಮಾನ್ಯ ಪದ್ಧತಿಯ ವಿರುದ್ಧ ಸಹ ರೈತರು ಒಂದಾಗಿ ಹೋರಾಟ ಆರಂಭಿಸಿದ್ದರು. ಆಗಷ್ಟೇ ನಂಬಿಯಾರ್ - ಶಾರದಾ ವಿವಾಹವಾಗಿತ್ತು. ಮದುವೆಯಾದಾಗ ನಂಬಿಯಾರ್‌ಗೆ 17 ವರ್ಷ ಮತ್ತು ಶಾರದಾಗೆ 13 ವರ್ಷ. ಎಳೆ ವಯಸ್ಸಿನ ದಂಪತಿ ಪರಸ್ಪರ ಮಾತಾಡಲು ಸಹ ಪ್ರಾರಂಭಿಸಿರಲಿಲ್ಲ. 

ಅಂದು 1946, ಡಿಸೆಂಬರ್ 30, ನಾರಾಯಣ್ ನಂಬಿಯಾರ್, ಅವರ ತಂದೆ ಥಲಿಯಾನ್ ರಾಮನ್ ನಂಬಿಯಾರ್ ಮತ್ತು ನೂರಾರು ಜನರು ಸ್ಥಳೀಯ ಭೂ ಮಾಲೀಕನ ವಿರುದ್ಧ ದಂಗೆದ್ದು , ಮರುದಿನ ಆತನ ಮನೆಯ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು. ಆದರೆ ಅದು ಕಾರ್ಯಗತವಾಗುವ ಮೊದಲೇ ಪೊಲೀಸರು ಸ್ಥಳಕ್ಕೆ ಬಂದು ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ 5 ಜನ ಕ್ರಾಂತಿಕಾರಿಗಳು ಸಾವನ್ನಪ್ಪಿ, ಅನೇಕರು ಗಾಯಗೊಂಡರು. ಅಲ್ಲಿಂದ ತಪ್ಪಿಸಿಕೊಂಡ ನಾರಾಯಣ್ ನಂಬಿಯಾರ್ ಮತ್ತವರ ತಂದೆ ಭೂಗತರಾದರು.  

ಆದರೆ ಅವರು ಮನೆಯಲ್ಲೇ ಅಡಗಿ ಕುಳಿತಿದ್ದಾರೆ ಎಂದುಕೊಂಡ ಪೊಲೀಸರು ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು ಮತ್ತು ಶಾರದಾ ಸಹಿತ ಅಲ್ಲಿದ್ದ ಮಹಿಳೆಯರಿಗೆ ಬೆದರಿಕೆ ಹಾಕಿದರು. ಹೀಗಾಗಿ ಮನೆಯವರು ಶಾರದಾಳನ್ನು ತವರಿಗೆ ಕಳುಹಿಸಿದರು. ಆಕೆಯ ಪತಿ ಮತ್ತು ಮಾವ ಬಂಧನಕ್ಕೊಳಗಾಗಿ ಜೈಲು ಸೇರಿದರು. 

ಪತಿಯ ಬಗ್ಗೆ ಶಾರದಾ ಮತ್ತವರ ತವರು ಮನೆಯವರಿಗೆ ಮಾಹಿತಿ ಸಿಗಲೇ ಇಲ್ಲ. ಆಕೆಯ ತವರು ಮನೆಯವರು ಬಲವಂತವಾಗಿ ಆಕೆಗೆ ಬೇರೊಂದು ಮದುವೆ ಮಾಡಿಸಿದರು. ಇತ್ತ ನಾರಾಯಣನ್ ಕೂಡ ಬೇರೊಂದು ಮದುವೆಯಾದರು. 

ಒಂದು ದಿನ ಶಾರದಾ ಅವರ ಮಗ ಭಾರ್ಗವನ್ ಆಚಾನಕ್ ಆಗಿ ನಾರಾಯಣನ್ ಅವರ ಸಂಬಂಧಿಕರನ್ನು ಭೇಟಿಯಾದರು.ಮನೆ ಮನೆತನದ ಬಗ್ಗೆ ಮಾತನಾಡುತ್ತಿರುವಾಗ ಈ ಎರಡು ಕುಟುಂಬಗಳು ಪರಸ್ಪರ ಸಂಬಂಧ  ಹೊಂದಿರುವ ವಿಷಯ ತಿಳಿಯಿತು. ಹಾಗಾಗಿ ತನ್ನ ಅಮ್ಮ ಮಕ್ತು ಆಕೆಯ ಮೊದಲ ಪತಿ ಭೇಟಿ ಮಾಡಿಸಲು ಭಾರ್ಗವನ್ ಮುಂದಾದರು. 

ನಾರಾಯಣ್ ತನ್ನ ಮೊದಲ ಪತ್ನಿ ಶಾರದಾಳನ್ನು ನೋಡಲಿಕ್ಕಾಗಿ ಭಾರ್ಗವನ್ ಮನೆಗೆ ಬಂದಿದ್ದರು. ಅವರ ಜೊತೆಗೆ ಸಂಬಂಧಿಕರು ಇದ್ದರು.

ಮೊದಲು ನಾರಯಣನ್ ಅವರ ಜೊತೆ ಮಾತನಾಡಲು ಅಮ್ಮ ಹಿಂದೇಟು ಹಾಕಿದರು, ಆಮೇಲೆ ಒತ್ತಾಯ ಮಾಡಿ ಹೊರಗೆ ಕರೆ ತಂದೆ, ಭೇಟಿ ಮಾಡಿದಾಗ ಇಬ್ಬರು ಭಾವುಕರಾದರು.
Posted by: SD | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Kerala, Couple , meet, 72 years, ಕೇರಳ, ದಂಪತಿ, ಭೇಟಿ, 72 ವರ್ಷಗಳು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS