Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Shivakumara Swamiji

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ

Casual Photo

ಇವಿಎಂ ಹ್ಯಾಕ್ ಸಾಧ್ಯವಿಲ್ಲ, ದುರುದ್ದೇಶ ಪೂರಿತ ಆರೋಪದ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ- ಚುನಾವಣಾ ಆಯೋಗ

Arun Jaitly

ಮಹಾಘಟಬಂಧನ್' ಕ್ಷಣಿಕ ರಾಜಕೀಯ ಮೈತ್ರಿ: ಪ್ರತಿಪಕ್ಷಗಳ ಒಗ್ಗಟ್ಟಿನ ವಿರುದ್ಧ ಜೇಟ್ಲಿ ವಾಗ್ದಾಳಿ

ICC Test Rankings: India and Virat Kohli maintain top spot

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ಭಾರತ, ವಿರಾಟ್ ಕೊಹ್ಲಿ

Attempt to murder case registered against Congress MLA who

ಶಾಸಕ ಗಣೇಶ್ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು; ಮುಖಕ್ಕೆ ಹೊಡೆದು, ತಲೆಯನ್ನು ಗೋಡೆಗೆ ಗುದ್ದಿದರು: ಆನಂದ್‌ ಸಿಂಗ್

Shashikala

ಕಾರಾಗೃಹ ನಿಯಮಗಳನ್ನು ಉಲ್ಲಂಘಿಸಿಲ್ಲ- ಶಶಿಕಲಾ ಪರ ವಕೀಲರ ಹೇಳಿಕೆ

ಜೇಕಬ್

ಟೀಂ ಇಂಡಿಯಾ ಮಾಜಿ ಆಟಗಾರ ಜೀವನ್ಮರಣ ಹೋರಾಟ; ಬದುಕಿಸಿಕೊಡಿ ಎಂದು ಪತ್ನಿ ಕಂಬನಿ!

Chief Justice of India Ranjan Gogoi.

ಸಿಬಿಐ ಮಧ್ಯಂತರ ನಿರ್ದೇಶಕರ ನೇಮಕಾತಿ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ರಂಜನ್ ಗೊಗೊಯ್

Aditya Pancholi

ಜೀವ ಬೆದರಿಕೆ ಆರೋಪ: ಬಾಲಿವುಡ್ ನಟ ಆದಿತ್ಯ ಪಂಚೊಲಿ ವಿರುದ್ಧ ಪ್ರಕರಣ ದಾಖಲು

Dr. Shivakumara Swamiji

ಶಿವಕುಮಾರ ಸ್ವಾಮೀಜಿ ಅಂತಿಮ ದರ್ಶನ, ಯಶವಂತಪುರದಿಂದ ತುಮಕೂರಿಗೆ ವಿಶೇಷ ರೈಲು

8 people died after a boat was submerged in sea near Kaewar

ಕಾರವಾರ: ಜಾತ್ರೆ ಮುಗಿಸಿ ಬರುವಾಗ ದೋಣಿ ಮುಳುಗಡೆ, 9 ಮಂದಿ ನೀರುಪಾಲು, ಹಲವರು ನಾಪತ್ತೆ

Anna says Lokpal would have prevented Rafale

ಲೋಕಪಾಲ್ ನೇಮಕವಾಗಿದ್ದರೆ ರಾಫೆಲ್ ಹಗರಣ ತಡೆಯಬಹುದಿತ್ತು: ಅಣ್ಣಾ ಹಜಾರೆ

Thak Thak gang robs, assaults actress Farheen Prabhakar in Delhi

'ಹಳ್ಳಿ ಮೇಷ್ಟ್ರು' ನಟಿಯನ್ನು ದೋಚಿದ ತಕ್ ತಕ್ ಗ್ಯಾಂಗ್!

ಮುಖಪುಟ >> ಅಂತಾರಾಷ್ಟ್ರೀಯ

ಅಧ್ಯಕ್ಷರ ಅಧಿಕಾರಾವಧಿ ಮಿತಿ ತೆಗೆದು ಹಾಕಿದ ಚೀನಾ, ಕ್ಸಿ ಜೀವನ ಪರ್ಯ೦ತ ಅಧಿಕಾರ ಅನುಭವಿಸಲು ಅವಕಾಶ

China president Xi jinping

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್

ಬೀಜಿಂಗ್: ಚೀನಾ ಸರ್ಕಾರ ಭಾನುವಾರ ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ತಂದಿದ್ದು, ದೇಶದಲ್ಲಿ ಅಧ್ಯಕ್ಷೀಯ ಅಧಿಕಾರಾವಧಿ ಮಿತಿ ತೆಗೆದುಹಾಕಿದೆ. ಇದರಿಂದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಗೆದ್ದುಬಂದರೆ ಅನಿರ್ದಿಷ್ಟಾವಧಿಯವರೆಗೆ ಆಳ್ವಿಕೆ ಮಾಡಬಹುದಾಗಿದೆ. ಇಲ್ಲಿಯವರೆಗೆ ದೇಶದಲ್ಲಿ ಅಧ್ಯಕ್ಷರ ಅಧಿಕಾರಾವಧಿಗೆ ಇದ್ದ ಮಿತಿ ಇದರಿಂದ ಕೊನೆಗೊಂಡಂತಾಗಿದೆ.

ಇಲ್ಲಿಯವರೆಗೆ ಚೀನಾದಲ್ಲಿ ಇದ್ದ ನಿಯಮ ಪ್ರಕಾರ ತಲಾ 5 ವರ್ಷಗಳ ಕಾಲ ಎರಡು ಅವಧಿಯವರೆಗೆ ಮಾತ್ರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಧಿಕಾರದಲ್ಲಿ ಇರಲು ಅವಕಾಶವಿದ್ದಿತು. ಆ ಮಿತಿಯನ್ನು ಇದೀಗ ತೆಗೆದುಹಾಕಲಾಗಿದೆ.

ಈ ಮೂಲಕ ಚೀನಾ ನಾಯಕ ಕ್ಸಿ ಜಿನ್ ಪಿಂಗ್, ಅಧ್ಯಕ್ಷರ ಅಧಿಕಾರಾವಧಿ ಮಿತಿಯನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ  ಚುನಾವಣೆಯಲ್ಲಿ ಗೆದ್ದುಬಂದರೆ ಹಲವಾರು ವರ್ಷ ಅವರು ಅಧಿಕಾರದಲ್ಲಿ ಉಳಿಯಬಹುದಾಗಿದೆ.

ಚೀನಾದ ಅತ್ಯಂತ ವಿವಾದಿತ ಸಾಂವಿಧಾನಿಕ ತಿದ್ದುಪಡಿಗೆ, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ನ ಸುಮಾರು 3,000 ಜನಪ್ರತಿನಿಧಿಗಳು ಅನುಮೋದಿಸಿದರು. ಅನಿರ್ದಿಷ್ಟಾವಧಿಯವರೆಗೆ ಅಧ್ಯಕ್ಷೀಯ ಆಳ್ವಿಕೆ ಅವಧಿಯ ಪರ 2,958 ಸಂಸದರು ಮತ ಚಲಾಯಿಸಿದರೆ ಇಬ್ಬರು ವಿರೋಧಿಸಿದರು. ಮೂರು ಮತಗಳು ವಜಾಗೊಂಡಿದ್ದು ಇನ್ನೊಂದು ಮತ  ಅಮಾನ್ಯಗೊಂಡಿತು.

ಇಂದು ಅಪರಾಹ್ನ ಚೀನಾದ ಟಿಯಾನಮೆನ್ ಸ್ಕ್ವಾರ್ ನಲ್ಲಿ ನಡೆದ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರಕ್ಕೆ ಬರಲಾಯಿತು. ಕುಳಿತಿದ್ದ ಶಾಸಕರಿಂದ 20 ಸೆಕೆಂಡಿಗೂ ಹೆಚ್ಚು ಕಾಲ ಭಾರೀ ಕರತಾಡನ ಕೇಳಿಬಂತು.

ಇದೇ  ರೀತಿಯ ಮತ ಚಲಾವಣೆ ಮೂಲಕ ಕ್ಸಿ ಜಿನ್ ಪಿಂಗ್ ಅವರ ಸರ್ವಾಧಿಕಾರವನ್ನು ಕೂಡ ಒಪ್ಪಿಕೊಳ್ಳಲಾಯಿತು. ಚೀನಾವನ್ನು ಮತ್ತೆ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿಸಲು ಕ್ಸಿ ಅವರಿಗೆ ಕೈಜೋಡಿಸಲು ಮತ್ತೊಂದು ಸಮಯವಾಗಿದೆ ಎಂದು ಸಂಸತ್ತಿನ ಅಧ್ಯಕ್ಷ ಜಾಂಗ್ ದೆಜಿಯಾಂಗ್ ಹೇಳಿದರು.

ಚೀನಾದ ಮಾಜಿ ನಾಯಕ ಡೆಂಗ್ ಕ್ಸಿಯಾಪಿಂಗ್ 1982ರಲ್ಲಿ ಜಾರಿಗೆ ತಂದಿದ್ದ ವ್ಯವಸ್ಥೆಯನ್ನು ಇಂದಿನ ಕಾನೂನು ಬದಲಾಯಿಸಿದ್ದು 1966ರಿಂದ 1976ರವರೆಗೆ ದೇಶ ಕಂಡಿದ್ದ ರಕ್ತಸಿಕ್ತ ಸರ್ವಾಧಿಕಾರದಂತಹ ಆಡಳಿತವನ್ನು ತಡೆಯಲಿದೆ.

ಕ್ಸಿ ಜಿನ್ ಪಿಂಗ್ ಆಡಳಿತದಡಿಯಲ್ಲಿ ಆರ್ಥಿಕ ನಿಯಂತ್ರಣ ಹೆಚ್ಚು ಸ್ಥಿರವಾಗಿಸಬಹುದು ಎಂಬುದು ಜನನಾಯಕರ ಅಭಿಪ್ರಾಯವಾಗಿದೆ.

64 ವರ್ಷದ ಕ್ಸಿ ಜಿನ್ ಪಿಂಗ್ ಅವರ ಮೊದಲ  5ವರ್ಷದ ಅಧಿಕಾರಾವಧಿ ಈ ತಿಂಗಳಿಗೆ ಮುಕ್ತಾಯವಾಗಿದೆ. ಇದೀಗ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ ಮತ್ತು ಮಿಲಿಟರಿಯ ಅತ್ಯಂತ ಪ್ರಭಾವಿ ನಾಯಕನಾಗಿರುವ ಕ್ಸಿ ಜಿನ್ ಪಿಂಗ್ ಪಕ್ಷದ ಸ್ಥಾಪಕ ಮಾವೋ ಝೆಡಾಂಗ್ ನಂತರ ಅತಿ ಹೆಚ್ಚು ಅವಧಿಯವರೆಗೆ ಅಧಿಕಾರದಲ್ಲಿರುವ ನಾಯಕರಾಗಿದ್ದಾರೆ.

ಚೀನಾ ಸರ್ಕಾರದ ರಬ್ಬರ್ ಸ್ಟಾಂಪ್ ಎಂದು ಕರೆಯಲ್ಪಡುವ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್ ನ ಸದಸ್ಯರು ವಿದ್ಯುನ್ಮಾನ ಮತ ಚಲಾವಣೆ ಮತ್ತು ಕೈ ಎತ್ತಿ ಮತ ಹಾಕುವ ಬದಲು ಪೇಪರ್ ಬ್ಯಾಲೆಟ್ ಸಿಸ್ಟಂನ್ನು ಆಯ್ಕೆಮಾಡಿಕೊಂಡರು. ಬ್ಯಾಲೆಟ್ ನಲ್ಲಿ ಒಪ್ಪಿಗೆ, ವಿರೋಧ ಮತ್ತು ಷರತ್ತುಗಳನ್ನು ದೂರವಿಡಿ ಎಂಬ ಮೂರು ಆಯ್ಕೆಗಳಿವೆ.

ಚೀನಾದಲ್ಲಿ ಮೊದಲ ಸಂವಿಧಾನ 1954ರಲ್ಲಿ ಜಾರಿಗೆ ಬಂದಿತು. ಈಗಿರುವ ಸಂವಿಧಾನ 1982ರಿಂದ ಜಾರಿಯಲ್ಲಿದ್ದು 1988,1993, 1999 ಮತ್ತು 2004ರಲ್ಲಿ ತಿದ್ದುಪಡಿ ಕಂಡಿದೆ.

Posted by: SUD | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : China, President rule, Xi jinping, ಚೀನಾ, ಅಧ್ಯಕ್ಷಾವಧಿ, ಕ್ಸಿ ಜಿನ್ ಪಿಂಗ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS