Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi

ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟ, ಕಾಶ್ಮೀರಿಗಳ ವಿರುದ್ಧ ಅಲ್ಲ: ಪ್ರಧಾನಿ ಮೋದಿ

ಸಂಗ್ರಹ ಚಿತ್ರ

ಬೆಂಗಳೂರು: ಏರೋ ಇಂಡಿಯಾ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ, 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲು!

Keerthan Holla crowned as SaReGaMaPa Season15 winner

ಸರಿಗಮಪ ಸೀಸನ್ 15 ಚಾಂಪಿಯನ್ ಆಗಿ ಹೊರಹೊಮ್ಮಿದ ಕೀರ್ತನ್ ಹೊಳ್ಳ

Fire at Aero India Parking Lot; Insurance companies Ready to Help their Customers

ಏರೋ ಇಂಡಿಯಾ ಅಗ್ನಿ ಪ್ರಮಾದ: ಕಾರು ಮಾಲೀಕರಿಗೆ ಪರಿಹಾರ ನೀಡಲು ಸಿದ್ಧ ಎಂದ ವಿಮಾ ಕಂಪನಿಗಳು!

10 killed in explosion at carpet factory in UP

ಉತ್ತರ ಪ್ರದೇಶ: ಕಾರ್ಪೆಟ್ ಕಾರ್ಖಾನೆಯಲ್ಲಿ ಸ್ಫೋಟ, 13 ಮಂದಿ ಸಾವು

Fire at Aero India Parking Lot; Here is how to claim Your Car insurance

ಏರೋ ಇಂಡಿಯಾ ಅಗ್ನಿ ಪ್ರಮಾದ: ಸುಟ್ಟು ಹೋದ ಕಾರುಗಳ ವಿಮೆ ಹಣ ಪಡೆಯುವುದು ಹೇಗೆ?

Virat Kohli wants World Cup-bound players to manage workload in IPL 2019

ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ: ಐಪಿಎಲ್ ಆಡುವ ವಿಶ್ವಕಪ್ ಆಟಗಾರರಿಗೆ ಕೊಹ್ಲಿ ಸಲಹೆ

Air India receives hijack call, airports put on high alert

ಏರ್ ಇಂಡಿಯಾ ವಿಮಾನ ಹೈಜಾಕ್ ಬೆದರಿಕೆ, ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್

Gautam Gambhir criticises Kejriwal

ಕಣ್ಣು ಬಿಟ್ಟರೆ ದೆಹಲಿಯಲ್ಲಿ ಸಾವಿರ ಸಮಸ್ಯೆ ಕಾಣುತ್ತವೆ: ಸಿಎಂ ಕೇಜ್ರಿವಾಲ್ ಧರಣಿಗೆ ಗಂಭೀರ್ ಟಾಂಗ್

Twitter co-founder Williams steps down from board

ನಿರ್ದೇಶಕ ಮಂಡಳಿಯಿಂದ ಕೆಳಗಿಳಿದ ಟ್ವಿಟರ್ ಸಹಸಂಸ್ಥಾಪಕ

Name India

ಭಾರತದ ಮೊದಲ ಬುಲೆಟ್​ ಟ್ರೈನ್ ​ಗೆ ಹೆಸರು ಸೂಚಿಸಿ ನಗದು ಬಹುಮಾನ ಗೆಲ್ಲಿ!

"Don

ನನ್ನ ಮಕ್ಕಳೂ 'ಅಣ್ವಸ್ತ್ರಗಳ ಒತ್ತಡ' ನಿರ್ವಹಿಸುವುದು ನನಗಿಷ್ಟವಿಲ್ಲ: ಸರ್ವಾಧಿಕಾರಿಯ ಅಚ್ಚರಿ ಹೇಳಿಕೆ

Trump Stopped USD 1.3 Billion in Financial Aid to Pakistan

ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ನೀಡಬೇಕಿದ್ದ ಆರ್ಥಿಕ ನೆರವು ಸ್ಥಗಿತಗೊಳಿಸಿದ ಅಮೆರಿಕ!

ಮುಖಪುಟ >> ವಿಶೇಷ

ಭಾರತೀಯ ಸಂವಿಧಾನದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪದಚ್ಯುತಿಗೊಳಿಸುವ ಪ್ರಕ್ರಿಯೆ ಹೇಗೆ?

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಪದಚ್ಯುತಿಗೆ ನಿಲುವಳಿ ನೋಟಿಸ್ ಹಿನ್ನಲೆ
Impeachment move against CJI: This is how a judge can be removed

ಸಂಗ್ರಹ ಚಿತ್ರ

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಸಹೋದ್ಯೋಗಿ ನ್ಯಾಯಾಧೀಶರೇ ತಾರತಮ್ಯ ಆರೋಪ ಮಾಡಿದ ಬೆನ್ನಲ್ಲೇ ಸಿಜೆಐ ಪದಚ್ಯುತಿಗೆ ವಿಪಕ್ಷಗಳು ಸಂಸತ್ ನ ಉಭಯ ಕಲಾಪದಲ್ಲಿ ನಿಲುವಳಿ ನೋಟಿಸ್ ನೀಡಿವೆ.

ಈಗಾಗಲೇ ಪ್ರಮುಖ ವಿಪಕ್ಷ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯಸಭೆ ಸಭಾಧ್ಯಕ್ಷ ಮತ್ತು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಪದಚ್ಯುತಿ ನಿಲುವಳಿ ನೋಟಿಸ್ ನೀಡಲಾಗಿದ್ದು, ಭಾರತೀಯ ಸಂವಿಧಾನದ ಅನುಚ್ಛೇಧ 124ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮತ್ತು ಅನುಚ್ಛೇಧ 128ರ ಅಡಿಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಪದಚ್ಯುತಿಗೊಳಿಸುವ ಅವಕಾಶವಿದೆ.

ಆದರೆ ಸಂವಿಧಾನದ ಯಾವುದೇ ಭಾಗದಲ್ಲೂ ನ್ಯಾಯಾಧೀಶರ ಪದಚ್ಯುತಿ ಪದ (impeachment) ಬಳಕೆಯಾಗಿಲ್ಲ. ಆದರೆ ದೇಶದ ರಾಷ್ಟ್ರಪತಿಗಳ ಆದೇಶದ ಮೇರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಅವರ ಸೇವೆಯಿಂದ ತೆಗೆದುಹಾಕಬಹುದಾಗಿದೆ. ಇನ್ನು ರಾಷ್ಟ್ರಪತಿಗಳೂ ಕೂಡ ಸಂಸತ್ ಉಭಯ ಸಭೆಗಳಲ್ಲಿ ಈ ಬಗ್ಗೆ ನಿಲುವಳಿ ಮಂಡನೆಯಾಗಿ ಅನುಮೋದನೆ ಪಡೆದ ಬಳಿಕವೇ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸುವ ಆದೇಶ ನೀಡಹುದಾಗಿದೆ.

ಇನ್ನು ನ್ಯಾಯಾಧೀಶರ ವಿಚಾರಣಾ ಕಾಯ್ದೆ 1968ರಲ್ಲಿ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆಯನ್ನು ವಿವರಿಸಲಾಗಿದೆ. ಕಾಯ್ದೆಯ ಅನ್ವಯ ನ್ಯಾಯಾಧೀಶರನ್ನು ವಜಾಗೊಳಿಸಲು ಸಂಸತ್ ಉಭಯ ಸಭೆಗಳ ಅನುಮೋದನೆ ಕಡ್ಡಾಯ. ಉಳಿದಂತೆ ನ್ಯಾಯಾಧೀಶರ ವಜಾಗೆ ಅನುಸರಿಸಬೇಕಾದ ಕೆಲ ಪ್ರಮುಖ ಪ್ರಕ್ರಿಯೆಗಳು ಇಂತಿವೆ.

1.ಲೋಕಸಭೆಯ ಕನಿಷ್ಠ 100 ಸದಸ್ಯರು ಪದಚ್ಯುತಿ ನಿಲುವಳಿ ನೋಟಿಸ್ ಗೆ ಸಹಿಹಾಕಿ ಸ್ಪೀಕರ್ ಗೆ ನೀಡಬೇಕು.

2.ಅಂತೆಯೇ ರಾಜ್ಯಸಭೆಯ ಕನಿಷ್ಠ 50 ಸದಸ್ಯರು ಪದಚ್ಯುತಿ ನಿಲುವಳಿ ನೋಟಿಸ್ ಗೆ ಸಹಿಹಾಕಿ ಸಭಾಧ್ಯಕ್ಷರಿಗೆ ನೀಡಬೇಕು.

3.ಹೀಗೆ ತಮ್ಮ ಬಳಿ ಸದಸ್ಯರು ನೀಡಿದ ಸಹಿ ಹಾಕಿದ ನೋಟಿಸ್ ಕುರಿತಂತೆ ಲೋಕಸಭೆಯ ಸ್ಪೀಕರ್ ಹಾಗೂ ರಾಜ್ಯಸಭೆಯ ಅಧ್ಯಕ್ಷರು ಪರಸ್ಪರ ಚರ್ಚೆ ನಡೆಸಿ, ಸದಸ್ಯರು ನೋಟಿಸ್ ನಲ್ಲಿ ನೀಡಿರುವ ಅಂಶಗಳು ಪೂರಕವಾಗಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು.

4. ಈ ಅಂಶಗಳ ಪರಿಶೀಲನೆ ಬಳಿಕ ಉಭಯ ಸಭಾಧ್ಯಕ್ಷರು ಪದಚ್ಯುತಿ ನಿಲುವಳಿಗೆ ಮನ್ನಣೆ ನೀಡಬೇಕೇ ಅಥವಾ ನೋಟಿಸ್ ಅನ್ನು ನಿರಾಕರಿಸಬೇಕೆ ಎಂಬುದನ್ನು ನಿರ್ಧರಿಸಬೇಕು.

5.ಒಂದು ವೇಳೆ ಪದಚ್ಯುತಿ ನಿಲುವಳಿಗೆ ಅನುಮೋದನೆ ನೀಡಬೇಕು ಎಂದಾದರೆ, ನೋಟಿಸ್ ಪಡೆದ ಸ್ಪೀಕರ್ ಅಥವಾ ಸಭಾಧ್ಯಕ್ಷರು ಸಿಜೆಐ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ತನಿಖೆ ನಡೆಸಲು ಮೂರು ಸದಸ್ಯರ ಸಮಿತಿ ರಚನೆ ಮಾಡುತ್ತಾರೆ. ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು, ಹೈಕೋರ್ಟ್ ಮುಖ್ಯನ್ಯಾಯಾಧೀಶರು ಮತ್ತು ವಿಶೇಷ ನ್ಯಾಯವಾದಿ ಇರಲಿದ್ದಾರೆ.

6.ಈ ಸಮಿತಿ ಸದಸ್ಯರು ಆರೋಪಗಳ ಆಧಾರದ ಮೇರೆಗೆ ತನಿಖೆ ನಡೆಸಲಿದ್ದು, ಆ ಅಂಶಗಳ ಆಧಾರದ ಮೇರೆಗೆ ಆರೋಪಪಟ್ಟಿ ತಯಾರಿಸಲಿದೆ.

7.ಈ ಆರೋಪ ಪಟ್ಟಿಯ ಪ್ರತಿಯನ್ನು ಆರೋಪಿತ ಸಿಜೆಐಗೆ ಕಳುಹಿಸಲಿದ್ದು, ಅವರೂ ಕೂಡ ಆರೋಪಗಳಿಗೆ ಲಿಖಿತ ಉತ್ತರ ನೀಡಲು ಅವಕಾಶ ನೀಡಲಾಗುತ್ತದೆ.

8.ಸಿಜೆಐ ವಿರುದ್ಧ ಆರೋಪಗಳು ಮತ್ತು ಅದಕ್ಕೆ ಮುಖ್ಯ ನ್ಯಾಯಾಮೂರ್ತಿಗಳು ನೀಡಿದ ಲಿಖಿತ ಉತ್ತರದ ಆಧಾರದ ಮೇರೆಗೆ ಸಮಿತಿ ತನ್ನ ವರದಿ ಸಿದ್ಧಪಡಿಸಿ ಸ್ಪೀಕರ್ ಅಥವಾ ಸಭಾಧ್ಯಕ್ಷರಿಗೆ ನೀಡಲಿದೆ. ಆ ವರದಿಯನ್ನು ಮತ್ತೆ ಸಂಬಂಧಪಟ್ಟ ಸಂಸತ್ ಸದನದಲ್ಲಿ ಮಂಡಿಸಲಿದ್ದಾರೆ.

9.ಒಂದು ವೇಳೆ ಸಮಿತಿ ವರದಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧದ ಆರೋಪದಲ್ಲಿ ಸತ್ಯ ಕಂಡುಬಂದರೆ ಅಥವಾ ಮುಖ್ಯ ನ್ಯಾಯಾಧೀಶರ ಕರ್ತವ್ಯದಲ್ಲಿ ದುರ್ಬಳಕೆ ಅಥವಾ ಅಸಮರ್ಥತೆ ಕಂಡುಬಂದಿದ್ದರೆ ಆಗ ಸಂಬಂಧ ಪಟ್ಟ ಸಂಸತ್ ಸದನದಲ್ಲಿ ವರದಿ ಕುರಿತು ಚರ್ಚೆ ನಡೆಸಿ ಅನುಮೋದನೆ ಪಡೆಯಲಾಗುತ್ತದೆ.

10. ಹೀಗೆ ಸಂಸತ್ ನ ಸದನದಲ್ಲಿ ಚರ್ಚೆಗೆ ಬರಲಿರುವ ವರದಿ ಮತ್ತು ನಿರ್ಣಯಕ್ಕೆ ಸಂಸತ್ ನ ಉಭಯ ಸದನಗಳಲ್ಲೂ ಬಹುಮತ ಲಭಿಸಬೇಕಿರುತ್ತದೆ. ಸಭೆಯ ಒಟ್ಟಾರೆ ಸದಸ್ಯ ಬಲದ ಪೈಕಿ ಕನಿಷ್ಠ ಮೂರನೇ ಎರಡರಷ್ಟು ಮತ ಲಭಿಸಬೇಕು. 

11.ಒಂದು ವೇಳೆ ಸಂಸತ್ ಸಭೆಯಲ್ಲಿ ಸಿಜೆಐ ಪದಚ್ಯುತಿಗೊಳಿಸುವ ನಿರ್ಣಯಕ್ಕೆ ಬಹುಮತ ಲಭಿಸಿದ್ದೇ ಆದರೆ ಮತ್ತೊಂದು ಸದನದ ಅನುಮೋದನೆಗಾಗಿ ನಿರ್ಣಯವನ್ನು ರವಾನೆ ಮಾಡಲಾಗುತ್ತದೆ. 

12.ಒಂದು ವೇಳೆ  ಎರಡೂ ಸದನಗಳಲ್ಲಿ ನಿರ್ಣಯ ಅಂಗೀಕಾರವಾದರೆ, ಬಳಿಕ ಈ ನಿರ್ಣಯವನ್ನು ರಾಷ್ಟ್ರಪತಿಗಳ ಅನುಮೋದನೆಗೆ ರವಾನೆ ಮಾಡಲಾಗುತ್ತದೆ. ಬಳಿಕ ಈ ನಿರ್ಣಯಕ್ಕೆ ರಾಷ್ಟ್ಪಪತಿಗಳು ಅನುಮೋದನೆ ನೀಡಲಿದ್ದಾರೆ.
Posted by: SVN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : New Delhi, Supreme Court, CJI Deepak Misra, Impeachment Motion, ನವದೆಹಲಿ, ಸುಪ್ರೀಂ ಕೋರ್ಟ್, ಸಿಜೆಐ ದೀಪಕ್ ಮಿಶ್ರಾ, ಪದಚ್ಯುತಿ ನಿಲುವಳಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS