Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Union Cabinet meeting today; dissolution of 16th LS to be recommended

ಇಂದು ಸಂಜೆ ಕೇಂದ್ರ ಸಂಪುಟ ಸಭೆ, 16ನೇ ಲೋಕಸಭೆ ವಿಸರ್ಜನೆಗೆ ಶಿಫಾರಸು

Rahul Gandhi

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಳೆ ರಾಹುಲ್ ಗಾಂಧಿ ರಾಜಿನಾಮೆ?

ವಿರಾಟ್ ಕೊಹ್ಲಿ-ಸರ್ಫರಾಜ್ ಖಾನ್

ವಿಶ್ವಕಪ್ ಮಹಾಸಮರದಲ್ಲಿ ಟೀಂ ಇಂಡಿಯಾ-ಪಾಕ್ ಹೈ ವೋಲ್ಟೇಜ್ ಕದನದ ಬಗ್ಗೆ ಕೊಹ್ಲಿ ಹೇಳಿದ್ದೇನು?

Common Entrance Test 2019 results for Karnataka to be declared on Saturday

2019ನೇ ಸಾಲಿನ ಸಿಇಟಿ ಫಲಿತಾಂಶ ನಾಳೆ ಪ್ರಕಟ

ಸಂಗ್ರಹ ಚಿತ್ರ

ಮಂಡ್ಯದಲ್ಲಿ ಭೀಕರ ಅಪಘಾತ: ಲಾರಿಗೆ ಕಾರು ಡಿಕ್ಕಿ, ಕೇರಳದ ನಾಲ್ವರು ದುರ್ಮರಣ

Supreme Court

ಸುಪ್ರೀಂಕೋರ್ಟ್‌ನ ನಾಲ್ವರು ಹೊಸ ನ್ಯಾಯಮೂರ್ತಿಗಳ ಪ್ರಮಾಣ ವಚನ

I wanted take an indefinite break from cricket after World T20 controversy, reveals Harmanpreet Kaur

ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದೆ: ಹರ್ಮನ್‌ಪ್ರೀತ್‌ ಕೌರ್‌

Bengaluru: Man ends life over harassment by wife

ಬೆಂಗಳೂರು: ಪತ್ನಿಯ ಕಾಟ ತಡೆಯಲಾರದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Kedar Jadhav

ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ ಕೇದಾರ್ ಜಾದವ್ ನಿರ್ಣಾಯಕ ಪಾತ್ರ!

Women show their voter identity cards as they stand in a queue at a polling station.

2019ರ ಲೋಕಸಭೆ ಚುನಾವಣೆ ಕುರಿತು ನ್ಯಾಷನಲ್ ಜಿಯೊಗ್ರಫಿ ಚಾನೆಲ್ ನಿಂದ ಸಾಕ್ಷ್ಯಚಿತ್ರ

Suniel Shetty

ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ರಗಡ್ ಲುಕ್!

HK Patil

ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಮೊದಲ ವಿಕೆಟ್ ಪತನ: ಎಚ್.ಕೆ ಪಾಟೀಲ್ ರಾಜಿನಾಮೆ

Ramya-Shilpa Ganesh

ರಮ್ಯಾ ಎಲ್ಲಿದಿಯಮ್ಮಾ? ನಟಿ ಕಮ್ ರಾಜಕಾರಣಿ ಕಾಲೆಳೆದ ಶಿಲ್ಪಾ ಗಣೇಶ್!

ಮುಖಪುಟ >> ಅಂತಾರಾಷ್ಟ್ರೀಯ

ದೇಹದ ಅಂಗಾಂಗಗಳು ವಿರುದ್ಧ ದಿಕ್ಕಿನಲ್ಲಿದ್ದೂ 99 ವರ್ಷ ಬಾಳಿದ ಮಹಿಳೆ

Rose Marie Bentley

ರೋಸ್ ಮೇರಿ ಬೆಂಥ್ಲೆ

ಸೇಲಂ: ಈಕೆ ರೋಸ್ ಮೇರಿ ಬೆಂಥ್ಲೆ, ಈಜುಗಾರ್ತಿ, ಐದು ಮಕ್ಕಳ ಬೆಳೆಸಿದ ತಾಯಿ, ಈಕೆಯ ಪತಿ ನಡೆಸುವ ಜಾನುವಾರುಗಳ ಆಹಾರದ ಮಾರಾಟ ಅಂಗಡಿ (ಫೀಡ್ ಸ್ಟೋರ್) ನಲ್ಲಿ ಸಹ ಅವರಿಗೆ ಸಹಾಯ ಮಾಡುತ್ತಿದ್ದರು. ಕಡೆಗೆ ಅವರು ಸಾಯುವಾಗ ಇವರ ವಯಸ್ಸು ಕೇವಲ 99 ಮಾತ್ರ.  ಇದಷ್ಟೇ ಆಗಿದ್ದರೆ ಅಂತಹದೇನೂ ವಿಶೇಷವಿರಲಿಲ್ಲ. ಆದರೆ ಆಕೆ ಸಾವನ್ನಪ್ಪಿದ ಬಳಿಕ ತಿಳಿದು ಬಂದ ವಿಚಾರವೆಂದರೆ ಆಕೆಯ ದೇಹದ ಒಳಭಾಗದಲ್ಲಿದ್ದ ಅಂಗಗಳೆಲ್ಲವೂ (ಹೃದಯ ಹೊರತಾಗಿ) ತಪ್ಪಾದ ಸ್ಥಳದಲ್ಲಿ ನೆಲೆಯಾಗಿದ್ದವ. ಈ ವಾರ ನಡೆದಿದ್ದ ದೇಹರಚನೆಕ್ರರ ಸಮ್ಮೇಳನ (ಅನಾಟೋಮಿಸ್ಟ್ಸ್ ಕಾನ್ಫರೆನ್ಸ್) ನಲ್ಲಿ ವೃದ್ದ ಮಹಿಳೆಯ ದೇಹದಲ್ಲಿನ ಈ ಕೌತುಕದ ಕುರಿತು ವದರಿ ಮಂಡಿಸಲಾಗಿದೆ. ದೇಹದ ಎಲ್ಲಾ ಒಳಭಾಗದಲ್ಲಿರುವ ಅಂಗಗಳು ತಪ್ಪಾದ ಸ್ಥಾನದಲ್ಲಿದ್ದೂ ಸಹ ಆಕೆ ದೀರ್ಘಕಾಲ ಬದುಕಿದ್ದದ್ದು ಅಚ್ಚರಿದಾಯಕವಾಗಿದೆ ಎಂದು ಸಮಾವೇಶದಲ್ಲಿ ಅಭಿಪ್ರಾಯಪಡಲಾಗಿದೆ.

ಒರೆಗಾನ್ ಹೆಲ್ತ್ ಆಂಡ್ ಸೈನ್ಸ್ ಯೂನಿವರ್ಸಿಟಿ ಪ್ರಕಾರ, ಲೆವೊಕಾರ್ಡಿಯಾ ಎಂದು ಕರೆಯಲಾಗುವ ಸ್ಥಿತಿಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ಮಾರಣಾಂತಿಕ ಹೃದಯದ ಕಾಯಿಲೆಗಳು ಮತ್ತು ಇತರ ಅಸಹಜತೆಯಿಂದ ಬಳಲುತ್ತಿರುತ್ತಾರೆ.

ಪೋರ್ಟ್ ಲ್ಯಾಂಡ್ ವಿವಿನಲ್ಲಿ ಕಳೆದ ವರ್ಷ ಕ್ಯಾಮೆರಾನ್ ವಾಕರ್ಸ್ ಶವವೊಂದರ ಪರಿಶೀಲನೆ ನಡೆಸುವಾಗ ರಕ್ತನಾಳಗಳು ಭಿನ್ನವಾಗಿರುವುದನ್ನು ಗಮನಿಸಿ ಹೃದಯದ ಪರೀಕ್ಷೆ ನಡೆಸಿದ್ದಾರೆ. ಆದರೆ ಶವದ ಕಿಬ್ಬೊಟ್ಟೆಯ ಭಾಗ ತೆರೆದಾಗ , ಎಲ್ಲ ಅಂಗಗಳು ತಪ್ಪು ಭಾಗದಲ್ಲಿ ನೆಲೆಯಾಗಿರುವುದು ಕಂಡಿದೆ. ಆದರೆ ಅಸಹಜವಾಗಿ ನೆಲೆಯಾಇದ್ದ ರಕ್ತನಾಳಗಳು ಸಹ ಹೃದಯಕ್ಕೆ ರಕ್ತ ಪಂಪ್ ಆಗುವುದಕ್ಕೆ ಅನುಕೂಲ ಕಲ್ಪಿಸಿದ್ದವು.

ಮಂಗಳವಾರ ದೂರವಾಣಿಯ ಮೂಲಕ ಸಂಬಾಷಿಸಿದ ವಾಕರ್ "ಖಂಡಿತವಾಗಿಯೂ ಕುತೂಹಲ ಮೂಡಿಸಬಲ್ಲ ವರದಿ, " ವೈದ್ಯಕೀಯ ವಿಸ್ಮಯ" ಎಂದು ಹೇಳಿದ್ದಾರೆ. ಅಂಗರಚನಾಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ವಾಕರ್ ಹೇಳಿದಂತೆ ಅವರಿಗೆ ರೋಸ್ ಮೇರಿ ಅವರ ಕುಟುಂಬದ ಬಗ್ಗೆ ತಿಳಿದಿಲ್ಲ, ಆದರೆ  ಪ್ರತಿ 22,000 ಜನನದ ನಂತರ ಮಾತ್ರ ಇಂತಹಾ ಅಸಹಜ ಶಿಶುವೊಂದು ಜನ್ಮಿಸುತ್ತದೆ ಎಂದು ಒರೆಗಾನ್ ಹೆಲ್ತ್ ಆಂಡ್ ಸೈನ್ಸ್ ಯೂನಿವರ್ಸಿಟಿ ಹೇಳುತ್ತದೆ ಎನ್ನುತ್ತಾರೆ.

ಆದರೆ ರೋಸ್ ಮೇರಿ ತಾವು ಸಹಜವಾದ ಜೀವನವನ್ನೇ ಅನುಭವಿಸಿದ್ದರು. ಆಕೆ ಏಕೈಕ ತೊಂದರೆ ಎಂದರೆ ಸಂಧಿವಾತವಾಗಿತ್ತು. ಅದು ಆಗಾಗ ಮರುಕಳಿಸುತ್ತಿತ್ತು ಎಂದು ಅವಳ ಮಗಳು ಲೂಯೀಸ್ ಐಲೀ ಹೇಳಿದ್ದಾರೆ. ಇನ್ನು ರೋಸ್ ಮೇರಿ ಐವತ್ತನೇ ವಯಸ್ಸಿನವರಾಗಿದ್ದ ವೇಳೆ ಅಪೆಂಡಿಕ್ಸ್ ನೋವಿಗೆ ತುತ್ತಾಗಿದ್ದರು. ಆಗ ವೈದ್ಯರು ಅಪೆಂಡಿಕ್ಸ್ ಗಡ್ಡೆ ತೆಗೆಯಲು ನಿರ್ಧರಿಸಿದ್ದರು. ಆದರೆ ಗಡ್ಡೆಯ ಪತ್ತೆ ಅವರಿಗೆ ಸಾಧ್ಯವಾಗಿಲ್ಲ.ಇನ್ನು ಪಿತ್ತಕೋಶ ಶಸ್ತ್ರಚಿಕಿತ್ಸೆ ನಡೆದು ಅದನ್ನು ತೆಗೆದು ಹಾಕುವ ವೇಳೆಗೆ ಸಹ ಪಿತ್ತಕೋಶ ಸಾಮಾನ್ಯವಾಗಿ ದೇಹದ ಯಾವ ಭಾಗದಲ್ಲಿರುವುದು ಆ ಭಾಗದಲ್ಲಿರದೆ ವಿರುದ್ಧ ದಿಕಿನಲ್ಲಿತ್ತು.

ರೋಸ್ ಮೇರಿ ದೇಹವನ್ನು ಒಎಚ್ ಎಸ್ ಯು ಗೆ ದಾನ ಮಾಡಲು ಅವರ ಕುಟುಂಬವು ಒಪ್ಪಿದೆ.ಭವಿಷ್ಯದ ವೈದ್ಯರು ತಮ್ಮ ಭವಿಷ್ಯದ ರೋಗಿಗಳನ್ನು ವ್ಯಕ್ತಿಗಳಂತೆ ಸಂಬೋಧಿಸುವ ದೃಷ್ಟಿಯಿಂದ, ದೊಡ್ಡ ಅಂಗರಚನಾ ಬದಲಾವಣೆ ಮಾತ್ರವಲ್ಲದೆ ಸೂಕ್ಷ್ಮ ಅಂಗರಚನಾ ಬದಲಾವಣೆಗಳಿಗೆ  ಸಹ ಮನ ಕೊಡುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಲು ಇದು ನಮಗೆ ಒಂದು ಅವಕಾಶವನ್ನು ನೀಡಿತು" ಎಂದು ವಾಕರ್ ಹೇಳಿದ್ದಾರೆ. ಇನ್ನು ಇಂತಹಾ ಸ್ಥಿಯ್ತಿಯಲ್ಲಿರುವ ಜನರು  ಎಷ್ಟು ಕಾಲ ಬದುಕಿದ್ದಾರೆಂದು ಅವರು ಸಂಶೋಧಿಸಿದ್ದಾರೆ,  ಅದರ ಪ್ರಕಾರ ಒಬ್ಬ ವ್ಯಕ್ತಿ ಗರಿಷ್ಟ 73  ವರ್ಷ ಬದುಕಿರುವುದು ಇದುವರೆಗಿನ ದಾಖಲೆಯಾಗಿತ್ತು. ಆದರೆ ರೋಸ್ ಮೇರಿ ಇದಕ್ಕೆ 26 ವರ್ಷ ಹೆಚ್ಚು ಕಾಲ ಬದುಕಿದ್ದಾರೆ.ಆಕೆಯ ಪತಿ, ಜೇಮ್ಸ್, ಸುಮಾರು 15 ವರ್ಷಗಳ ಹಿಂದೆ ನಿಧನರಾದರು.
Posted by: RHN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Rose Marie Bentley, Oregon, ರೋಸ್ ಮೇರಿ ಬೆಂಥ್ಲೆ, ಅಂಗಾಂಗಗಳು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS