Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ವಿಷ ಪ್ರಸಾದ ಸೇವಿಸಿ 15 ಸಾವು: ಪ್ರಸಾದಕ್ಕೆ ವಿಷ ಬೆರೆಸಿದ್ದು ನಾನೇ ತಪ್ಪೋಪ್ಪಿಕೊಂಡ ಮಹಿಳೆ?

Narendra Modi-Manmohan Singh

ಪ್ರಧಾನಿ ಮೋದಿಯಂತೆ ಮಾಧ್ಯಮಗಳ ಮುಂದೆ ಮಾತನಾಡಲು ನಾನು ಹೆದರುತ್ತಿರಲಿಲ್ಲ: ಮನಮೋಹನ್ ಸಿಂಗ್

HD Kumaraswamy

ನ್ಯಾಯಾಂಗದಿಂದ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ: ಸಿಎಂ ಕುಮಾರಸ್ವಾಮಿ

Nageshwara Rao

ಸಿಬಿಐ ಒಳಜಗಳ: ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿ ನಾಗೇಶ್ವರ್ ರಾವ್ ನೇಮಕ!

Jaydev Unadkat

ಐಪಿಎಲ್: 8.4 ಕೋಟಿ ರೂ. ಗೆ ಜಯದೇವ್ ಉನದ್ಕಟ್ ರಾಜಸ್ಥಾನ ರಾಯಲ್ಸ್ ಪಾಲು, ನಿರೀಕ್ಷೆಯಲ್ಲಿ ಯುವರಾಜ್ ಸಿಂಗ್

PM Modi

ಶೇ.99 ರಷ್ಟು ಪದಾರ್ಥಗಳನ್ನು ಶೇ.18 ಜಿಎಸ್‏ಟಿ ವ್ಯಾಪ್ತಿಗೆ ತರುವುದು ನಮ್ಮ ಗುರಿ: ಪ್ರಧಾನಿ ಮೋದಿ

Post cow slaughter ban by Yogi, stray cattle a lurking menace in Sri Krishna land

ಯೋಗಿಯಿಂದ ಗೋ ಹತ್ಯೆ ನಿಷೇಧ: ಶ್ರೀಕೃಷ್ಣ ಭೂಮಿ ಈಗ ಬೀದಿ ದನಗಳು ಸುತ್ತುವ ತಾಣ!

Akshatha-Niveditha Gowda

ಬಿಗ್‍ಬಾಸ್ ಮನೆಯ ಸೊಳ್ಳೆಗಳೆಲ್ಲಾ ಬಲು 'ಸೋಮಾರಿ', ಅಂದು ಕೊನೆಗೆ ನಿವೇದಿತಾ ಗೌಡ ಕಣ್ಣೀರಿಟ್ಟಿದ್ದೇಕೆ?

Mumbai Engineer Released From Pakistan Jail, Returns Home

6 ವರ್ಷಗಳ ನಂತರ ಪಾಕ್‌ ಜೈಲಿನಲ್ಲಿದ್ದ ಮುಂಬೈ ಇಂಜಿನಿಯರ್ ಬಿಡುಗಡೆ

Yash-Puneet Rajkumar

ಯಶ್ ಕೆಜಿಎಫ್ ಚಿತ್ರ ಬಿಡುಗಡೆ ದಿನ ಪುನೀತ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್, ಅದೇನು ಅಂತೀರಾ?

Akhilesh objects to Kamal Nath

ಕಮಲ್ ನಾಥ್ 'ಹೊರಗಿನವರು' ಹೇಳಿಕೆಗೆ ಅಖಿಲೇಶ್ ಯಾದವ್ ಆಕ್ಷೇಪ

At Kamal Nath

ಮಧ್ಯಪ್ರದೇಶ: ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಮುತ್ಸದ್ದಿ ನಡೆಗೆ ಮೆಚ್ಚುಗೆಯ ಮಹಾಪೂರ

Countdown begins for launch of communication satellite GSAT-7A

ಸಂವಹನ ಉಪಗ್ರಹ ಜಿಸ್ಯಾಟ್ -7ಎ ಉಡಾವಣೆಗೆ ಕ್ಷಣಗಣನೆ ಆರಂಭ

ಮುಖಪುಟ >> ವಿಶೇಷ

ಸಾವಿನಲ್ಲೂ ಸಾರ್ಥಕ್ಯ: ದೇಹದಾನದ ಮೂಲಕ ಮಾದರಿಯಾದ ಮಂಗಳೂರು ಬಾಲಕಿ!

Pratheeksha

ಪ್ರತೀಕ್ಷಾ

ಮಂಗಳೂರು: ಬಾಲಕಿಯೊಬ್ಬಳು ತಾನು ಸಾಯುವೆನೆಂದು ತಿಳಿದ ಬಳಿಕ ತನ್ನ ದೇಹದಾನಕ್ಕೆ ಮುಂದಾಗುವ ಮೂಲಕ ಇತರರಿಗೆ ಮಾದರಿಯಾದ ಘಟನೆ ಕರ್ನಾಟಕ ಕರಾವಳಿ ನಗರ ಮಂಗಳೂರಿನಲ್ಲಿ ನಡೆದಿದೆ.

ಪ್ರತೀಕ್ಷಾ (16). ಮಂಗಳೂರು ಅಶೋಕನಗರ ನಿವಾಸಿ ಕುಮಾರಸ್ವಾಮಿ ಕೊಕ್ಕಡ ಮತ್ತು ವಂದನಾ ಕುಮಾರಸ್ವಾಮಿ ಅವರ ಪುತ್ರಿಯಾಗಿದ್ದು ಶಾರದಾ ವಿದ್ಯಾಲಯದಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.

ಆಕೆಗೆ ತನ್ನ ಹತ್ತನೇ ವರ್ಷದಲ್ಲೇ ಮೂಳೆಯ ಕ್ಯಾನ್ಸರ್ ಕಾಣಿಸಿಕೊಂಡಿತ್ತು.ಇದರಿಂದ ಹಾಸಿಗೆ ಹಿಡಿದಿದ್ದ ಬಾಲಕಿ ಕುಟುಂಬದ ಸ್ನೇಹಿತರು, ಶಾಲೆಯ ಉಪಾದ್ಯಾಯರ ಸಹಕಾರದೊಡನೆ ಎರಡು ವರ್ಷದ ಬಳಿಕ ಗುಣಮುಖವಾಗಿದ್ದಳು. ಆದರೆ ಕೆಲವೇ ತಿಂಗಳ ಹಿಂದೆ ಮತ್ತೆ ಈ ಮಾರಕ ರೋಗ ಮರುಕಳಿಸಿತ್ತು. ಖಾಯಿಲೆಯೊಡನೆ ಹೋರಾಡುತ್ತಲೇ ವ್ಯಾಸಂಗ ಮುಂದುವರಿಸಿದ್ದ ಪ್ರತೀಕ್ಷಾ ಗುರುವಾರ (ನವೆಂಬರ್ 01)ರಂದು ಕೊನೆಯುಸಿರೆಳೆದಿದ್ದಾಳೆ.

ಅನಾರೋಗ್ಯದಿಂದ ಶಾಲೆಗೆ ಹಾಜರಾಗಲು ಸಾಧ್ಯವಾಗದ ಪ್ರತೀಕ್ಷಾಗೆ ಶಾಲಾ ಶಿಕ್ಷಕರೇ ಮನೆಗೆ ಆಗಮಿಸಿ ಧೈರ್ಯ ಹೇಳಿದ್ದರು. ಈ ನಡುವೆ ತಾನು ಸಾಯುವುದು ಖಚಿತ ಎನ್ನುವುದು ಬಾಲಕಿಗೆ ಎಂದೋ ತಿಳಿದು ಹೋಗಿತ್ತು.

ಅದೊಂದು ದಿನ ಆಸ್ಪತ್ರೆಯಲ್ಲಿ ತನ್ನ ತಾಯಿಯನ್ನು ಹತ್ತಿರಕ್ಕೆ ಕರೆದ ಪ್ರತೀಕ್ಷಾ "ಒಂದೊಮ್ಮೆ ನನ್ನ ಆತ್ಮ ದೇವರಿಗೆ ಪ್ರಿಯವಾದದ್ದಾದರೆ ನನ್ನ ದೇಹ ಅಂತ್ಯ ಸಂಸ್ಕಾರವನ್ನು ಮಾಡದೆ ಆಸ್ಪತ್ರೆಗೆ ದಾನ ನೀಡಿ" ಎಂದಿದ್ದಾಳೆ. ಇದನ್ನು ಕೇಳಿದ ಆಕೆಯ ತಾಯಿ ದಿಗ್ಭ್ರಮೆಯಿಂದ ಮೂರ್ಛಿತರಾಗಿದ್ದರು. ಆದರೆ ಹೀಗೆ ಹೇಳಿದ್ದ ಎರಡನೇ ದಿನವೇ ಮಗು ಪ್ರತೀಕ್ಷಾ ಸಾವಿಗೀಡಾಗಿದ್ದಾಳೆ.

ಇದೀಗ ಬಾಲಕಿಯ ಕೊನೆಯಾಸೆಯಂತೆಯೇ ಆಕೆಯ ಪೋಷಕರು, ಬಂಧುಗಳು ಬಾಲಕಿಯ ಮೃತದೇಹವನ್ನು ಕೆಎಂಸಿ ಆಸ್ಪತ್ರೆಗೆ ದಾನ ಮಾಡಿದ್ದಾರೆ. 

"ಪ್ರತೀಕ್ಷಾಗೆ ವೈದ್ಯ ವೃತ್ತಿಯು ಬಹಳ ಇಷ್ಟವಾಗಿತ್ತು. ಆಕೆ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದಳು. ಇದಕ್ಕೆ ಸರಿಹೊಂದುವಂತೆ ಆಕೆ ದೇಹದಾನಕ್ಕಾಗಿ ಬೇಡಿಕೆ ಇಟ್ಟಿದ್ದಳೆಂದು ನಾವು ಭಾವಿಸಿದ್ದೇವೆ" ಬಾಲಕಿಯ ಪೋಷಕರು ಹೇಳಿದ್ದಾರೆ.

ಪ್ರತೀಕ್ಷಾ ತನ್ನ ಇಬ್ಬರು ಸೋದರರು ಹಾಗೂ ಅಪಾರ ಬಂಧುಗಳು, ಸ್ನೇಹಿತರನ್ನು ಅಗಲಿದ್ದಾಳೆ. 
Posted by: RHN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Pratheeksha, Mangaluru girl, body donation, ಮಂಗಳೂರು ಹುಡುಗಿ, ದೇಹದಾನ, ಪ್ರತೀಕ್ಷಾ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS