Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Union Cabinet meeting today; dissolution of 16th LS to be recommended

ಇಂದು ಸಂಜೆ ಕೇಂದ್ರ ಸಂಪುಟ ಸಭೆ, 16ನೇ ಲೋಕಸಭೆ ವಿಸರ್ಜನೆಗೆ ಶಿಫಾರಸು

Rahul Gandhi

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಳೆ ರಾಹುಲ್ ಗಾಂಧಿ ರಾಜಿನಾಮೆ?

ವಿರಾಟ್ ಕೊಹ್ಲಿ-ಸರ್ಫರಾಜ್ ಖಾನ್

ವಿಶ್ವಕಪ್ ಮಹಾಸಮರದಲ್ಲಿ ಟೀಂ ಇಂಡಿಯಾ-ಪಾಕ್ ಹೈ ವೋಲ್ಟೇಜ್ ಕದನದ ಬಗ್ಗೆ ಕೊಹ್ಲಿ ಹೇಳಿದ್ದೇನು?

Common Entrance Test 2019 results for Karnataka to be declared on Saturday

2019ನೇ ಸಾಲಿನ ಸಿಇಟಿ ಫಲಿತಾಂಶ ನಾಳೆ ಪ್ರಕಟ

ಸಂಗ್ರಹ ಚಿತ್ರ

ಮಂಡ್ಯದಲ್ಲಿ ಭೀಕರ ಅಪಘಾತ: ಲಾರಿಗೆ ಕಾರು ಡಿಕ್ಕಿ, ಕೇರಳದ ನಾಲ್ವರು ದುರ್ಮರಣ

Supreme Court

ಸುಪ್ರೀಂಕೋರ್ಟ್‌ನ ನಾಲ್ವರು ಹೊಸ ನ್ಯಾಯಮೂರ್ತಿಗಳ ಪ್ರಮಾಣ ವಚನ

I wanted take an indefinite break from cricket after World T20 controversy, reveals Harmanpreet Kaur

ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದೆ: ಹರ್ಮನ್‌ಪ್ರೀತ್‌ ಕೌರ್‌

Bengaluru: Man ends life over harassment by wife

ಬೆಂಗಳೂರು: ಪತ್ನಿಯ ಕಾಟ ತಡೆಯಲಾರದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Kedar Jadhav

ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ ಕೇದಾರ್ ಜಾದವ್ ನಿರ್ಣಾಯಕ ಪಾತ್ರ!

Women show their voter identity cards as they stand in a queue at a polling station.

2019ರ ಲೋಕಸಭೆ ಚುನಾವಣೆ ಕುರಿತು ನ್ಯಾಷನಲ್ ಜಿಯೊಗ್ರಫಿ ಚಾನೆಲ್ ನಿಂದ ಸಾಕ್ಷ್ಯಚಿತ್ರ

Suniel Shetty

ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ರಗಡ್ ಲುಕ್!

HK Patil

ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಮೊದಲ ವಿಕೆಟ್ ಪತನ: ಎಚ್.ಕೆ ಪಾಟೀಲ್ ರಾಜಿನಾಮೆ

Ramya-Shilpa Ganesh

ರಮ್ಯಾ ಎಲ್ಲಿದಿಯಮ್ಮಾ? ನಟಿ ಕಮ್ ರಾಜಕಾರಣಿ ಕಾಲೆಳೆದ ಶಿಲ್ಪಾ ಗಣೇಶ್!

ಮುಖಪುಟ >> ರಾಷ್ಟ್ರೀಯ

ಮಮತಾ ದೀದಿ ನನಗೆ ಪ್ರತಿವರ್ಷ ಕುರ್ತಾ, ಸ್ವೀಟ್ಸ್ ಕಳಿಸುತ್ತಾರೆ, ವಿರೋಧ ಪಕ್ಷಗಳಲ್ಲಿ ಸಾಕಷ್ಟು ಗೆಳೆಯರಿದ್ದಾರೆ: ಪ್ರಧಾನಿ ಮೋದಿ

ಮನುಷ್ಯನ ಸಿಟ್ಟಿನ ಬಗ್ಗೆ ಮೋದಿ ಹೇಳಿದ್ದೇನು?
Bollywood actor Akshay Kumar interweving PM Narendra Modi

ಪ್ರಧಾನಿ ನರೇಂದ್ರ ಮೋದಿಯನ್ನು ಸಂದರ್ಶನ ಮಾಡುತ್ತಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್

ನವದೆಹಲಿ: ಲೋಕಸಭೆ ಚುನಾವಣೆಯ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದರೆ ನೆನಪಾಗುವುದು ರಾಜಕೀಯ, ಬಿಜೆಪಿ, ಆರ್ ಎಸ್ಎಸ್, ವಿರೋಧ ಪಕ್ಷಗಳ ಟೀಕೆ, ಮಾತುಗಳು ಇತ್ಯಾದಿ...ಇತ್ಯಾದಿ.

ಆದರೆ ಬುಧವಾರ ಬೆಳ್ಳಂಬೆಳಗ್ಗೆ ಇವೆಲ್ಲವುಗಳಿಂದ ದೂರವುಳಿದು ಆರಾಮ ಮನಸ್ಥಿತಿಯಲ್ಲಿ ಸುಮಾರು 1 ಗಂಟೆ ಕಾಲ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ಈ ಮೂಲಕ ಮೋದಿಯವರ ಇನ್ನೊಂದು ಮುಖ ಭಾರತೀಯರಿಗೆ ಮತ್ತು ಜಗತ್ತಿಗೆ ಪರಿಚಯವಾಗಿದೆ. ದೆಹಲಿಯ ಪ್ರಧಾನಿ ನರೇಂದ್ರ ಮೋದಿ ನಿವಾಸ 7 ಲೋಕ ಕಲ್ಯಾಣ ಮಾರ್ಗದಲ್ಲಿ ಸುಂದರವಾದ ಪ್ರಕೃತಿ ನಡುವೆ ಚಿಲಿಪಿಲಿ ಕೂಗುವ ಹಕ್ಕಿಯ ಸ್ವರದ ಮಧ್ಯೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ವಿರಾಮವಾಗಿ ಕುಳಿತು ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಇದು ಸಂಪೂರ್ಣ ರಾಜಕಿಯೇತರ ಸಂದರ್ಶನವಾಗಿತ್ತು.

ಪ್ರಧಾನಿಯವರ ಮಾತುಗಳ ಪ್ರಮುಖ ಸಾರಾಂಶಗಳು ಇಂತಿವೆ:

-ಸಾಮಾನ್ಯ ಕುಟುಂಬ ಮತ್ತು ಸಾಮಾನ್ಯ ಹಿನ್ನಲೆಯಿಂದ ಬಂದ ನಾನು ಈ ದೇಶದ ಪ್ರಧಾನಿಯಾಗುತ್ತೇನೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ.

-ನನ್ನ ತಂದೆ ಚಹಾ ಮಾರುತ್ತಿದ್ದರು. ತಾಯಿ ಲಡ್ಡು ಮಾಡಿ ಮನೆ ಮನೆಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಾ ಮಕ್ಕಳಾದ ನಮ್ಮನ್ನು ಬೆಳೆಸಿದರು. ಇಂತಹ ವಾತಾವರಣದ ಮಧ್ಯೆ ಬೆಳೆದ ನಾನು ದೊಡ್ಡ ಮಟ್ಟದಲ್ಲಿ ಕನಸು ಕಾಣುವುದು ಅಸಹಜವಾಗಿತ್ತು. ಕೆಲವೊಮ್ಮೆ ಈ ದೇಶದ ನಾಗರಿಕರು ನನ್ನನ್ನು ಇಷ್ಟೊಂದು ಏಕೆ ಪ್ರೀತಿಸುತ್ತಾರೆ ಎಂದು ಆಶ್ಚರ್ಯವಾಗುತ್ತದೆ.

-ನಾನು ಚಿಕ್ಕವನಿದ್ದಾಗ ಸೈನಿಕರ ದೇಶಸೇವೆ, ಅವರ ದೇಶಭಕ್ತಿ ನನಗೆ ಸ್ಪೂರ್ತಿ ನೀಡುತ್ತಿತ್ತು. ಇಂತಹ ಮನಸ್ಥಿತಿಯಲ್ಲಿ ನಾನು ರಾಮ ಕೃಷ್ಣ ಮಿಷನ್ ಸೇರಿದೆ. ಅದು ನನ್ನಲ್ಲಿ ದೇಶಸೇವೆ ಮಾಡುವ ಹುಚ್ಚನ್ನು ಹೆಚ್ಚಿಸಿತು.

-ನಾನು ಕುಳಿತಲ್ಲಿ ಕೂರುತ್ತಿರಲಿಲ್ಲ. ದೇಶ, ವಿದೇಶ ಸುತ್ತುತ್ತಿದ್ದೆ. ನನ್ನ ಅನೇಕ ಪ್ರಶ್ನೆಗಳು ಮತ್ತು ಸಂದೇಹಗಳಿಗೆ ನನ್ನ ತಿರುಗಾಟದಲ್ಲಿ ಉತ್ತರ ಸಿಗುತ್ತಿತ್ತು.

-ಸಿಟ್ಟು ಮನುಷ್ಯನ ಸ್ವಭಾವಗಳಲ್ಲಿ ಒಂದು, ಆದರೆ ನನಗೆ ಯಾವತ್ತೂ ಸಿಟ್ಟು ಬರುವುದಿಲ್ಲ, ಸಿಟ್ಟು ಮನುಷ್ಯನಲ್ಲಿ ಋಣಾತ್ಮಕ ಅಂಶವನ್ನು ಹರಡುತ್ತದೆ.
-ಇಷ್ಟು ದೀರ್ಘ ಸಮಯದವರೆಗೆ ಪ್ರಧಾನಿಯಾಗಿದ್ದೇನೆ ಆದರೆ ನನಗೆ ಒಂದು ಬಾರಿಯೂ ಕೋಪ ತೋರ್ಪಡಿಸುವ ಪರಿಸ್ಥಿತಿ ಎದುರಾಗಿಲ್ಲ. ನಾನು ಕಠಿಣ ಹಾಗೂ ಶಿಸ್ತಿನ ವ್ಯಕ್ತಿ ಹೀಗಂತ ಯಾವತ್ತಿಗೂ, ಯಾರಿಗೂ ಅವಮಾನ ಮಾಡುವಂತೆ ನಡೆದುಕೊಳ್ಳುವುದಿಲ್ಲ. ಸಾಮಾನ್ಯವಾಗಿ ಯಾರಿಗಾದರೂ ಯಾವುದಾದರೂ ಕೆಲಸ ನೀಡಿದ್ದರೆ ಅದರಲ್ಲಿ ನಾನು ಕೂಡಾ ಪಾಲುದಾರನಾಗಲು ಪ್ರಯತ್ನಿಸುತ್ತೇನೆ. ನಾನು ಕಲಿಯುತ್ತೇನೆ ಹಾಗೂ ಇತರರಿಗೆ ಕಲಿಸುತ್ತೇನೆ ಹೀಗೆ ತಂಡ ರಚಿಸುತ್ತಾ ಮುಂದೆ ಸಾಗುತ್ತೇನೆ. ಅತ್ಯಂತ ಕಠಿಣ ಶಿಸ್ತು ಒಳ್ಳೆಯದಲ್ಲ. ಹೀಗಾಗಿ ಅತಿ ಹೆಚ್ಚು ಕೆಲಸ ಮಾಡಿಸುವುದಿಲ್ಲ. ಆದರೆ ನಾನು ಕೂಡಾ ಕೆಲಸ ಮಾಡುತ್ತೇನೆ ಹೀಗಿರುವಾಗ ಜನರು ಕೂಡಾ ಮಾಡಬೇಕಾಗುತ್ತದೆ.
-ಗುಮಾಸ್ತನಿಂದ ದೇಶದ ಪ್ರಧಾನಿಯವರೆಗೆ ನನ್ನ ಜೀವನದಲ್ಲಿ ಎಂದಿಗೂ ಸಿಟ್ಟು ತೋರಿಸಿಕೊಂಡಿರಲಿಲ್ಲ.

-ನನಗೆ ಸಿಟ್ಟು ಮಾಡಿಕೊಳ್ಳುವ ಸಂದರ್ಭ ಬಂದಿಲ್ಲದಿರಬಹುದು. ಸಭೆಯಲ್ಲಿ ಸಿಟ್ಟು ಬಂದರೆ ಅದು ಎಲ್ಲರನ್ನೂ ವಿಕೇಂದ್ರಿಕರಿಸುತ್ತದೆ.

-ಮೊದಲೆಲ್ಲಾ ಭಾವನೆಗಳು ಬಂದರೆ ಹಾಳೆಯಲ್ಲಿ ಬರೆಯುತ್ತಿದ್ದೆ. ನಂತರ ಆ ಬಗ್ಗೆ ವಿಮರ್ಶೆ ಮಾಡಿಕೊಳ್ಳುತ್ತಿದ್ದೆ. ಅದರಿಂದ ನನ್ನ ತಪ್ಪುಗಳು ನನಗೆ ನಂತರ ಅರ್ಥವಾಗುತ್ತಿದ್ದವು. ಇದು ಕಾಲಕ್ರಮೇಣ ಪರಿಸ್ಥಿತಿಗೆ ಹೊಂದಿಕೊಳ್ಳಲು ನನಗೆ ಸಹಾಯವಾಯಿತು.

-ಯುವಕನಿದ್ದಾಗಿನಿಂದಲೇ ನಾನು ಒಂಟಿಯಾಗಿ ಬೆಳೆದವನು. ಕುಟುಂಬದಿಂದ ದೂರವಿರಲು ಅಭ್ಯಾಸವಾಯಿತು. ನಂತರದ ದಿನಗಳಲ್ಲಿ ನನ್ನ ತಾಯಿಯಲ್ಲಿ ನನ್ನ ಜೊತೆ ಬಂದು ಇರು ಎಂದು ಹೇಳಿದರೂ ಕೇಳುತ್ತಿರಲಿಲ್ಲ. ತಾಯಿ ತನ್ನ ಗ್ರಾಮದಲ್ಲಿರಲು ಬಯಸುತ್ತಾಳೆ. ನನಗೆ ನನ್ನ ತಾಯಿ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ.ನಾನು ತಾಯಿಗೆ ಹಣ ಕಳುಹಿಸುತ್ತಿಲ್ಲ, ನಾನು ಮನೆಗೆ ಹೋದಾಗ ಈಗಲೂ ತಾಯಿಯೇ ನನಗೆ ಹಣ ಕೊಡುತ್ತಾರೆ.
-ನನ್ನ ಅತಿಯಾದ ಆತ್ಮವಿಶ್ವಾಸವೇ ನನಗೆ ದೊಡ್ಡ ಸಮಸ್ಯೆ.
-ನಾನು ಶಿಸ್ತಿನ ಮನುಷ್ಯ ಹಾಗೂ ಸಣ್ಣವನಿದ್ದಾಗಿನಿಂದಲೇ ಹಾಸ್ಯಪ್ರಜ್ಞೆ ಬೆಳೆಸಿಕೊಂಡವನು, ಹಾಸ್ಯ ವಾತಾವರಣವನ್ನು ತಿಳಿಯಾಗಿಸುತ್ತದೆ. ಆದರೆ ಇದು ಹಾಸ್ಯಗಳನ್ನು ಸಂದರ್ಭದಿಂದ ಹೊರಗೆ ತೆಗೆದುಕೊಂಡು ವಿವಾದ ಸೃಷ್ಟಿಸುವ ಪ್ರಸಂಗಗಳು ಕೂಡ ನಡೆಯುತ್ತವೆ.

-ನನಗೆ ವಿರೋಧ ಪಕ್ಷಗಳಲ್ಲಿ ಸಹ ಉತ್ತಮ ಸ್ನೇಹಿತರಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನನಗೆ ವೈಯಕ್ತಿಕವಾಗಿ ಕುರ್ತಾ ಮತ್ತು ಸಿಹಿತಿಂಡಿಗಳನ್ನು ಕಳುಹಿಸುತ್ತಾರೆ. ನಾವೆಲ್ಲ ಸ್ನೇಹಿತರು ಸೇರಿ ವರ್ಷದಲ್ಲಿ ಒಂದೊ, ಎರಡೊ ಸಲ ಒಟ್ಟಿಗೆ ಕುಳಿತು ಊಟ ಮಾಡುತ್ತೇವೆ.

-ಹಲವು ವರ್ಷಗಳ ಹಿಂದೆ ನಾನಿನ್ನೂ ಗುಜರಾತ್ ಮುಖ್ಯಮಂತ್ರಿ ಕೂಡ ಆಗಿರಲಿಲ್ಲ. ಆಗ ಸಂಸತ್ತಿಗೆ ಯಾವುದೋ ಕೆಲಸದ ಮೇಲೆ ಹೋಗಿದ್ದೆ, ಅಲ್ಲಿ ಗುಲಾಂ ನಬಿ ಆಜಾದ್ ಮತ್ತು ನಾನು ಸ್ನೇಹಿತರಂತೆ ಕುಳಿತು ಮಾತನಾಡಿದೆವು. ಹೊರಗೆ ಬಂದಾಗ ಮಾಧ್ಯಮದವರು ನೀವು ಆರ್ ಎಸ್ಎಸ್ ನವರು ಗುಲಾಂ ನಬಿ ಆಜಾದ್ ಜೊತೆ ಸ್ನೇಹಿತರಂತೆ ಹೇಗೆ ವರ್ತಿಸುತ್ತೀರಿ ಎಂದು ಕೇಳಿದರು. ಅದಕ್ಕೆ ಗುಲಾಂ ಒಳ್ಳೆಯ ಉತ್ತರ ಕೊಟ್ಟರು. ನೀವು ಹೊರಗೆ ನೋಡಿರುವಂತೆ ನಾವು ಆಂತರಿಕವಾಗಿ ಇರುವುದಿಲ್ಲ. ನಾವು ಎಲ್ಲಾ ಪಕ್ಷ, ಸಂಘಟನೆಯವರು ಒಂದೇ ಕುಟುಂಬದಂತೆ ಇರುತ್ತೇವೆ ಎಂದರು.

-ಇಂದಿಗೂ ಸಹ ಮಮತಾ ದೀದಿಯವರು ವರ್ಷಕ್ಕೆ ಒಂದೊ-ಎರಡೊ ಅವರೇ ಆರಿಸಿದ ಕುರ್ತಾಗಳನ್ನು ನನಗೆ ಕಳುಹಿಸುತ್ತಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ವರ್ಷದಲ್ಲಿ ಮೂರ್ನಾಲ್ಕು ಸಲ ಸಿಹಿತಿಂಡಿ ಕಳುಹಿಸುತ್ತಾರೆ. ಮಮತಾ ಬ್ಯಾನರ್ಜಿಯವರಿಗೆ ಇದು ಗೊತ್ತಾಗಿ ಅವರು ಕೂಡ ಕಳುಹಿಸುತ್ತಾರೆ.

ಸಂಬಂಧಿಸಿದ್ದು...
Posted by: SUD | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS